ವಾವ್...! ಪ್ರಿಯಾಂಕಾ -ನಿಕ್ ಜೋಡಿಯದ್ದು ಬರಿ ಮದುವೆಯಲ್ಲ ..! ವೀಡಿಯೋ ವೈರಲ್

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಮದುವೆಯ ಅಧಿಕೃತ ಫೋಟೋ ಹಾಗೂ ವಿಡೀಯೋಗಳು ಈಗ ಬಿಡುಗಡೆಯಾಗಿ ಸಾಮಾಜಿಕ ಮಾಧ್ಯಮಳಲ್ಲಿ ವೈರಲ್ ಆಗಿವೆ.

Updated: Dec 4, 2018 , 06:54 PM IST
ವಾವ್...! ಪ್ರಿಯಾಂಕಾ -ನಿಕ್ ಜೋಡಿಯದ್ದು ಬರಿ ಮದುವೆಯಲ್ಲ ..! ವೀಡಿಯೋ ವೈರಲ್
Photo courtesy: Instagram

ನವದೆಹಲಿ: ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಮದುವೆಯ ಅಧಿಕೃತ ಫೋಟೋ ಹಾಗೂ ವಿಡೀಯೋಗಳು ಈಗ ಬಿಡುಗಡೆಯಾಗಿ ಸಾಮಾಜಿಕ ಮಾಧ್ಯಮಳಲ್ಲಿ ವೈರಲ್ ಆಗಿವೆ.

ಕ್ರೈಸ್ತ ಹಾಗೂ ಹಿಂದು ಸಂಪ್ರದಾಯದ ಪ್ರಕಾರ ಮದುವೆಯಾದ ನಿಕ್ಯಾಂಕಾ ಜೋಡಿ ಈಗ ಭಿನ್ನ ಭಿನ್ನ ಮದುವೆ ಉಡುಪಿನಲ್ಲಿ ಕಂಗೊಳಿಸುತ್ತಿರುವ ಫೋಟೋಗಳು ಈಗ ವೈರಲ್ಆಗಿವೆ ಜೋಧಪುರ್ ನಲ್ಲಿರುವ ಉಮೈದ್ ಭವನ್ ಪ್ಯಾಲೇಸ್ ನಲ್ಲಿ ಮದುವೆ ಯಾದ ಜೋಡಿ ಈಗ ತಮ್ಮ ಇನ್ಸ್ಟಾಗ್ರಾಂ ನಲ್ಲಿ ವಿಡಿಯೋಗಳನ್ನು ಪರಸ್ಪರ ಇಬ್ಬರು ಹಂಚಿಕೊಂಡಿದ್ದಾರೆ.

ಈ ವರ್ಷ ಬಾಲಿವುಡ್ ನಲ್ಲಿ ಮದುವೆಯ ಪರ್ವ ಎಂದೆ ಹೇಳಬಹುದು ಇತ್ತೀಚೆಗಷ್ಟೇ ದೀಪವೀರ್ ಮದುವೆ, ಸೋನಂ ಕಪೂರ್ ಮದುವೆ, ರಾಖಿ ಸಾವಂತ್ ಮದುವೆ ಹೀಗೆ ಸಾಲು ಸಾಲು ಮದುವೆಗಳು ಬಾಲಿವುಡ್ ನಲ್ಲಿ ಸದ್ದು ಮಾಡುತ್ತಿವೆ.

ಆದರೆ ಈಗ ಪ್ರಿಯಾಂಕಾ ಮದುವೆ ಇವರೆಲ್ಲ ಮದುವೆಗಿಂತ ಭಿನ್ನ ಎಂದು ಹೇಳಬಹುದು ಕಾರಣವಿಷ್ಟೇ ಹಾಲಿವುಡ್ ಸಿಂಗರ್ ಆಗಿರುವ ನಿಕ್ ಜೋನಾಸ್ ಅವರನ್ನು ಪ್ರಿಯಾಂಕಾ ಚೋಪ್ರಾ  ಮದುವೆಯಾಗುವ ಮೂಲಕ ಅಮೆರಿಕಾದ ಸೊಸೆಯಾಗಿದ್ದಾಳೆ.