ಡೈನಾಮಿಕ್‌ ಪ್ರಿನ್ಸ್‌ ಜೋಡಿಯಾದ ಅನು ಸಿರಿಮನೆ :ಹಾಗಾದ್ರೆ ಯಾವ ಚಿತ್ರದಲ್ಲಿ ಮಿಂಚಲಿದ್ದಾರೆ ಈ ಜೋಡಿ?

Megha Shetty: ಜೊತೆ ಜೊತೆಯಲಿ ಸೀರಿಯಲ್‌ ಖ್ಯಾತಿಯ ಮೇಘಾ ಶೆಟ್ಟಿ, ಸದ್ಯ ಸಿನಿಮಾಗಳಲ್ಲಿ ಬಿಸಿಯಾಗಿದ್ದಾರೆ. ನಟಿ ಮೇಘಾ ಇದೀಗ ಪ್ರಜ್ವಲ್‌ ದೇವರಾಜ್‌ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಾಗಾದ್ರೆ ಯಾವ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆಂಬ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ.

Written by - Zee Kannada News Desk | Last Updated : Nov 10, 2023, 08:16 PM IST
  • ನಟಿ ಮೇಘಾ ಶೆಟ್ಟಿ ಸದ್ಯ ಸಾಲು ಸಾಲು ಸಿನಿಮಾಗಳಿಗೆ ಸಹಿ ಹಾಕ್ತಾಯಿದ್ದಾರೆ.
  • ನಟಿ ಮೇಘಾ ಶೆಟ್ಟಿ ಪ್ರಜ್ವಲ್ ದೇವರಾಜ್ ಅಭಿನಯದ ಚೀತಾ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.
  • ಚೀತಾ ಸಿನಿಮಾದ ನಾಯಕಿಯರ ಪರಿಚಯ ಮಾಡಿಸೋಕೆ ವಿಶೇಷವಾಗಿಯೇ ಫೋಟೋ ಶೂಟ್ ಮಾಡಿಸಿದ್ದಾರೆ.
ಡೈನಾಮಿಕ್‌ ಪ್ರಿನ್ಸ್‌ ಜೋಡಿಯಾದ ಅನು ಸಿರಿಮನೆ :ಹಾಗಾದ್ರೆ ಯಾವ ಚಿತ್ರದಲ್ಲಿ ಮಿಂಚಲಿದ್ದಾರೆ ಈ ಜೋಡಿ? title=

Megha Shetty In Cheeta: ನಟಿ ಮೇಘಾ ಶೆಟ್ಟಿ ಜೊತೆ ಜೊತೆಯಲಿ ಸೀರಿಯಲ್‌ನಿಂದ ಖ್ಯಾತಿ ಪಡೆದ ನಟಿ, ಸದ್ಯ ಸಾಲು ಸಾಲು ಸಿನಿಮಾಗಳಿಗೆ ಸಹಿ ಹಾಕ್ತಾಯಿದ್ದಾರೆ. ಈಗಾಗಲೇ ಈ ನಟಿ ಅಭಿನಯಿಸಿದ ತ್ರಿಬಲ್ ರೈಡಿಂಗ್‌, ದಿಲ್‌ ಪಸಂದ್‌ ಸಿನಿಮಾ ತೆರೆಕಂಡಿದ್ದು, ಕೆಲವು ದಿನಗಳ ಹಿಂದೆ ವಿನಯ್‌ ರಾಜ್‌ಕುಮಾರ್‌ ಅಭಿನಯದ ಗ್ರಾಮಾಯಣ ಸಿನಿಮಾದಲ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆಂಬ ವಿಷಯ ಹಂಚಿಕೊಂಡಿದ್ದರು. 

ಇದೀಗ ನಟಿ ಮೇಘಾ ಶೆಟ್ಟಿ ಪ್ರಜ್ವಲ್ ದೇವರಾಜ್ ಅಭಿನಯದ ಚೀತಾ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಚೀತಾ ಚಿತ್ರದಲ್ಲಿ ಪ್ರಜ್ವಲ್‌ಗೆ ಇಬ್ಬರು ಹೀರೋಯಿನ್ ಇದ್ದು, ಒಬ್ಬರು ಮೇಘಾ ಶೆಟ್ಟಿಯಾದರೇ, ಮತ್ತೊಬ್ಬರು ಶೃತಿ ಹರಿಹರನ್ ಇದ್ದಾರೆ. ಇಬ್ಬರಿಗೂ ಮಹತ್ವದ ರೋಲ್ ಕಾಣಿಸಲಿದ್ದಾರೆ.

ಇದನ್ನು ಓದಿ: 'ಸಲಾರ್' ಟ್ರೇಲರ್‌ ಕನ್ನಡ ಭಾಷೆಯಲ್ಲಿ ರಿಲೀಸ್ ಆಗಲ್ಲ: ಹೊಂಬಾಳೆ ಸಂಸ್ಥೆಯ ಈ ನಿರ್ಧಾರಕ್ಕೆ ಕಾರಣವೇನು?

ಚೀತಾ ಸಿನಿಮಾದ ನಾಯಕಿಯರ ಪರಿಚಯ ಮಾಡಿಸೋಕೆ ವಿಶೇಷವಾಗಿಯೇ ಫೋಟೋ ಶೂಟ್ ಮಾಡಿಸಿದ್ದು, ಅವಾಗಲೇ ನಾಯಕಿಯರ ಗೆಟಪ್ ಮತ್ತು ರೋಲ್ ಹೇಗಿರುತ್ತದೆ ಅನ್ನೋದನ್ನ ತಿಳಿಯುತ್ತದೆ. ಮೇಘಾ ಶೆಟ್ಟಿ ಪಾತ್ರದ ಕೆಲವು ಭಾಗದ ಶೂಟಿಂಗ್ ಮುಗಿದಿದ್ದು, ಬೆಂಗಳೂರಿನ ಎಚ್.ಎಂ.ಟಿ. ಫ್ಯಾಕ್ಟರಿಯಲ್ಲಿಯೇ ಒಂದು ದೊಡ್ಡ ಸೆಟ್ ಹಾಕಿದ್ದು,  ಬಹುತೇಕ ಭಾಗವನ್ನ ಇಲ್ಲಿಯೇ ಶೂಟಿಂಗ್ ನಡೆಯುತ್ತದೆ.

ಸಿನಿಮಾದ ಇತರ ಮಾಹಿತಿಯನ್ನ ಹಂತ ಹಂತವಾಗಿಯೇ ಕೊಡ್ತಾ ಹೋಗುತ್ತೇವೆ. ಒಂದೊಂದೇ ಪಾತ್ರದ ಪರಿಚಯವನ್ನ ಕೂಡ ವಿಶೇಷವಾಗಿಯೇ ಮಾಡೋ ಪ್ಲಾನ್ ಇದೆ. ಅದಕ್ಕಾಗಿಯೇ ಇನ್ನು ಏನೂ ಬಿಟ್ಟಿಲ್ಲ ಅಂತಲೇ ಕಲೈ ಮಾಸ್ಟರ್ ಹೇಳಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News