ನಟ ಕಿಚ್ಚ ಸುದೀಪ್‌ ಸಿನಿಮಾಗೆ ಆನೆಬಲ..! ‘ವಿಕ್ರಾಂತ್ ರೋಣ’ನಿಗೆ ‘ಪಿವಿಆರ್‌’ ಸಾಥ್..!‌

ಕನ್ನಡ ಸಿನಿ ಕ್ಷೇತ್ರದಲ್ಲೇ ‘ವಿಕ್ರಾಂತ್ ರೋಣ’ ದೊಡ್ಡ ಹೆಸರು.ರಿಲೀಸ್‌ಗೆ ಮೊದಲೇ ‘ವಿಕ್ರಾಂತ್ ರೋಣ’ ಜಗತ್ತಿನಾದ್ಯಂತ ಸಂಚಲನವನ್ನೇ ಸೃಷ್ಟಿ ಮಾಡುತ್ತಿದೆ.

Written by - Malathesha M | Edited by - Manjunath N | Last Updated : May 20, 2022, 10:25 PM IST
  • ಕನ್ನಡ ಸಿನಿ ಕ್ಷೇತ್ರದಲ್ಲೇ ‘ವಿಕ್ರಾಂತ್ ರೋಣ’ ದೊಡ್ಡ ಹೆಸರು. ರಿಲೀಸ್‌ಗೆ ಮೊದಲೇ ‘ವಿಕ್ರಾಂತ್ ರೋಣ’ ಜಗತ್ತಿನಾದ್ಯಂತ ಸಂಚಲನವನ್ನೇ ಸೃಷ್ಟಿ ಮಾಡುತ್ತಿದೆ.
ನಟ ಕಿಚ್ಚ ಸುದೀಪ್‌ ಸಿನಿಮಾಗೆ ಆನೆಬಲ..! ‘ವಿಕ್ರಾಂತ್ ರೋಣ’ನಿಗೆ ‘ಪಿವಿಆರ್‌’ ಸಾಥ್..!‌ title=

ಬೆಂಗಳೂರು: ಕನ್ನಡ ಸಿನಿ ಕ್ಷೇತ್ರದಲ್ಲೇ ‘ವಿಕ್ರಾಂತ್ ರೋಣ’ ದೊಡ್ಡ ಹೆಸರು. ರಿಲೀಸ್‌ಗೆ ಮೊದಲೇ ‘ವಿಕ್ರಾಂತ್ ರೋಣ’ ಜಗತ್ತಿನಾದ್ಯಂತ ಸಂಚಲನವನ್ನೇ ಸೃಷ್ಟಿ ಮಾಡುತ್ತಿದೆ. ಇನ್ನೇನು ಸಿನಿಮಾ ರಿಲೀಸ್‌ಗೆ ದಿನಾಂಕ ಹತ್ತಿರವಾಗುತ್ತಿರುವ ಸಂದರ್ಭದಲ್ಲೇ, ಅಭಿಮಾನಿಗಳಿಗೆ ದಿನಕ್ಕೊಂದು ಸರ್ಪ್ರೈಸ್‌ ನೀಡುತ್ತಿರುವ ‘ವಿಕ್ರಾಂತ್ ರೋಣ’ & ಟೀಂ ಇವತ್ತು ಕೂಡ ಒಂದು ದೊಡ್ಡ ಗಿಫ್ಟ್‌ ಕೊಟ್ಟಿದೆ.

ಅಂದಹಾಗೆ ‘ವಿಕ್ರಾಂತ್ ರೋಣ’ ಸಿನಿಮಾಗೆ ‘ಪಿವಿಆರ್‌’ ಸಾಥ್‌ ನೀಡಿದೆ. ಸಿನಿ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಸಂಸ್ಥೆ ‘ಪಿವಿಆರ್‌’. ಹೀಗೆ ಪ್ಯಾನ್‌ ವರ್ಲ್ಡ್‌ ಸಿನಿಮಾ ‘ವಿಕ್ರಾಂತ್ ರೋಣ’ಗೆ ‘ಪಿವಿಆರ್‌’ ಹೆಗಲು ಕೊಟ್ಟಿದೆ. ಈ ಮೂಲಕ ‘ವಿಕ್ರಾಂತ್ ರೋಣ’ನ ಸದ್ದು ಎಲ್ಲೆಲ್ಲೂ ಮೊಳಗುತ್ತಿದೆ. ಈ ಕುರಿತು ‘ವಿಕ್ರಾಂತ್ ರೋಣ’ ತಂಡ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದು, ಕಿಚ್ಚ ಸುದೀಪ್‌ ಅಭಿಮಾನಿಗಳಿಗೆ ದೊಡ್ಡ ಗಿಫ್ಟ್‌ ಸಿಕ್ಕಂತಾಗಿದೆ.

