ಮುಂಬೈ: Pornography Video Case - ಖ್ಯಾತ ಬಾಲಿವುಡ್ (Bollywood) ನಟಿ ಶಿಲ್ಪಾ ಶೆಟ್ಟಿ (Shilpa Shetty) ಅವರ ಪತಿ ಹಾಗೂ ಉದ್ಯಮಿ ರಾಜ್ ಕುಂದ್ರಾ (Raj Kundra) ಪೋರ್ನೋಗ್ರಾಫಿ ವಿಡಿಯೋ ಪ್ರಕರಣದಲ್ಲಿ (Pornography Video Case) ಭಾರಿ ಸುದ್ದಿಯಲ್ಲಿದ್ದಾರೆ. ಜುಲೈ 19ರಂದು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ರಾಜ್ ಕುಂದ್ರಾ ಅವರನ್ನು ಬಂದಿಸಿದ್ದಾರೆ. ಪತಿಯ ಬಂಧನದ ಬಳಿಕ ಇದೇ ಮೊದಲ ಬಾರಿಗೆ ಶಿಲ್ಪಾ ಶೆಟ್ಟಿ ಮೌನ ಮುರಿದಿದ್ದು, ಇದಕ್ಕಾಗಿ ಅವರು ಸಾಮಾಜಿಕ ಮಾಧ್ಯಮದ (Social Media) ನೆರವು ಪಡೆದುಕೊಂಡಿದ್ದಾರೆ. ಈ ಕುರಿತು ತಮ್ಮ ಭಾವನೆಗಳನ್ನು ಹೊರಹಾಕಲು ಶಿಲ್ಪಿ ಪುಸ್ತಕವೊಂದರ ಪುಟವನ್ನು ಹಂಚಿಕೊಂಡಿದ್ದಾರೆ ಮತ್ತು ಜೀವನದಲ್ಲಿ ಬರುವ ಪ್ರತಿಯೊಂದು ಸವಾಲಿಗೆ ತಾವು ಸಿದ್ಧರಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಪತಿ ರಾಜ್ ಕುಂದ್ರಾ ಬಂಧನದ ಬಳಿಕ ಶಿಲ್ಪಾ ಸಾಮಾಜಿಕ ಮಾಧ್ಯಮದಿಂದ ಅಂತರ ಕಾಯ್ದುಕೊಂಡಿದ್ದರು. ಆದರೆ, ಗುರುವಾರ ಅಂದರೆ ಜುಲೈ 22ರ ರಾತ್ರಿ ಅವರು ತಮ್ಮ ಇನ್ಸ್ಟಾಸ್ಟೋರಿ ಮಾಧ್ಯಮದ ಮೂಲಕ ಪುಸ್ತಕವೊಂದರ ಎರಡು ಪುಟಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಪುಟವೊಂದರ ಆರಂಭದಲ್ಲಿ ಖ್ಯಾತ ಅಮೆರಿಕಾದ ಬರಹಗಾರ ಜೇಮ್ಸ್ ಥರ್ಬರ್ (James Thurber) ಅವರ ಒಂದು ಕೋಟ್ ಬರೆಯಲಾಗಿದ್ದು, ಕೊಟ್ ನಲ್ಲಿ "Do not look back in anger, or forward in fear, but around in awarness" ಎಂದು ಬರೆಯಲಾಗಿದೆ. ಅಂದರೆ, "ಕೋಪದಲ್ಲಿ ಹಿಂದಿರುಗಿ ನೋಡಬೇಡ, ಹೆದರಿಕೆಯಲ್ಲಿ ಮುಂದೆ ನೋಡಬೇಡ, ಆದರೆ, ಜಾಗ್ರತೆಯಿಂದ ಸುತ್ತಮುತ್ತಲು ನೋಡು (Looking Around)" ಎಂದರ್ಥ.
ಈ ಪುಸ್ತಕದ ಪುಟಗಳಲ್ಲಿ 'ನಾವು ಕೋಪದಿಂದ ಹಿಂತಿರುಗಿ ನೋಡುತ್ತೇವೆ ಮತ್ತು ನಮ್ಮನ್ನು ನೋಯಿಸಿದವರನ್ನು ನೆನಪಿಸಿಕೊಳ್ಳುತ್ತೇವೆ. ನಮಗೆ ದೊರೆತ ನಿರಾಶೆಗಳು ಮತ್ತು ನಾವು ಅನುಭವಿಸಿದ ದುರದೃಷ್ಟಗಳ ಹಿನ್ನೆಲೆ ನಮ್ಮ ಉದ್ಯೋಗಗಳನ್ನು ಕಳೆದುಕೊಳ್ಳಬಹುದು, ಅನಾರೋಗ್ಯಕ್ಕೆ ಸಿಲುಕಬಹುದು ಅಥವಾ ಪ್ರೀತಿಪಾತ್ರರ ಸಾವಿನಿಂದ ದುಃಖಿತರಾಗಬಹುದು ಎಂಬ ಭಯದಿಂದ ನಾವು ಬದುಕುತ್ತೇವೆ. ಆದರೆ ನಾವು ಇರಬೇಕಾದ ಸ್ಥಳ ಇಲ್ಲಿಯೇ ಇದೆ. ಈಗ ಏನು ಅಥವಾ ಏನಾಗಿರಬಹುದು, ಅದನ್ನು ತೀವ್ರವಾಗಿ ನೋಡುತ್ತಿಲ್ಲ, ಆದರೆ ಏನೆಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿದಿದೆ. ' ಎನ್ನಲಾಗಿದೆ.
