Shivaji Suratkal 2: ರಮೇಶ್ ಅರವಿಂದ್ ನಟನೆಯ "ಶಿವಾಜಿ ಸುರತ್ಕಲ್ 2" ಚಿತ್ರಕ್ಕೆ ಮೈಸೂರು ಮಹಾರಾಜರಿಂದ ಮೆಚ್ಚುಗೆ !

Shivaji Suratkal 2: ಆಕಾಶ್ ಶ್ರೀವತ್ಸ ನಿರ್ದೇಶನದಲ್ಲಿ ರಮೇಶ್ ಅರವಿಂದ್ ನಾಯಕರಾಗಿ ನಟಿಸಿರುವ "ಶಿವಾಜಿ ಸುರತ್ಕಲ್ 2" ಚಿತ್ರವನ್ನು ಇತ್ತೀಚೆಗೆ ಮೈಸೂರು ಮಹಾರಾಜರಾದ ಶ್ರೀಯದುವೀರ ಒಡೆಯರ್ ಅವರು ವೀಕ್ಷೀಸಿದರು. ನಾಯಕ ರಮೇಶ್ ಅರವಿಂದ್ ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Written by - Zee Kannada News Desk | Last Updated : May 25, 2023, 01:46 PM IST
  • ರಮೇಶ್ ಅರವಿಂದ್ ನಾಯಕರಾಗಿ ನಟಿಸಿರುವ "ಶಿವಾಜಿ ಸುರತ್ಕಲ್ 2
  • ಮೈಸೂರು ಮಹಾರಾಜರಾದ ಶ್ರೀಯದುವೀರ ಒಡೆಯರ್ ರಿಂದ ಮೆಚ್ಚಗೆ
  • ಶಿವಾಜಿ ಸುರತ್ಕಲ್ 2 ಸಿನಿಮಾ ಚಿತ್ರಮಂದಿರದಲ್ಲಿ ವೀಕ್ಷಿಸಿದ ಒಡೆಯರ್
Shivaji Suratkal 2: ರಮೇಶ್ ಅರವಿಂದ್ ನಟನೆಯ "ಶಿವಾಜಿ ಸುರತ್ಕಲ್ 2" ಚಿತ್ರಕ್ಕೆ ಮೈಸೂರು ಮಹಾರಾಜರಿಂದ  ಮೆಚ್ಚುಗೆ ! title=

Shivaji Suratkal 2: ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ರೇಖಾ ಕೆ.ಎನ್ ಹಾಗೂ ಅನೂಪ್ ಗೌಡ ನಿರ್ಮಿಸಿರುವ, ಆಕಾಶ್ ಶ್ರೀವತ್ಸ ನಿರ್ದೇಶನದಲ್ಲಿ ರಮೇಶ್ ಅರವಿಂದ್ ನಾಯಕರಾಗಿ ನಟಿಸಿರುವ "ಶಿವಾಜಿ ಸುರತ್ಕಲ್ 2" ಚಿತ್ರವನ್ನು ಇತ್ತೀಚೆಗೆ ಮೈಸೂರು ಮಹಾರಾಜರಾದ ಶ್ರೀಯದುವೀರ ಒಡೆಯರ್ ಅವರು ವೀಕ್ಷೀಸಿದರು. ನಾಯಕ ರಮೇಶ್ ಅರವಿಂದ್ ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಈ ಸಮಸ್ಯೆಯೇ ಸಲ್ಮಾನ್ ಖಾನ್ ಇನ್ನೂ ಮದುವೆಯಾಗದಿರಲು ಕಾರಣವಂತೆ! ತಂದೆ ಸಲೀಂ ಬಿಚ್ಚಿಟ್ಟ ಸತ್ಯ

"ನನಗೆ ಪತ್ತೆಧಾರಿ ಸಿನಿಮಾಗಳು ಬಹಳ ಇಷ್ಟ. ಶಿವಾಜಿ ಸುರತ್ಕಲ್ 2 ಚಿತ್ರ ತುಂಬಾ ಚೆನ್ನಾಗಿದೆ. ಈ ಚಿತ್ರದ ಮುಂದುವರಿದ ಭಾಗಗಳು ಇನ್ನು ಹೆಚ್ಚಾಗಿ ಬರಲಿ ಎಂದು ಮಹಾರಾಜರು ಮನತುಂಬಿ ಹಾರೈಸಿದರು.

ಈಗಾಗಲೇ ಜನಮನಸೂರೆಗೊಂಡಿರುವ ಈಚಿತ್ರ  ಚಿತ್ರಮಂದಿರಗಳಲ್ಲಿ ಯಶಸ್ವಿ 41 ದಿನಗಳನ್ನು ಪೂರೈಸಿ, 50ನೇ ದಿನದತ್ತ ಹೆಜ್ಜೆ ಹಾಕುತ್ತಿದೆ. ವಾಜಿ ಸುರತ್ಕಲ್ ಬರಹಗಾರ-ನಿರ್ದೇಶಕ ಆಕಾಶ್ ಶ್ರೀವತ್ಸ ಅವರ ಪತ್ತೇದಾರಿ ಫ್ರಾಂಚೈಸ್ ಆಗಿದ್ದು, ರಮೇಶ್ ಅರವಿಂದ್ ಅವರು ಟೈಟಲ್ ಸ್ಲೂತ್ ಆಗಿ ನಾಯಕರಾಗಿದ್ದಾರೆ.

ಇದನ್ನೂ ಓದಿ: ಅಭಿಮಾನಿಯ ಕೊನೆ ಆಸೆ ಈಡೇರಿಸಿದ ಶಾರುಖ್‌ ಖಾನ್‌;ಹೃದಯವಂತ ಎಂದ ಫ್ಯಾನ್ಸ್‌

ವಿವರಗಳಿಗಾಗಿ ದೃಷ್ಟಿ ಹೊಂದಿರುವ ವಿಲಕ್ಷಣ ಪೋಲೀಸ್ ಆಗಿ ಕಲ್ಪಿಸಲ್ಪಟ್ಟ ಶಿವಾಜಿಯು ತನ್ನ ಗರ್ಭಿಣಿ ಪತ್ನಿ ಜನನಿ (ರಾಧಿಕಾ ನಾರಾಯಣ್) ನಿಗೂಢ ಕಣ್ಮರೆ ಮತ್ತು ಸಾವಿನಿಂದ ಪೀಡಿತನಾಗುತ್ತಾನೆ, ಅವನು ತನ್ನ ಉಪ-ಪ್ರಜ್ಞೆಯ ಮನಸ್ಸನ್ನು ಆಗಾಗ್ಗೆ ನೋಡುತ್ತಾನೆ ಮತ್ತು ಕಾರಣ ಮತ್ತು ವಿವೇಕದ ಧ್ವನಿಯಾಗುತ್ತಾನೆ. ಮೊದಲ ಚಿತ್ರವು 2020 ರಲ್ಲಿ ಹೊರಬಂದಾಗ, ಸಾಂಕ್ರಾಮಿಕ ರೋಗವು ಮುರಿಯುವ ಸ್ವಲ್ಪ ಮೊದಲು, ಎರಡನೆಯದು ಮೂರು ವರ್ಷಗಳ ನಂತರ ಚೆನ್ನಾಗಿ ಮೂಡಿ ಬಂದಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News