ಸಲಾರ್ ಒಟಿಟಿ ರಿಲೀಸ್‌ ಡೇಟ್‌ ಫಿಕ್ಸ್‌..! ಡಿಜಿಟಲ್ ನಲ್ಲಿ ರೆಬೆಲ್ ಸ್ಟಾರ್ ಅಬ್ಬರಿಸೋದು ಯಾವಾಗ ಗೊತ್ತಾ?

Salaar OTT Release Date: ಆದಿಪುರುಷ್‌ ನಂತರ ಪ್ರಭಾಸ್‌ ಸಲಾರ್‌ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು.. ಸದ್ಯ ಬಿಡುಗಡೆಯಾಗಿ ಸದ್ದು ಮಾಡುತ್ತಿರುವ ಈ ಸಿನಿಮಾದ OTT ಬಿಡುಗಡೆ ದಿನಾಂಕ ಫಿಕ್ಸ್‌ ಆಗಿದೆ..   

Written by - Savita M B | Last Updated : Jan 17, 2024, 08:40 AM IST
  • ಪ್ರಭಾಸ್ ಅವರ ಇತ್ತೀಚಿನ ಬಿಗ್ ಆಕ್ಷನ್ ಚಿತ್ರ ಸಲಾರ್
  • ಈ ಚಿತ್ರವನ್ನು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ.
  • ಭಾರೀ ನಿರೀಕ್ಷೆಗಳ ನಡುವೆ ಡಿಸೆಂಬರ್ 22 ರಂದು ಬಿಡುಗಡೆಯಾದ ಚಿತ್ರ ವಿಶ್ವದಾದ್ಯಂತ ಬಂಪರ್ ಹಿಟ್ ಆಯಿತು.
ಸಲಾರ್ ಒಟಿಟಿ ರಿಲೀಸ್‌ ಡೇಟ್‌ ಫಿಕ್ಸ್‌..! ಡಿಜಿಟಲ್ ನಲ್ಲಿ ರೆಬೆಲ್ ಸ್ಟಾರ್ ಅಬ್ಬರಿಸೋದು ಯಾವಾಗ ಗೊತ್ತಾ?  title=

Salaar: ಪ್ರಭಾಸ್ ಅವರ ಇತ್ತೀಚಿನ ಬಿಗ್ ಆಕ್ಷನ್ ಚಿತ್ರ ಸಲಾರ್.. ಈ ಚಿತ್ರವನ್ನು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ. ಭಾರೀ ನಿರೀಕ್ಷೆಗಳ ನಡುವೆ ಡಿಸೆಂಬರ್ 22 ರಂದು ಬಿಡುಗಡೆಯಾದ ಚಿತ್ರ ವಿಶ್ವದಾದ್ಯಂತ ಬಂಪರ್ ಹಿಟ್ ಆಯಿತು. ಈ ಚಿತ್ರಕ್ಕೆ ಭಾರತದಲ್ಲಿ ಮಾತ್ರವಲ್ಲದೆ ಅಮೆರಿಕದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು.. ಒಟ್ಟಾರೆಯಾಗಿ ಈ ಸಿನಿಮಾ ವಿಶ್ವಾದ್ಯಂತ 600 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. 

ಚಿತ್ರವು ತನ್ನ ಥಿಯೇಟರ್ ರನ್ ಅನ್ನು ಬಹುತೇಕ ಪೂರ್ಣಗೊಳಿಸಿದೆ. ಹೀಗಾಗಿ ಅತೀ ಶೀಘ್ರದಲ್ಲಿಯೇ ಈ ಚಿತ್ರ ಒಟಿಟಿಯಲ್ಲಿ ಸದ್ದು ಮಾಡಲಿದೆ. ಈ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಜನಪ್ರಿಯ OTT ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್ ಖರೀದಿಸಿದೆ ಎಂದು ತಿಳಿದಿದೆ. ಆದರೆ ಈ ಸಂಕ್ರಾಂತಿಯಿಂದ ಚಿತ್ರ ಡಿಜಿಟಲ್ ಪ್ರೀಮಿಯರ್ ಆಗಿ ಸ್ಟ್ರೀಮಿಂಗ್ ಹಿಟ್ ಆಗಲಿದೆ ಎಂಬ ಮಾತು ಕೇಳಿಬರುತ್ತಿದೆ. ಇತ್ತೀಚಿನ ಮಾಹಿತಿ ಪ್ರಕಾರ ಈ ಸಿನಿಮಾ 2024ರ ಫೆಬ್ರವರಿ 4ರಿಂದ ತೆರೆಗೆ ಬರಲಿದೆಯಂತೆ. ಈ ಬಗ್ಗೆ ಅಧಿಕೃತ ಘೋಷಣೆ ಶೀಘ್ರದಲ್ಲೇ ಹೊರಬೀಳಲಿದೆ ಎನ್ನಲಾಗಿದೆ.. ‌