ಇದನ್ನೂ ಓದಿ: ಕಾರ್ಮಿಕರ ತುಟ್ಟಿ ಭತ್ಯೆಯನ್ನು ಹೆಚ್ಚಳ ಮಾಡಿದ ಕೇಜ್ರಿವಾಲ್ ಸರ್ಕಾರ

ಹಾಲಿವುಡ್‌ ಶೇಕ್..!‌
‘ವಿಕ್ರಾಂತ್ ರೋಣ’ ಸಿನಿಮಾ ಹವಾ ಹೇಗಿದೆ ಅಂದರೆ ಇದೇ ಮೊದಲ ಬಾರಿಗೆ ಕನ್ನಡದ ಸಿನಿಮಾ ಒಂದು ಹಾಲಿವುಡ್‌ಗೆ ಲಗ್ಗೆ ಇಡುತ್ತಿದೆ. ಇಂಗ್ಲಿಷ್‌ ಭಾಷೆಗೆ ‘ವಿಕ್ರಾಂತ್ ರೋಣ’ ಡಬ್‌ ಆಗಿದ್ದು, ಸ್ವತಃ ನಟ ಸುದೀಪ್‌ ಅವರೇ ಚಂದದ ಇಂಗ್ಲಿಷ್‌ ಮಾತನಾಡಿರುವ ವಿಡಿಯೋ ವೈರಲ್‌ ಆಗುತ್ತಿದೆ. ಇದರ ನಡುವೆ ‘ವಿಕ್ರಾಂತ್ ರೋಣ’ ಹಿಂದಿ ವರ್ಷನ್‌ಗೆ ಸ್ವತಃ ಸಲ್ಮಾನ್‌ ಖಾನ್‌ ಸಾಥ್‌ ನೀಡಿ ಆನೆಬಲ ತುಂಬಿದ್ದಾರೆ. ಮತ್ತೊಂದು ಕಡೆ ‘ವಿಕ್ರಾಂತ್ ರೋಣ’ ಡಿಸ್ಟ್ರಿಬ್ಯೂಟ್ ಮಾಡಲಿದೆ ‘ಪಿವಿಆರ್‌’ ಸಂಸ್ಥೆ.

ಇದನ್ನೂ ಓದಿ : Sourav Ganguly New House : 40 ಕೋಟಿ ಕೊಟ್ಟು ಹೊಸ ಬಂಗಲೆ ಖರೀದಿಸಿದ ಗಂಗೂಲಿ!

ಒಟ್ಟಾರೆ ಈ ಎಲ್ಲಾ ಬೆಳವಣಿಗೆಗಳು ಕನ್ನಡ ಸಿನಿ ಕ್ಷೇತ್ರವನ್ನು ಜಗತ್ತಿನಾದ್ಯಂತ ಸದ್ದು ಮಾಡುವಂತೆ ಮಾಡುತ್ತಿವೆ. ಒಂದಾದ ಬಳಿಕ ಮತ್ತೊಂದು ಕನ್ನಡ ಸಿನಿಮಾ ಜಾಗತಿಕ ಮಾರುಕಟ್ಟೆಯನ್ನೇ ಶೇಕ್‌ ಮಾಡುತ್ತಿದ್ದು, ಹಾಲಿವುಡ್‌ನ ಮಂದಿ ಎದೆಯಲ್ಲೂ ಈ ಕುರಿತು ಸಂಚಲನ ಸೃಷ್ಟಿಯಾಗುತ್ತಿರೋದು ಪಕ್ಕಾ. ಯಾಕಂದ್ರೆ ಭಾರತೀಯ ಸಿನಿಮಾರಂಗ ಅದರಲ್ಲೂ ಸ್ಯಾಂಡಲ್‌ವುಡ್‌ ಇಷ್ಟು ದೊಡ್ಡ ಮಟ್ಟಿಗೆ ಬೆಳೆಯುತ್ತಿರುವುದು ಹಾಲಿವುಡ್‌ ಸಿನಿಮಾಗಳಿಗೂ ಸವಾಲು ಎದುರಾಗುವಂತೆ ಮಾಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News