Pushpa 2: ಪುಷ್ಪ ಸೀಕ್ವೆಲ್‌ನಲ್ಲಿ ಬಹು ಕೋಟಿ ವೆಚ್ಚದ ಗಂಗಮ್ಮ ಜಾತ್ರೆ ಸೆಟ್: ಇದಕ್ಕೆ ಖರ್ಚಾಗಿದೆಷ್ಟು ಗೊತ್ತೇ?

Pushpa 2 Gangamma Jathara Set: ತೆಲುಗು ಸ್ಟಾರ್ ನಟ ಅಲ್ಲು ಅರ್ಜುನ್‌ 'ಪುಷ್ಪ 2: ದಿ ರೂಲ್' ಸಿನಿಮಾದ ಟೀಸರ್‌ನಲ್ಲಿ ಬರುವ ಜಾತ್ರೆಯ ಸೆಟ್‌ಗಾಗಿ ಕೋಟಿ ಕೋಟಿ ಹಣವನ್ನು ಹಾಕಿದ್ದಾರೆ. ಹಾಗಿದ್ರೇ ಈ ಸೀನ್‌ ವಿಶೇಷತೆಗಳೇನು? ಇದಕ್ಕೆ ಖರ್ಚು ಎಷ್ಟಾಗಿದೆ? ಸಂಪೂರ್ಣ ವಿವರ ಇಲ್ಲಿದೆ.  

Written by - Zee Kannada News Desk | Last Updated : Apr 11, 2024, 09:54 AM IST
  • 'ಪುಷ್ಪ 2: ದಿ ರೂಲ್'ಝಲಕ್‌ನಲ್ಲಿ ಹೆಚ್ಚು ಹೈಲೆಟ್‌ ಆಗಿದ್ದು ಅಲ್ಲು ಅರ್ಜುನ್‌ ವೇಷ ಹಾಗೂ ಅಲ್ಲಿಯ ಜಾತ್ರೆ ದೃಶ್ಯಗಳು
  • 'ಪುಷ್ಪ 2' ಚಿತ್ರದಲ್ಲಿ ಬರುವ ಗಂಗಮ್ಮ ಜಾತ್ರೆಯ ಸೀನ್‌ನಲ್ಲಿ ನಟ ಅಲ್ಲು ಅರ್ಜುನ್‌ ಸೀರೆಯನ್ನು ಉಟ್ಟಿಕೊಂಡು ಖಳನಾಯಕರ ಜೊತೆಗೆ ಹೊಡೆದಾಡುವ ದೃಶ್ಯ ಹೈಲೆಟ್‌ ಆಗಿತ್ತು.
  • ಗಂಗಮ್ಮನ ಜಾತ್ರೆಯ ಸೆಟ್‌ ಅನ್ನು ಹೈದಬಾರಾದ್‌ನ ಗಂದಿಪೇಟ್‌ನಲ್ಲಿರು ಅಲ್ಲು ಸ್ಟುಡಿಯೋಸ್‌ನಲ್ಲಿ ಗ್ರಾಂಡ್‌ ಆಗಿ ಹಾಕಲಾಗಿತ್ತು.
Pushpa 2: ಪುಷ್ಪ ಸೀಕ್ವೆಲ್‌ನಲ್ಲಿ ಬಹು ಕೋಟಿ ವೆಚ್ಚದ ಗಂಗಮ್ಮ ಜಾತ್ರೆ ಸೆಟ್: ಇದಕ್ಕೆ ಖರ್ಚಾಗಿದೆಷ್ಟು ಗೊತ್ತೇ? title=

Pushpa 2 Gangamma Jathara Set Cost: ಟಾಲಿವುಡ್‌ ಐಕಾನ್ ಸ್ಟಾರ್‌' ಅಲ್ಲು ಅರ್ಜುನ್ ನಟನೆಯ 'ಪುಷ್ಪ 2: ದಿ ರೂಲ್' ಚಿತ್ರದ ಟೀಸರ್‌ ಕೆಲವು ದಿನಗಳ ಹಿಂದೆಯಷ್ಟೇ ರಿಲೀಸ್‌ ಆಗಿದೆ. ಈ ಝಲಕ್‌ನಲ್ಲಿ ಹೆಚ್ಚು ಹೈಲೆಟ್‌ ಆಗಿದ್ದು ಅಲ್ಲು ಅರ್ಜುನ್‌ ವೇಷ ಹಾಗೂ ಅಲ್ಲಿಯ ಜಾತ್ರೆ ದೃಶ್ಯಗಳು. ಈ ಟೀಸರ್‌ ಮೂಲಕ ಸಿನಿಮಾದ ಬಗ್ಗೆ ಇನ್ನಷ್ಟು ಕೂತೂಹಲ ಹೆಚ್ಚಿಸಿದೆ. ಇನ್ನೂ ಚಿತ್ರಕ್ಕಾಗಿ ಹಾಕಿರುವ ಜಾತ್ರೆಯ ಸೆಟ್‌ಗೆ ಬಹು ಕೋಟಿ ಹಣವನ್ನು ಖರ್ಚು ಮಾಡಿದ್ದಾರೆ.