ಇದನ್ನೂ ಓದಿ-BBK 10: ಸಂಗೀತ, ತನಿಷ ಅಲ್ಲ… ಬಿಗ್’ಬಾಸ್ ಇತಿಹಾಸದಲ್ಲೇ ಅತಿ ಹೆಚ್ಚು ಫಾಲೋವರ್ಸ್ ಹೊಂದಿರೋದು ಈ ಸ್ಪರ್ಧಿ! ಇವರೇ ಈ ಬಾರಿಯ ವಿನ್ನರ್!

ಇನ್ನು ಸಾಲಾರ್ ಕಥೆಯ ವಿಚಾರಕ್ಕೆ ಬಂದರೆ.. ಇಬ್ಬರು ಆತ್ಮೀಯ ಗೆಳೆಯರು ಹೇಗೆ ಶತ್ರುಗಳಾಗಿ ಬದಲಾದರು ಎಂಬ ಕಥೆಯೊಂದಿಗೆ ನೀಲ್ ಈ ಸಿನಿಮಾ ಮಾಡಿದ್ದಾರೆ. ಈ ಅದ್ಧೂರಿ ಚಿತ್ರದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ನಟಿಸಿದ್ದು, ರವಿ ಬಸ್ರೂರ್ ಸಂಗೀತ ಸಂಯೋಜನೆ ಮಾಡಿದ್ದಾರೆ.. ಹೊಂಬಾಳೆ ಫಿಲಂಸ್ ಈ ಸಿನಿಮಾವನ್ನು ನಿರ್ಮಿಸಿದೆ.. ನೆಟ್‌ಫ್ಲಿಕ್ಸ್ ಈ ಸಿನಿಮಾದ ಡಿಜಿಟಲ್ ಹಕ್ಕುಗಳನ್ನು ಖರೀದಿಸಿದೆ.. 

ಪ್ರಭಾಸ್ ಪ್ರಸ್ತುತ ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ಸತತವಾಗಿ ಬ್ಯುಸಿಯಾಗಿದ್ದಾರೆ. ಅದರ ಭಾಗವಾಗಿ ಪ್ರಭಾಸ್ ಮಾಡುತ್ತಿರುವ ಮತ್ತೊಂದು ಬೃಹತ್ ಚಿತ್ರ ಪ್ರಾಜೆಕ್ಟ್ ಕೆ. ಸದ್ಯ ಈ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಅಂದಹಾಗೆ ಚಿತ್ರದ ಶೇ.80ಕ್ಕೂ ಹೆಚ್ಚು ಚಿತ್ರೀಕರಣ ಈಗಾಗಲೇ ಮುಗಿದಿದೆ. ನಾಗ್ ಅಶ್ವಿನ್ ನಿರ್ದೇಶನದಲ್ಲಿ ಪ್ಯಾನ್ ವರ್ಲ್ಡ್ ಫಿಲ್ಮ್ ಆಗಿ ಬರುತ್ತಿರುವ ಈ ಚಿತ್ರಕ್ಕೆ ಕಲ್ಕಿ 2898 ಎಡಿ ಎಂದು ಹೆಸರಿಡಲಾಗಿದೆ. ಈ ಚಿತ್ರದಲ್ಲಿ ಪ್ರಭಾಸ್ ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಜೊತೆಗೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮತ್ತು ಕಮಲ್ ಹಾಸನ್ ಸಹ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.. 

ಇದನ್ನೂ ಓದಿ-Bigg Boss: ಈ ಬಾರಿ ಬಿಗ್ ಬಾಸ್ ವಿನ್ನರ್’ಗೆ ಅದೃಷ್ಟವೋ ಅದೃಷ್ಟ! ಗೆದ್ದವರಿಗೆ ಸಿಗುವ ಬಹುಮಾನ ಮೊತ್ತ ಎಷ್ಟು ಗೊತ್ತಾ?

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

Trending News