ಪ್ರಭುದೇವನನ್ನು ಪ್ರೀತಿಸುತ್ತಿದ್ದ ನಯನತಾರಾ.. ವಿಚಾರ ತಿಳಿದ ಮೊದಲ ಪತ್ನಿ ಮಾಡಿದ್ರು ಹೈಡ್ರಾಮಾ!!

Prabhudev Nayanathara Love story : ದಕ್ಷಿಣ ಚಿತ್ರರಂಗದಲ್ಲಿ 'ಜವಾನ್' ನಟಿ ನಯನತಾರಾ ಪ್ರೇಮ ಪ್ರಕರಣದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದ್ದ ಅಂದಿನ ಕಾಲದ ಕಥೆಯಿದು.

Written by - Chetana Devarmani | Last Updated : Sep 12, 2023, 04:01 PM IST
  • ಪ್ರಭುದೇವನನ್ನು ಪ್ರೀತಿಸುತ್ತಿದ್ದ ನಯನತಾರಾ
  • ಪ್ರಭುದೇವ ನಯನತಾರಾ ಪ್ರೇಮ ಕಹಾನಿ
  • ನಟಿ ನಯನತಾರಾ ಪ್ರೇಮ ಪ್ರಕರಣ
ಪ್ರಭುದೇವನನ್ನು ಪ್ರೀತಿಸುತ್ತಿದ್ದ ನಯನತಾರಾ.. ವಿಚಾರ ತಿಳಿದ ಮೊದಲ ಪತ್ನಿ ಮಾಡಿದ್ರು ಹೈಡ್ರಾಮಾ!!  title=

Prabhudev Nayanathara Relationship : ತಮ್ಮ ನೃತ್ಯದಿಂದ ಜನರನ್ನು ಹುಚ್ಚೆಬ್ಬಿಸಿದ ಪ್ರಭುದೇವ ಅವರನ್ನು ಭಾರತದ ಮೈಕೆಲ್ ಜಾಕ್ಸನ್ ಎಂದೇ ಕರೆಯುತ್ತಾರೆ. ಅವರ ನೃತ್ಯವನ್ನು ನೋಡಲು ಅಭಿಮಾನಿಗಳು ಯಾವಾಗಲೂ ಕಾತುರರಾಗಿರುತ್ತಾರೆ. ಪ್ರಭುದೇವ ಅವರು ನೃತ್ಯ ಸಂಯೋಜಕರಾಗಿ ಮಾತ್ರವಲ್ಲದೆ ನಟ ಮತ್ತು ನಿರ್ದೇಶಕರಾಗಿಯೂ ಸಹ ಹಲವಾರು ಉತ್ತಮ ಚಿತ್ರಗಳನ್ನು ನೀಡಿದ್ದಾರೆ. 

ಪ್ರಭುದೇವ ಅವರ ವೈಯಕ್ತಿಕ ಜೀವನವು ಹೆಚ್ಚು ಚರ್ಚಿಸಲ್ಪಟ್ಟ ವಿಷಯವಾಗಿದೆ. ವಿಶೇಷವಾಗಿ ಅವರ ಹೆಸರನ್ನು ಸೌತ್ ಸ್ಟಾರ್ ನಯನತಾರಾ ಅವರೊಂದಿಗೆ ಕೇಳಿಬಂದಿತ್ತು. ಮದುವೆಯಾದ ಪ್ರಭುದೇವ ಅವರು ನಟಿ ನಯನತಾರಾಳನ್ನು ಸಂಪೂರ್ಣವಾಗಿ ಪ್ರೀತಿಸುತ್ತಿದ್ದ ಕಾಲವೊಂದಿತ್ತು. ನಯನತಾರಾ ಮತ್ತು ಪ್ರಭುದೇವ ಅವರ ಸಂಬಂಧದ ಸುದ್ದಿ ತಿಳಿದ ಅವರ ಪತ್ನಿ ಲತಾ ಅವರು ನ್ಯಾಯಾಲಯ ಮತ್ತು ಪೊಲೀಸರನ್ನು ಸಂಪರ್ಕಿಸಿದ್ದರು. ನಯನತಾರಾ ಅವರನ್ನು ಬಂಧಿಸುವಂತೆ ಪೊಲೀಸರನ್ನು ಒತ್ತಾಯಿಸಿದ್ದರು. 