'ಪುಷ್ಪ 2' ಚಿತ್ರದಲ್ಲಿ ಬರುವ ಗಂಗಮ್ಮ ಜಾತ್ರೆಯ ಸೀನ್‌ನಲ್ಲಿ ನಟ ಅಲ್ಲು ಅರ್ಜುನ್‌ ಸೀರೆಯನ್ನು ಉಟ್ಟಿಕೊಂಡು ಖಳನಾಯಕರ ಜೊತೆಗೆ ಹೊಡೆದಾಡುವ ದೃಶ್ಯ ಹೈಲೆಟ್‌ ಆಗಿತ್ತು. ಹಾಗೆಯೇ ಈ ಸಿನಿಮಾದಲ್ಲಿ ಗಂಗಮ್ಮ ಜಾತ್ರೆಯ  ಸೀನ್‌ ಬಹಳಾನೇ ಪ್ರಮುಖವಾದುದು ಎನ್ನಲಾಗಿದೆ. ಇದಕ್ಕಾಗಿಯೇ ಡೈರೆಕ್ಟರ್‌  ಸುಕುಮಾರ್ ಜಾತ್ರೆ ಸೆಟ್‌ ಅನ್ನು ಅದ್ದೂರಿಯಾಗಿ ಹಾಕಿಸಿದ್ದರು. ಚಿತ್ರದ ನಿರ್ಮಾಪಕರು ಈ ಜಾತ್ರೆಯ ಸೀನ್‌ಗಾಗಿ ಸೆಟ್‌  ರೆಡಿ ಮಾಡಿಸಲು 50 ಕೋಟಿ ರೂ. ಖರ್ಚು ಮಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: ಶಾರುಖ್ ಖಾನ್ ಪುತ್ರನ ಜೊತೆ ಐಶ್ವರ್ಯಾ ರೈ ಮಗಳ‌ ಮದುವೆ !? ಆರಾಧ್ಯ ಆರ್ಯನ್ ಫೋಟೋ ವೈರಲ್!‌

ಗಂಗಮ್ಮನ ಜಾತ್ರೆಯ ಸೆಟ್‌ ಅನ್ನು ಹೈದಬಾರಾದ್‌ನ ಗಂದಿಪೇಟ್‌ನಲ್ಲಿರು ಅಲ್ಲು ಸ್ಟುಡಿಯೋಸ್‌ನಲ್ಲಿ ಗ್ರಾಂಡ್‌ ಆಗಿ ಹಾಕಲಾಗಿತ್ತು. ಈ ದೃಶ್ಯಕ್ಕಾಗಿ ವಿಶೇಷ ಲೈಟಿಂಗ್ ಸೆಟಪ್ ಜೊತೆಗೆ ಕಲಾವಿದರಿಗೂ ಸ್ಪೆಷಲ್‌ ಆಗಿ  ಮೇಕಪ್‌ ಮಾಡಲಾಗಿತ್ತು. ಇದಕ್ಕಾಗಿ ಮುಂಬೈನಿಂದ ಮೋಕೊಬೋಟ್ ಕ್ಯಾಮೆರಾವನ್ನು ತರಿಸಿಕೊಂಡಿದ್ದು, ಇದಕ್ಕಾಗಿ 30 ಕೋಟಿ ರೂ. ಹಣ ಹಾಕಿದ್ದಾರೆ. ಇನ್ನು ಈ ಸಿನಿಮಾದ ಸೀನ್‌ನಲ್ಲಿ ಕೆಲಸ ಮಾಡಿದ ಕಲಾವಿದರಿಗೆ, ತಂತ್ರಜ್ಞರ ಸಂಭಾವನೆ, ವಿಶುವಲ್ ಎಫೆಕ್ಟ್ಸ್, ಪೋಸ್ಟ್ ಪ್ರೊಡಕ್ಷನ್ ವರ್ಕ್‌, ಸೌಂಡ್ ಡಿಸೈನ್ ಹಾಗೂ ಇನ್ನೂ ಇತರೆ ಕಾರ್ಯಗಳಿಗೆ 20 ಕೋಟಿ ರೂ. ಖರ್ಚಾಗಿದೆ.

ಮೈತ್ರಿ ಮೂವೀ ಮೇಕರ್ಸ್ ಒಟ್ಟಾರೆಯಾಗಿ ಜಾತ್ರೆಯ ಸೀನ್‌ಗೆ 50 ಕೋಟಿ ರೂ.  ಖರ್ಚು ಮಾಡಿದ್ದಾರೆ. 'ಪುಷ್ಪ 2' ಚಿತ್ರವನ್ನು  250 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಈ ಸಿನಿಮಾ ಇದೇ ಆಗಸ್ಟ್ 15ರಂದು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ತರೆಯ ಮೇಲೆ ರಾರಾಜಿಸಲಿದೆ. ಚಿತ್ರತಂಡ ಈಗಾಗಲೇ ಒಂದು ಸಾವಿರ ಕೋಟಿ ರೂ.ಗಳಿಗೂ ಅಧಿಕ ಗಳಿಕೆಯನ್ನು ಮಾಡಬೇಕೆಂದು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈ ಸಿನಿಮಾದ ಹಾಡುಗಳನ್ನು ದೇವಿಶ್ರೀ ಪ್ರಸಾದ್  ಸಂಗೀತಾ ಸಂಯೋಜನೆ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News