ಈ ಸಮಸ್ಯೆಯೇ ಸಲ್ಮಾನ್ ಖಾನ್ ಇನ್ನೂ ಮದುವೆಯಾಗದಿರಲು ಕಾರಣವಂತೆ! ತಂದೆ ಸಲೀಂ ಬಿಚ್ಚಿಟ್ಟ ಸತ್ಯ

Salman Khan Marriage News :ವಯಸ್ಸು  60ರ ಸನಿಹವಾಗುತ್ತಿದ್ದರೂ ಸಲ್ಮಾನ್ ಇನ್ನೂ ಮದುವೆಯಾಗದಿರುವುದಕ್ಕೆ ಏನು ಕಾರಣ ಎನ್ನುವುದನ್ನು ಸಲ್ಮಾನ್ ತಂದೆ ಸಲೀಂ  ಖಾನ್ ಹೇಳಿದ್ದಾರೆ. ಚಾಟ್ ಶೋವೊಂದರಲ್ಲಿ ಈ ಬಗ್ಗೆ ಕೇಳಿದ  ಪ್ರಶ್ನೆಯಲ್ಲಿ  ಸಲೀಂ ಖಾನ್ ಸತ್ಯ ಹೊರ ಹಾಕಿದ್ದಾರೆ.   

Written by - Ranjitha R K | Last Updated : May 25, 2023, 09:52 AM IST
  • ಸಲ್ಮಾನ್ ಖಾನ್ ಬಾಲಿವುಡ್‌ನಲ್ಲಿ ದೊಡ್ಡ ಸ್ಟಾರ್.
  • ವೈಯಕ್ತಿಕ ಜೀವನದಿಂದಲೂ ಸದಾ ಚರ್ಚೆಯಲ್ಲಿ ಉಳಿಯುವ ನಟ.
  • ಸಲ್ಮಾನ್ ಖಾನ್ ಮದುವೆಯಾಗದೇ ಇರುವುದಕ್ಕೆ ಇದೇ ಕಾರಣ
ಈ ಸಮಸ್ಯೆಯೇ  ಸಲ್ಮಾನ್ ಖಾನ್ ಇನ್ನೂ ಮದುವೆಯಾಗದಿರಲು  ಕಾರಣವಂತೆ! ತಂದೆ ಸಲೀಂ ಬಿಚ್ಚಿಟ್ಟ ಸತ್ಯ  title=

Salman Khan Marriage News : ಸಲ್ಮಾನ್ ಖಾನ್  ಬಾಲಿವುಡ್‌ನಲ್ಲಿ ದೊಡ್ಡ ಸ್ಟಾರ್. ಸಲ್ಮಾನ್ ತನ್ನ ಸಿನಿ ಜೀವನ ಮಾತ್ರವಲ್ಲ ತನ್ನ ವೈಯಕ್ತಿಕ ಜೀವನದಿಂದಲೂ ಸದಾ ಚರ್ಚೆಯಲ್ಲಿ ಉಳಿಯುವ ನಟ. ನಟ ಮಾತ್ರವಲ್ಲ ರಿಯಾಲಿಟಿ ಶೋ ಹೋಸ್ಟ್ ಕೂಡಾ ಹೌದು. ಕಿರುತೆರೆ ರಿಯಾಲಿಟಿ ಶೋ ಬಿಗ್ ಬಾಸ್ ಸಲ್ಮಾನ್ ಖಾನ್ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಸಲ್ಮಾನ್ ಗೆ ಹಲವು ನಟಿಯರ ಜೊತೆ ಅಫೇರ್ ಇತ್ತು ಎನ್ನುವುದು ಬಾಲಿವುಡ್ ನಲ್ಲಿ ಸದಾ ಚಾಲ್ತಿಯಲ್ಲಿರುವ ಗಾಸಿಪ್. ಅಷ್ಟೊಂದು ಗರ್ಲ್ ಫ್ರೆಂಡ್ಸ್ ಇದ್ದರೂ ಕೂಡಾ ಸಲ್ಮಾನ್ ಇಂದಿಗೂ ಬ್ರಹ್ಮಚಾರಿ. ಇದು ಯಾಕೆ ಹೀಗೆ ಎನ್ನುವುದು ಸಲ್ಮಾನ್ ಅಭಿಮಾನಿಗಳ ಮನದಲ್ಲಿ ಮೂಡುವ ಅತಿ ದೊಡ್ಡ ಪ್ರಶ್ನೆ.  ವಯಸ್ಸು  60ರ ಸನಿಹವಾಗುತ್ತಿದ್ದರೂ ಸಲ್ಮಾನ್ ಇನ್ನೂ ಮದುವೆಯಾಗದಿರುವುದಕ್ಕೆ ಏನು ಕಾರಣ ಎನ್ನುವುದನ್ನು ಸಲ್ಮಾನ್ ತಂದೆ ಸಲೀಂ  ಖಾನ್ ಹೇಳಿದ್ದಾರೆ. ಚಾಟ್ ಶೋವೊಂದರಲ್ಲಿ ಈ ಬಗ್ಗೆ ಕೇಳಿದ  ಪ್ರಶ್ನೆಗೆ ಉತ್ತರವಾಗಿ ಸಲೀಂ ಖಾನ್ ಸತ್ಯ ಹೊರ ಹಾಕಿದ್ದಾರೆ. ಸಲ್ಮಾನ್ ಖಾನ್ ಮದುವೆಯಾಗದೇ ಇರುವುದಕ್ಕೆ ಏನು ಕಾರಣ ಎನ್ನುವುದನ್ನು ಹೇಳಿದ್ದಾರೆ. 

