ಕನ್ನಡ ಸಿನಿಮಾ ಬೆಂಬಲಕ್ಕೆ ನಿಂತ ನ್ಯಾಷುನಲ್ ಕ್ರಶ್ : "ಉಪಾಧ್ಯಕ್ಷ"ನಿಗೆ ರಶ್ಮಿಕಾ ಸಾಥ್

Chikkanna Upadhyaksha movie : ನ್ಯಾಷುನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಸಧ್ಯ ಭಾರತೀಯ ಸಿನಿರಂಗದ ಟಾಪ್‌ ಹೀರೋಯಿನ್‌ ಆಗಿ ಮಿಂಚುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸುಂದರಿ, ಹಿಟ್‌ ಮೇಲೆ ಹಿಟ್‌ ಪಡೆಯುತ್ತಿದ್ದಾರೆ. ಇತ್ತೀಚಿಗೆ ರಶ್ಮಿಕಾ ನಟನೆಯ ಅನಿಮಲ್‌ ಸಿನಿಮಾ ಬ್ಲಾಕ್ಬಸ್ಟರ್‌ ಹಿಟ್‌ ಪಡೆದಿತ್ತು.

Written by - Krishna N K | Last Updated : Jan 21, 2024, 11:57 AM IST
  • ರಶ್ಮಿಕಾ ಮಂದಣ್ಣ ಸಧ್ಯ ಭಾರತೀಯ ಸಿನಿರಂಗದ ಟಾಪ್‌ ಹೀರೋಯಿನ್‌.
  • ಇತ್ತೀಚಿಗೆ ರಶ್ಮಿಕಾ ನಟನೆಯ ಅನಿಮಲ್‌ ಸಿನಿಮಾ ಬ್ಲಾಕ್ಬಸ್ಟರ್‌ ಹಿಟ್‌ ಪಡೆದಿತ್ತು.
  • ಕನ್ನಡ ಸಿನಿಮಾಗೆ ರಶ್ಮಿಕಾ ಸಪೋರ್ಟ್‌ ಮಾಡಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.
ಕನ್ನಡ ಸಿನಿಮಾ ಬೆಂಬಲಕ್ಕೆ ನಿಂತ ನ್ಯಾಷುನಲ್ ಕ್ರಶ್ : "ಉಪಾಧ್ಯಕ್ಷ"ನಿಗೆ ರಶ್ಮಿಕಾ ಸಾಥ್ title=

Rashmika Mandanna : ಕಿರಿಕ್‌ ಪಾರ್ಟಿ, ಅಂಜನಿ ಪುತ್ರ, ಚಮಕ್‌ ನಂತರ ಸ್ಯಾಂಡಲ್‌ವುಡ್‌ ಬಿಟ್ಟಿದ್ದ ರಶ್ಮಿಕಾ ಟಾಲಿವುಡ್‌ಗೆ ಎಂಟ್ರಿಕೊಟ್ಟು ಟಾಪ್‌ ಹಿರೋಯಿನ್‌ ಆಗಿ ಹೊರ ಹೊಮ್ಮಿದ್ದರು. ಚಲೋ ಸಿನಿಮಾದ ಮೂಲಕ ರಶ್ಮಿಕಾ ತೆಲುಗು ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು. ಅಲ್ಲಿಂದ ಅವರು ಚಂದನವನದ ಕಡೆ ಮುಖ ಮಾಡಲೇಇಲ್ಲ.

ಸಧ್ಯ ಚಿಕ್ಕಣ್ಣ ನಟನೆಯ ಬಹುನಿರೀಕ್ಷಿತ ʼಉಪಾಧ್ಯಕ್ಷʼ ಸಿನಿಮಾ ನ್ಯಾಷುನಲ್‌ ಕ್ರಶ್‌ ಸಾಥ್‌ ನೀಡಿದ್ದು, ಚಿತ್ರವನ್ನು ನೋಡುವಂತೆ ಸಿನಿ ಪ್ರೇಕ್ಷಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತ ವಿಡಿಯೋವನ್ನು ಉಪಾಧ್ಯಕ್ಷ ಟೀಂ ಹಂಚಿಕೊಂಡಿದೆ. ಬಹಳ ದಿನಗಳ ನಂತರ ಒಂದು ಕನ್ನಡ ಸಿನಿಮಾಗೆ ರಶ್ಮಿಕಾ ಸಪೋರ್ಟ್‌ ಮಾಡಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. 

ಇದನ್ನೂ ಓದಿ: ಜಕೀಯಕ್ಕೆ ಎಂಟ್ರಿ ಕೊಡ್ತಾರಾ ನಟಿ ಮೀನಾ?... ಆ ಪಕ್ಷ ಸೇರುವ ಸುಳಿವು ನೀಡಿದ ಹಿರಿಯ ತಾರೆ!  

ಹಾಸ್ಯ ನಟ ಚಿಕ್ಕಣ್ಣ ಮೊದಲ ಬಾರಿಗೆ ನಾಯಕನಾಗಿ ನಟಿಸುತ್ತಿರುವ ಸಿನಿಮಾ ಉಪಾಧ್ಯಕ್ಷ. ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಸಾಥ್ ಕೊಟ್ಟಿದ್ದಾರೆ. ಬಹು ದಿನಗಳ ನಂತರ ಕನ್ನಡದ ಸಿನಿಮಾವೊಂದಕ್ಕೆ ಬೆಂಬಲವಾಗಿ ನಿಂತು ಕನ್ನಡದಲ್ಲೇ ಗುಡ್ ಲಕ್ ಹೇಳಿರುವ ರಶ್ಮಿಕಾ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಅಲ್ಲದೆ ಟ್ರೋಲ್‌ ಸಹ ಮಾಡಲಾಗುತ್ತಿದೆ.

ಇನ್ನು 'ಉಪಾಧ್ಯಕ್ಷ' ಸಿನಿಮಾ ಮುಂದಿನ ವಾರ ತೆರೆ ಕಾಣಲಿದೆ. ಈ ಚಿತ್ರವನ್ನು 'ದಿಲ್‌ವಾಲಾ' ಖ್ಯಾತಿಯ ಅನಿಲ್ ಕುಮಾರ್ ನಿರ್ದೇಶಿಸಿದ್ದಾರೆ. ಕಾಮಿಡಿ ಎಂಟರ್‌ಟೈನರ್ ಚಿತ್ರಕ್ಕೆ ಉಮಾಪತಿ ಶ್ರೀನಿವಾಸ್ ಬಂಡವಾಳ ಹೂಡಿದ್ದು, ಅರ್ಜುನ್ ಜನ್ಯ ಸಂಗೀತ, ಶೇಖರ್ ಚಂದ್ರ ಛಾಯಾಗ್ರಹಣ ಹಾಗೂ ಕೆ. ಎಂ ಪ್ರಕಾಶ್ ಸಂಕಲನ ಚಿತ್ರಕ್ಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News