ನಯನತಾರಾ ಮತ್ತು ಪ್ರಭುದೇವ ನಡುವಿನ ಸಂಬಂಧವು ಸಿನಿಮಾ ಶೂಟಿಂಗ್‌ ಸೆಟ್‌ಗಳಿಂದ ಪ್ರಾರಂಭವಾಯಿತು. ನಯನತಾರಾ ನಾಯಕಿಯಾಗಿ ಕಾಣಿಸಿಕೊಂಡ ಸಿನಿಮಾವನ್ನು ಪ್ರಭುದೇವ ನಿರ್ದೇಶಿಸುತ್ತಿದ್ದರು. ಆ ದಿನಗಳಲ್ಲಿ ನಯನತಾರಾ ಒಂಟಿಯಾಗಿದ್ದರೂ ಪ್ರಭುದೇವ ಮದುವೆಯಾಗಿದ್ದರು. ಇಬ್ಬರೂ ಬಹಳ ದಿನಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಇಬ್ಬರೂ ಬಹಳ ದಿನಗಳಿಂದ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಸಹ ಇದ್ದರು ಎನ್ನಲಾಗಿದೆ. 

ಇದನ್ನೂ ಓದಿ: Jawan Collection Day 5: ₹500 ಕೋಟಿ ಗಡಿ ದಾಟಿದ ಜವಾನ್, ಐದನೇ ದಿನ ಕಲೆ ಹಾಕಿದ್ದೆಷ್ಟು? 

ತಮ್ಮ ಸಂಬಂಧದ ಬಗ್ಗೆ ಪ್ರಭುದೇವ ಹೆಚ್ಚಾಗಿ ಮೌನವಾಗಿದ್ದರೂ, ನಯನತಾರಾ ಕೂಡ ತಮ್ಮ ಮಣಿಕಟ್ಟಿನ ಮೇಲೆ ಪ್ರಭುದೇವ ಅವರ ಹೆಸರಿನ ಹಚ್ಚೆ ಹಾಕಿಸಿಕೊಂಡಿದ್ದರು. 2009 ರಲ್ಲಿ ಪ್ರಭು ಮತ್ತು ನಯನತಾರಾ ರಹಸ್ಯವಾಗಿ ವಿವಾಹವಾದರು ಎಂದು ಮಾಧ್ಯಮಗಳಲ್ಲಿ ವರದಿಗಳು ಬಂದವು. ಆದರೆ ಇದನ್ನು ಎಂದಿಗೂ ಯಾರೂ ಖಚಿತಪಡಿಸಲು ಸಾಧ್ಯವಾಗಲಿಲ್ಲ.

ನಯನತಾರಾ ದಕ್ಷಿಣದ ಸುಂದರ ಮತ್ತು ಹಾಟ್ ನಟಿಯರಲ್ಲಿ ಒಬ್ಬರು. ನಯನತಾರಾ ಮೂಲತಃ ಕ್ರಿಶ್ಚಿಯನ್. ಅವರ ಮೂಲ ಹೆಸರು 'ಡಯಾನಾ ಮರಿಯಮ್ ಕುರಿಯನ್'. ಈ ನಟಿ ಪ್ರಭುದೇವ ಅವರೊಂದಿಗಿನ ಸಂಬಂಧದ ಬಳಿಕ ಹಿಂದೂ ಧರ್ಮವನ್ನು ಅಳವಡಿಸಿಕೊಂಡಿದ್ದಾರೆ ಎಂದು ಹಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಇದು ಅಧಿಕೃತವಾಗಿ ದೃಢಪಟ್ಟಿಲ್ಲ.

