ವಿಶ್ವದ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದ ಪ್ರಿಯಾಂಕಾ ಚೋಪ್ರಾ.!

ಇತ್ತೀಚೆಗಷ್ಟೇ ಜೋಧಪುರ್ ನಲ್ಲಿ ಅದ್ದೂರಿಯಾಗಿ  ಹಾಲಿವುಡ್ ಸಿಂಗರ್ ನಿಕ್ ಜೋನಾಸ್ ರನ್ನು ಮದುವೆಯಾದ  ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಈಗ ಪೋರ್ಬ್ಸ್ ನ  2018 ರ ವಿಶ್ವದ ಪ್ರಭಾವಿ 100 ಮಹಿಳೆಯರಲ್ಲಿ ಸ್ಥಾನ ಪಡೆದಿದ್ದಾರೆ.

Updated: Dec 6, 2018 , 07:40 PM IST
ವಿಶ್ವದ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದ ಪ್ರಿಯಾಂಕಾ ಚೋಪ್ರಾ.!
Photo courtesy: Instagram

ನವದೆಹಲಿ: ಇತ್ತೀಚೆಗಷ್ಟೇ ಜೋಧಪುರ್ ನಲ್ಲಿ ಅದ್ದೂರಿಯಾಗಿ  ಹಾಲಿವುಡ್ ಸಿಂಗರ್ ನಿಕ್ ಜೋನಾಸ್ ರನ್ನು ಮದುವೆಯಾದ  ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಈಗ ಪೋರ್ಬ್ಸ್ ನ  2018 ರ ವಿಶ್ವದ ಪ್ರಭಾವಿ 100 ಮಹಿಳೆಯರಲ್ಲಿ ಸ್ಥಾನ ಪಡೆದಿದ್ದಾರೆ.

100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ ಅವರು 94ನೇ ಸ್ಥಾನವನ್ನು ಪಡೆದಿದ್ದಾರೆ. ಇವರ ಜೊತೆಗೆ ಈ ಪಟ್ಟಿಯಲ್ಲಿ ಸ್ಥಾನವನ್ನು ಪಡೆದ ಇತರ ಭಾರತೀಯರೆಂದರೆ ರೋಶನಿ ನಾಡಾರ್, ಮಲ್ಹೊತ್ರಾ,ಕಿರಣ್ ಮಜುಂದಾರ್ ಶಾ, ಶೋಬನಾ ಭಾರ್ತಿಯಾ ಅವರು ಸ್ಥಾನ ಪಡೆದಿದ್ದಾರೆ.ಪ್ರಿಯಾಂಕಾ ಸುಮಾರು ಐವತ್ತಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದು ಯುಎಸ್ ನಲ್ಲಿನ ಟಿವಿ ಸರಣಿ ಕಾರ್ಯಕ್ರಮವಾದ ಕ್ವಾಂಟಿಕೋನಲ್ಲಿ ಖ್ಯಾತಿ ಪಡೆದಿದ್ದರು, ಯುನಿಸೆಫ್ ನ ರಾಯಭಾರಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಈಗ ಸತತ ಎರಡನೇ ಬಾರಿಗೆ ಪ್ರಭಾವಿ ನೂರು ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಬಗ್ಗೆ ಟ್ವೀಟ್ ಮಾಡಿರುವ ಪ್ರಿಯಾಂಕಾ ಚೋಪ್ರಾ " ಧನ್ಯವಾದಗಳು ಫ್ರೋಬ್ಸ್! ಜಗತ್ತಿನ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಎರಡನೆ ಬಾರಿಗೆ ಸ್ಥಾನವನ್ನು ಪಡೆಯುವುದು ನಿಜಕ್ಕೂ ಗೌರವದ ಸಂಗತಿ, ಇದು ನಮ್ಮ ಹಸಿವುತನವನ್ನು ಉಳಿಸಿಕೊಳ್ಳುವುದರ ಸಂಗತಿ ಯಥಾಸ್ಥಿತಿಯನ್ನು ಮುಂದಕ್ಕೆ ತಳ್ಳುವುದು ನಾನು ಪ್ರೀತಿಸುವುದನ್ನು ಮಾಡುವುದು "ಎಂದು ಇನ್ಸ್ಟಾಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.