ಅಷ್ಟೇ ಅಲ್ಲ ಪುಸ್ತಕದಲ್ಲಿ " ನಾನು ಜೀವದಿಂದ ಇರಲು ಅದೃಷ್ಟಶಾಲಿ ಎಂದು ಭಾವಿಸಿ ಆಳವಾದ ಉಸಿರನ್ನು ತೆಗೆದುಕೊಳ್ಳುತ್ತೇನೆ. ನಾನು ಈ ಹಿಂದೆಯೂ ಸವಾಲುಗಳನ್ನು ಎದುರಿಸಿದ್ದೇನೆ. ಭವಿಷ್ಯದಲ್ಲಿಯೂ ಕೂಡ ಸವಾಲುಗಳನ್ನು ತಪ್ಪಿಸುತ್ತೇನೆ. ಆದರೆ, ಇಂದು ನಾನು ನನ್ನ ಬದುಕು ವಿಚಲಿತಗೊಳಿಸುವ ಅವಶ್ಯಕತೆ ಇಲ್ಲ' ಎಂದೂ ಕೂಡ ಬರೆಯಲಾಗಿದೆ.
ಇದನ್ನೂ ಓದಿ- ಉದ್ಯಮಿ ರಾಜ್ ಕುಂದ್ರಾಗೆ ಹೆಚ್ಚಿದ ಸಂಕಷ್ಟ , ಉಮೇಶ್ ಕಾಮತ್ ಜೊತೆ ನಡೆಸಿದ ವ್ಯವಹಾರಗಳ ಸಾಕ್ಷಿ ಲಭ್ಯ
ಶಿಲ್ಪಾ ಶೆಟ್ಟಿ ಹಂಚಿಕೊಂಡಿರುವ ಈ ಪೋಸ್ಟ್ ಪ್ರಕಾರ, ಶಿಲ್ಪಾ (Shilpa Shetty) ಭವಿಷ್ಯದಲ್ಲಿ ಎದುರಾಗಲಿರುವ ಸವಾಲುಗಳಿಗಾಗಿ ಅವರು ಸಿದ್ಧರಾಗಿದ್ದಾರೆ ಹಾಗೂ ದೃಢತೆಯಿಂದ ಅವರು ಅವುಗಳನ್ನು ಎದುರಿಸಲಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.
ಇದನ್ನೂ ಓದಿ-ನಟಿ ಪ್ರಿಯಾಮಣಿಗೆ ಸುಳ್ಳು ಹೇಳಿ ಮದುವೆಯಾದರೆ ಮುಸ್ತಾಪಾ ?
ಈ ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಲಯ ರಾಜ್ ಕುಂದ್ರಾ ಅವರನ್ನು ಜುಲೈ 23 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಇಂದು ಆ ಅವಧಿ ಮುಕ್ತಾಯಗೊಳ್ಳುತ್ತಿದೆ. ಮುಂದೆ ಏನಾಗಲಿದೆ ಎಂಬುದರ ಮೇಲೆ ಇದೀಗ ಜನರ ದೃಷ್ಟಿ ನೆಟ್ಟಿದೆ. ಅವರು ಇಂದು ಜಾಮೀನು ಪಡೆಯಲು ಸಾಧ್ಯವಾಗುತ್ತದೆಯೇ ಅಥವಾ ಅವರ ನ್ಯಾಯಾಂಗ ಬಂಧನವನ್ನು ಮತ್ತಷ್ಟು ವಿಸ್ತರಿಸಲಾಗುವುದು ಎಂಬುದನ್ನು ಕಾದುನೋಡಬೇಕು.
ಇದನ್ನೂ ಓದಿ-ದುಬೈನಲ್ಲಿ ಪತ್ನಿ, 17 ವರ್ಷದ ಪುತ್ರಿ ಇದ್ದಾಳೆಂಬ ಆರೋಪಕ್ಕೆ ಸಲ್ಮಾನ್ ಖಾನ್ ಗರಂ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