2010ರಲ್ಲಿ ನಯನತಾರಾ ಮತ್ತು ಪ್ರಭುದೇವ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸಿನಿರಂಗದಲ್ಲಿ ಹಬ್ಬಿತ್ತು. ಪ್ರಭುದೇವ ಅವರನ್ನು ಮದುವೆಯಾದ ನಂತರ ನಯನತಾರಾ ಕೂಡ ನಟನೆಗೆ ವಿದಾಯ ಹೇಳಲಿದ್ದಾರೆ ಎನ್ನಲಾಗಿತ್ತು. ಆದರೆ ಕಾರಣಾಂತರಗಳಿಂದ ಮದುವೆ ದಿನಾಂಕವನ್ನು ಮುಂದೂಡಲಾಯಿತು ಎಂದು ವರದಿಗಳು ಹರಿದಾಡಿದವು. ಪ್ರಭುದೇವ ಮತ್ತು ನಯನತಾರಾ ಮದುವೆಯಾಗಿದ್ದರು. ಅಲ್ಲದೇ ನಯನತಾರಾ ಧರ್ಮವನ್ನು ತೊರೆದು ಪ್ರಭುದೇವ ಅವರನ್ನು ಮದುವೆಯಾಗಿದ್ದಾರೆ ಎಂದು ಹೇಳಲಾಗುತ್ತದೆ, ಆದರೆ ಇಲ್ಲಿಯವರೆಗೆ ಇಬ್ಬರೂ ಇದನ್ನು ಒಪ್ಪಿಕೊಂಡಿಲ್ಲ.

ಇದನ್ನೂ ಓದಿ: ಸೈಫ್ ಜೊತೆಗಿನ ವಯಸ್ಸಿನ ಅಂತರದ ಟೀಕೆಗಳಿಗೆ ಮುಟ್ಟಿನೋಡಿಕೊಳ್ಳುವಂತೆ ಉತ್ತರಿಸಿದ ಕರೀನಾ ಕಪೂರ್!! 

ಪ್ರಭುದೇವ ಅವರ ಪತ್ನಿ ಲತಾ 2010ರಲ್ಲಿ ಕೌಟುಂಬಿಕ ನ್ಯಾಯಾಲಯದಲ್ಲಿ ತಮ್ಮ ಪತಿ ಪ್ರಭುದೇವ ಅವರು ನಟಿ ನಯನತಾರಾ ಜೊತೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದಾರೆ ಎಂದು ಅರ್ಜಿ ಸಲ್ಲಿಸಿದ್ದರು. ಅಷ್ಟೇ ಅಲ್ಲ, ನಯನತಾರಾ ಅವರನ್ನು ಮದುವೆಯಾದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಲತಾ ಬೆದರಿಕೆ ಹಾಕಿದ್ದರು, ಕೊನೆಗೆ ಪ್ರಭುದೇವ ಪತ್ನಿಯಿಂದ ಬೇರ್ಪಡಲು ನಿರ್ಧರಿಸಿದ್ದರು. ಈ ಘಟನೆಗಳು ಕ್ರಮೇಣ ಪ್ರಭುದೇವ ಮತ್ತು ನಯನತಾರಾ ನಡುವಿನ ಸಂಬಂಧವನ್ನು ಮುರಿದವು. 2012 ರಲ್ಲಿ, ನಯನತಾರಾ ಪ್ರಭುದೇವ ಅವರೊಂದಿಗಿನ ಸಂಬಂಧವನ್ನು ಕೊನೆಗೊಳಿಸಿದರು.

ಪ್ರಭುದೇವ ಅವರ ಮಾಜಿ ಪತ್ನಿ ಲತಾ ಅವರು ತಮ್ಮ ಹಳೆಯ ಸಂದರ್ಶನದಲ್ಲಿ ನಯನತಾರಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ಆಕೆಗೆ ಹಿಡಿಶಾಪ ಹಾಕಿದ್ದರು. ಅವರ ಸಂಸಾರವನ್ನು ಹಾಳು ಮಾಡಿದ ಆಕೆಗೆ ತಕ್ಕ ಶಿಕ್ಷೆಯಾಗಬೇಕು ಎಂದು ಹೇಳಿದ್ದರು. ನಯನತಾರಾ ಅವರನ್ನು ಬಂಧಿಸುವಂತೆ ಪೊಲೀಸರು ಮತ್ತು ಕಾನೂನನ್ನು ಕೋರುತ್ತೇನೆ, ಅವರು ನನ್ನ ಪತಿಯನ್ನು ಕಿತ್ತುಕೊಂಡಿದ್ದಾರೆ ಎಂದು ಲತಾ ಆರೋಪಿಸಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

 

Trending News