Rashmika Mandanna : ಮಗನನ್ನು ಮದುವೆಯಾಗುವಂತೆ ರಶ್ಮಿಕಾಗೆ ಆಫರ್ ನೀಡಿದ್ರಾ ರವಿಚಂದ್ರನ್‌..!

ನ್ಯಾಷನಲ್ ಕ್ರಷ್‌ ನಟಿ ರಶ್ಮಕಾ ಮಂದಣ್ಣ ಭಾರತೀಯ ಚಿತ್ರರಂಗದ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರು. ಪುಷ್ಪ ಸಿನಿಮಾ ಹಿಟ್‌ ಬಳಿಕ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚುತ್ತಿದ್ದಾರೆ. ರಶ್ಮಿಕಾಗೆ ನಟ ರವಿಚಂದ್ರನ್‌ ಅವರು ತಮ್ಮ ಮಗನನ್ನು ಮದುವೆಯಾಗುವಂತೆ ಕೇಳಿದ್ರಾ ಎನ್ನುವ ಮಾತು ನೆಟ್ಟಿಗರ ಬಾಯಿಂದ ಕೇಳಿ ಬರುತ್ತಿದೆ.

Written by - Krishna N K | Last Updated : Nov 17, 2022, 01:42 PM IST
  • ಮಗನನ್ನು ಮದುವೆಯಾಗುವಂತೆ ರಶ್ಮಿಕಾಗೆ ಆಫರ್ ನೀಡಿದ್ರಾ ರವಿಚಂದ್ರನ್‌
  • ರವಿಚಂದ್ರನ್‌ ಮಾತಿಗೆ ನಾಚಿ ನೀರಾದ ರಶ್ಮಿಕಾ ಮಂದಣ್ಣ
  • ನವ ನಕ್ಷತ್ರ ಅವಾರ್ಡ್‌ ಕಾರ್ಯಕ್ರಮದ ವಿಡಿಯೋ ವೈರಲ್‌
Rashmika Mandanna : ಮಗನನ್ನು ಮದುವೆಯಾಗುವಂತೆ ರಶ್ಮಿಕಾಗೆ ಆಫರ್ ನೀಡಿದ್ರಾ ರವಿಚಂದ್ರನ್‌..! title=

Rashmika Mandanna : ನ್ಯಾಷನಲ್ ಕ್ರಷ್‌ ನಟಿ ರಶ್ಮಕಾ ಮಂದಣ್ಣ ಭಾರತೀಯ ಚಿತ್ರರಂಗದ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರು. ಪುಷ್ಪ ಸಿನಿಮಾ ಹಿಟ್‌ ಬಳಿಕ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚುತ್ತಿದ್ದಾರೆ. ರಶ್ಮಿಕಾಗೆ ನಟ ರವಿಚಂದ್ರನ್‌ ಅವರು ತಮ್ಮ ಮಗನನ್ನು ಮದುವೆಯಾಗುವಂತೆ ಕೇಳಿದ್ರಾ ಎನ್ನುವ ಮಾತು ನೆಟ್ಟಿಗರ ಬಾಯಿಂದ ಕೇಳಿ ಬರುತ್ತಿದೆ.

ಹೌದು.. ಈ ಮಾತು ಕೇಳಿ ಬರೋದಕ್ಕೆ ಕಾರಣ ಒಂದಿದೆ. ಟಿವಿ 9 ಆಯೋಜಿಸಿದ್ದ ನವ ನಕ್ಷತ್ರ ಅವಾರ್ಡ್‌ ಕಾರ್ಯಕ್ರಮದಲ್ಲಿ ರಶ್ಮಿಕಾಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ವೇಳೆ ರವಿಚಂದ್ರನ್‌ ಅವರು ಮಾತನಾಡುತ್ತಾ.. ನನ್ನ ಮಗ ಒಮ್ಮೆ ಬಂದು, ರಶ್ಮಿಕಾ ನನ್ನ ಜೀಮ್‌ಗೆ ವರ್ಕೌಟ್‌ ಮಾಡೋಕೆ ಬರ್ತಾರೆ ಅಂತ ಹೇಳಿದ್ದ.. ಆಗ ನಾನು ಬಿಟ್‌ ಬಿಟ್ಯಲ್ಲೋ ಅಂತ ಹೇಳಿದ್ದೆ ಎನ್ನುವ ಮೂಲಕ ಪರೋಕ್ಷವಾಗಿ ತಮ್ಮ ಮಗನನ್ನು ಮದುವೆ ಆಗುವಂತೆ ರವಿಮಾಮ ಆಫರ್‌ ನೀಡಿದರು. ಇನ್ನು ರವಿಚಂದ್ರನ ಮಾತಿಗೆ ರಶ್ಮಿಕಾ ನಾಚಿ ನೀರಾದರು.

ಇದನ್ನೂ ಓದಿ: ಮಗನನ್ನ ಬಿಟ್ಟು ಮೇಘನಾ ಮೋಜು ಮಸ್ತಿ ಮಾಡ್ತೀದ್ದಾರೆ..! ಸುಂದರ್‌ ರಾಜ್‌ ಬೇಸರ

 

ಸಿನಿಮಾ ವಿಚಾರವಾಗಿ ಹೇಳುವುದಾದ್ರೆ, ರಶ್ಮಿಕಾ ಸದ್ಯ ಕಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ದಳಪತಿ ವಿಜಯ್ ಜೊತೆ ವರಿಸು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ, ಅಲ್ಲು ಅರ್ಜುನ್ ಜೊತೆ ಪುಷ್ಪ-2ನಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ರಶ್ಮಿಕಾ ಗುಡ್ ಬೈ ಸಿನಿಮಾ ಅಷ್ಟು ಪ್ರಭಾವ ಬೀರಲಿಲ್ಲ. ಸದ್ಯ ರಣಬೀರ್ ಕಪೂರ್ ಜೊತೆ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ.

ಇನ್ನು ಭಾರತೀಯ ಸೆಲೆಬ್ರಿಟಿಗಳ ಮುಖಕ್ಕೆ ಡೇವಿಡ್‌ ವಾರ್ನರ್‌ ತನ್ನ ಮುಖ ಜೋಡಿಸಿ ವಿಡಿಯೋಗಳನ್ನು ಮಾಡುವ ಮೂಲಕ ವೈರಲ್‌ ಆಗುತ್ತಿರುವ ವಿಚಾರ ಎಲ್ಲರಿಗೂ ಗೊತ್ತು. ಕೇವಲ ಹೀರೋಗಳ ವಿಡಿಯೋಗಳನ್ನು ಮಾತ್ರ ಮಾಡುತ್ತಿದ್ದ ವಾರ್ನರ್ ಇದೀಗ ರಶ್ಮಿಕಾ ಮಂದಣ್ಣ ವಿಡಿಯೋವನ್ನು ಮಾರ್ಫ್ ಮಾಡಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News