ಸಲ್ಮಾನ್ ಯಾಕೆ ಮದುವೆಯಾಗುತ್ತಿಲ್ಲ ಎನ್ನುವುದಕ್ಕೆ ಇಲ್ಲಿದೆ ಉತ್ತರ : 
ಸಲೀಂ ಖಾನ್ ಅವರ ಪತ್ನಿ ಸಲ್ಮಾ ಮತ್ತು ಮಗ ಸಲ್ಮಾನ್ ಖಾನ್ ಅವರೊಂದಿಗೆ ಫರಾ ಖಾನ್ ಅವರ 'ತೇರೆ ಮೇರೆ ಬೀಚ್ ಮೇ' ಶೋನಲ್ಲಿ ಭಾಗಿಯಾಗಿದ್ದರು. ಈ ವೇಳೆ ಸಲ್ಮಾನ್ ಖಾನ್ ಅವರಲ್ಲಿ ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಲಾಗಿದೆ. ಸಲ್ಮಾನ್ ಖಾನ್ ಇನ್ನೂ ಬ್ರಹ್ಮಚಾರಿಯಾಗಿರುವುದಕ್ಕೆ ಕಾರಣ ಏನು ಎನ್ನುವುದನ್ನು ಈ ಶೋನಲ್ಲಿ ಕೇಳಲಾಗಿದೆ. ಈ ಸಂದರ್ಭದಲ್ಲಿ ಈ ಪ್ರಶ್ನೆಗೆ ಸಲ್ಮಾನ್ ತಂದೆ ಸಲೀಂ ಉತ್ತರ ನೀಡಿದ್ದಾರೆ. ಹೌದು, ಸಲ್ಮಾನ್ ಖಾನ್ ಮದುವೆಯಾಗದಿರಲು ಅವರ ತಾಯಿ ಸಲ್ಮಾ ಖಾನ್ ಕಾರಣ ಎಂದು ಸಲೀಂ ಖಾನ್ ಹೇಳಿದ್ದಾರೆ. ಆದರೆ ಸಲ್ಮಾನ್ ಮದುವೆಯಾಗದೇ ಇರುವುದಕ್ಕೆ ಸಲ್ಮಾ ಖಾನ್ ಹೇಗೆ ಹೊಣೆ ಎನ್ನುವ ಪ್ರಶ್ನೆ ಮೂಡುತ್ತದೆ. ಇದನ್ನೂ ಕೂಡಾ ಸಲೀಂ ವಿವರವಾಗಿ ವಿವರಿಸಿದ್ದಾರೆ. 

ಇದನ್ನೂ ಓದಿ : "ನಾನು ಪ್ರಿಯಾಂಕಾ ಚೋಪ್ರಾಳ ಅಂಡರ್ ವೇರ್ ನೋಡಬೇಕು" ಎಂದಿದ್ದ ಸಿನಿಮಾ ನಿರ್ದೇಶಕ...!

ಸಮಸ್ಯೆಯ ಮೂಲ ಇದೇ ಅಂತೆ :
ಸಲ್ಮಾನ್ ಖಾನ್ ಇಲ್ಲಿಯವರೆಗೆ ಬಹಳಷ್ಟು ಮಂದಿ ಹುಡುಗಿಯರ ಜೊತೆ ಪ್ರೀತಿ ಸಂಬಂಧ ಇರಿಸಿಕೊಂಡಿದ್ದಾರೆ. ಆದರೆ ಆ ಸಂಬಂಧ ಮದುವೆ ಎನ್ನುವ ದಡ ಸೇರಲೇ ಇಲ್ಲ. ಇದಕ್ಕೆ ಕಾರಣ ಏನು ಎನ್ನುವುದನ್ನು  ತಂದೆಯೇ ವಿವರಿಸಿದ್ದಾರೆ. ಯಾವ ಹುಡುಗಿಯನ್ನು ಸಲ್ಮಾನ್ ಪ್ರೀತಿಸುತ್ತಾರೋ, ಆ ಹುಡುಗಿಯಲ್ಲಿ ತನ್ನ ತಾಯಿಯನ್ನು ಹುಡುಕಲು ಪ್ರಾರಂಭಿಸುತ್ತಾರೆ ಎಂದು ಸಲೀಂ ಸಾಹೇಬರೇ  ಹೇಳಿದ್ದಾರೆ. ಇದರ ಪರಿಣಾಮವಾಗಿಯೇ ಆ ಹುಡುಗಿ ಸಲ್ಮಾನ್ ಅನ್ನು ಬಿಟ್ಟು ಹೋಗುತ್ತಾಳೆ. ಪ್ರೀತಿ ಮದುವೆಯಾಗಿ ಪರಿವರ್ತನೆಯಾಗಲೇ  ಇಲ್ಲ.  ಇದೇ ಕಾರಣದಿಂದ ಸಲ್ಮಾನ್ ಇಲ್ಲಿಯವರೆಗೆ ಬ್ರಹ್ಮಚಾರಿಯಾಗಿಯೇ ಉಳಿದಿದ್ದಾರೆ. ಅಂದ ಹಾಗೆ ಸಲ್ಮಾನ್ ಖಾನ್ ಗೆ ಈಗ 57 ವರ್ಷ. 

ಇದನ್ನೂ ಓದಿ : Yash Viral Photo: ಬ್ರೌನ್ ಶರ್ಟ್‌ನಲ್ಲಿ ಯಶ್ ಹೊಸ ರಗಡ್ ಲುಕ್.. ಮುಂದಿನ ಸಿನಿಮಾ ಫೋಟೋ ಲೀಕ್!?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News