Adipurush : ಪ್ರಭಾಸ್‌ ʼಆದಿಪುರುಷʼ ಚಿತ್ರದ ʼಜೈ ಶ್ರೀರಾಮ್‌ʼ ಲಿರಿಕಲ್ ಮೋಷನ್ ಪೋಸ್ಟರ್ ರಿಲೀಸ್‌..!

Adipurush Lyrical Motion Poster : ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಆದಿಪುರುಷ ಚಿತ್ರದ ಪ್ರಚಾರ ಮಾಡಲಾಗುತ್ತಿದೆ. ಇಂದು ಚಿತ್ರದ ಜೈ ಶ್ರೀರಾಮ್.. ಎಂಬ ಲಿರಿಕಲ್‌ ಸಾಂಗ್‌ನ್ನು ಬಿಡುಗಡೆಯಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿದ್ದ ಟೀಸರ್‌ಗೆ ಟೀಕೆ ವ್ಯಕ್ತವಾಗಿತ್ತು. ಅದರಲ್ಲೂ ಸಿನಿಮಾದಲ್ಲಿ ಗ್ರಾಫಿಕ್ಸ್ ತುಂಬಾ ಕಳಪೆಯಾಗಿದೆ ಎಂದು ಟ್ರೋಲ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು. 

Written by - Krishna N K | Last Updated : Apr 22, 2023, 11:53 AM IST
  • ಪ್ರಭಾಸ್ ನಟಿಸಿರುವ ಓಂ ರಾವುತ್ ನಿರ್ದೇಶನದ ʼಆದಿಪುರುಷʼ ಚಿತ್ರ.
  • ಚಿತ್ರದ ಲಿರಿಕಲ್ ಮೋಷನ್ ಪೋಸ್ಟರ್ ರಿಲೀಸ್‌ ಮಾಡಿದ ಚಿತ್ರತಂಡ.
  • ʼಆದಿಪುರುಷʼ ಚಿತ್ರ ಜೂನ್ 16 ರಂದು ತೆರೆಗೆ ಬರಲಿದೆ.
Adipurush : ಪ್ರಭಾಸ್‌ ʼಆದಿಪುರುಷʼ ಚಿತ್ರದ ʼಜೈ ಶ್ರೀರಾಮ್‌ʼ ಲಿರಿಕಲ್ ಮೋಷನ್ ಪೋಸ್ಟರ್ ರಿಲೀಸ್‌..! title=

Adipurush motion poster : ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ನಟಿಸಿರುವ ಓಂ ರಾವುತ್ ನಿರ್ದೇಶನದ ʼಆದಿಪುರುಷʼ ಚಿತ್ರ ಜೂನ್ 16 ರಂದು ತೆರೆಗೆ ಬರಲಿದೆ. ಕಳಪೆ ಗ್ರಾಫಿಕ್ಸ್‌ ಅಂತ ಟ್ರೋಲ್‌ ಆದ ಹಿನ್ನೆಲೆ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿತ್ತು. ಇದೀಗ ಜೂನ್‌ ತಿಂಗಳಲ್ಲಿ ಸಿನಿಮಾ ರಿಲೀಸ್‌ ಮಾಡಲು ಚಿತ್ರತಂಡ ಸಿದ್ಧವಾಗಿದೆ. ಇದರ ಬೆನ್ನಲ್ಲೆ, ಇಂದು ಚಿತ್ರದ ಜೈ ಶ್ರೀರಾಮ್‌ ಎಂಬ ಲಿರಿಕಲ್‌ ಮೋಷನ್‌ ಪೋಸ್ಟರ್‌ ರಿಲೀಸ್‌ ಮಾಡಿ ಪ್ಯಾನ್ಸ್‌ಗೆ ಅಕ್ಷಯ ತೃತೀಯ ಗಿಫ್ಟ್‌ ನೀಡಿದ್ದಾರೆ.

ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಆದಿಪುರುಷ ಚಿತ್ರದ ಪ್ರಚಾರ ಮಾಡಲಾಗುತ್ತಿದೆ. ಇಂದು ಚಿತ್ರದ ಜೈ ಶ್ರೀರಾಮ್.. ಎಂಬ ಲಿರಿಕಲ್‌ ಸಾಂಗ್‌ನ್ನು ಬಿಡುಗಡೆಯಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿದ್ದ ಟೀಸರ್‌ಗೆ ಟೀಕೆ ವ್ಯಕ್ತವಾಗಿತ್ತು. ಅದರಲ್ಲೂ ಸಿನಿಮಾದಲ್ಲಿ ಗ್ರಾಫಿಕ್ಸ್ ತುಂಬಾ ಕಳಪೆಯಾಗಿದೆ ಎಂದು ಟ್ರೋಲ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು. ಬಿಗ್‌ ಬಜೆಟ್‌ ಸಿನಿಮಾದ ಗ್ರಾಫಿಕ್ಸ್‌ ಟಿವಿ ಸೀರಿಯಲ್‌ ಗ್ರಾಫಿಕ್ಸ್‌ನಂತಿವೆ ಎಂಬ ಟೀಕೆಗಳು ವ್ಯಕ್ತವಾಗಿದ್ದವು.

 

ಇದನ್ನೂ ಓದಿ: Avinash-Malavika: ಮಗ ದೇವರ ಕೊಡುಗೆಯಲ್ಲ, ಅವನೇ ದೇವರು -ಅವಿನಾಶ್ ಮಾಳವಿಕಾ

ಇದೀಗ ಗ್ರಾಫಿಕ್ಸ್‌ಗೆ ಹೆಚ್ಚು ಸಮಯ ತೆಗೆದುಕೊಂಡು ವಿಶುವಲ್‌ಗಳನ್ನು ವಂಡರ್‌ಫುಲ್‌ ಆಗಿ ಮಾಡಿದ್ದೇವೆ ಎಂದು ನಿರ್ಮಾಪಕರು ಹೇಳಿಕೊಂಡಿದ್ದಾರೆ. ಜಸ್ಟ್‌ ಸಾಂಗ್‌ನ ಬಿಟ್‌ ರಿಲೀಸ್‌ ಆದ್ರೂ ಸಹ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಹರಿರಾಮ ಜೋಗಯ್ಯ ಶಾಸ್ತ್ರಿ ಅವರ ಸಾಹಿತ್ಯ ಮತ್ತು ಅಜಯ್ - ಅತುಲ್ ಅವರ ಸಂಗೀತ ಈ ಹಾಡಿಗಿದೆ. ಆದಿಪುರುಷ ಸಿನಿಮಾದಲ್ಲಿ ಸಂಗೀತ ಮತ್ತು ಸಾಹಿತ್ಯ ಎಷ್ಟು ಅದ್ಭುತವಾಗಿದೆ ಎಂಬುದಕ್ಕೆ ಇದು ಒಂದು ಹಾಡು ಸಣ್ಣ ಉದಾಹರಣೆಯಷ್ಟೇ ಎಂದು ನಿರ್ಮಾಪಕರು ಹೇಳಿಕೊಂಡಿದ್ದಾರೆ.

ಇನ್ನು ಆದಿಪುರುಷ ಸಿನಿಮಾದಲ್ಲಿ, ಪ್ರಭಾಸ್ ರಾಮನ ಪಾತ್ರದಲ್ಲಿ ನಟಿಸಿದ್ದು, ಬಾಲಿವುಡ್ ನಾಯಕಿ ಕೃತಿ ಸನೋನ್ ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ಸ್ಟಾರ್ ನಟ ಸೈಫ್ ಅಲಿ ಖಾನ್ ರಾವಣಾಸುರನ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರ ಜೂನ್ 16 ರಂದು ಪ್ಯಾನ್ ವರ್ಲ್ಡ್ ರೇಂಜ್ ನಲ್ಲಿ ಬಿಡುಗಡೆಯಾಗುತ್ತಿದೆ. ಒಂದು ಸಾವಿರ ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಪ್ರಭಾಸ್ ಸ್ಟಾಮಿನಾ ಮತ್ತಷ್ಟು ಹೆಚ್ಚಾಗಲಿದೆ ಎಂಬ ವಿಶ್ವಾಸ ಅಭಿಮಾನಿಗಳದ್ದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News