Real Star Upendra: ಸಂಕ್ರಾಂತಿ ಹಬ್ಬಕ್ಕೆ ರಿಯಲ್‍ 'ಸ್ಟಾರ್ ಉಪ್ಪಿ' ನೀಡಲಿದ್ದಾರೆ 'ಬಿಗ್ ಸರ್ಪ್ರೈಸ್ ಗಿಫ್ಟ್'..!

'ಕಬ್ಜ' ಚಿತ್ರದ ಫೋಟೋಶೂಟ್ ಮೇಕಿಂಗ್​ನಲ್ಲಿ ಅಂಡರ್​ ವರ್ಲ್ಡ್​ನ ಹೊಸ ದೃಷ್ಟಿಕೋನವನ್ನು ಬಿಚ್ಚಿಡಲಾಗಿತ್ತು. ಇದರಲ್ಲಿ ಉಪ್ಪಿಯ ವಿಭಿನ್ನ ಗೆಟಪ್ಪು... ಲುಕ್ಕು... ಕಂಡು ಚಿತ್ರಪ್ರೇಮಿಗಳು ಥ್ರಿಲ್ಲಾಗಿದ್ದರು.

Last Updated : Jan 10, 2021, 04:13 PM IST
  • 'ಕಬ್ಜ'.. ರಿಯಲ್‍ ಸ್ಟಾರ್ ಉಪ್ಪಿ ಹಾಗೂ ಆರ್.ಚಂದ್ರು ಕಾಂಬಿನೇಷನ್‍ನಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಈ ಚಿತ್ರ ಪ್ರಕಟವಾದಾಗಿನಿಂದಲೂ ಸ್ಯಾಂಡಲ್‍ವುಡ್‍ನಲ್ಲಿ ಬಿರುಗಾಳಿ ಎದ್ದಿದೆ.
  • ಏಳು ಭಾಷೆಗಳಲ್ಲಿ ಸಿದ್ಧವಾಗುತ್ತಿರುವ ಈ ಅಪ್ಪಟ ಕನ್ನಡ ಮಣ್ಣಿ ಸಿನಿಮಾ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರದ ಮೂಲಕ ಉಪೇಂದ್ರ ಅವರು ಮತ್ತೆ ಕಮರ್ಷಿಯಲ್​ ಸಿನಿಮಾದತ್ತ ಮುಖ ಮಾಡಿದ್ದಾರೆ.
  • 'ಕಬ್ಜ' ಚಿತ್ರದ ಫೋಟೋಶೂಟ್ ಮೇಕಿಂಗ್​ನಲ್ಲಿ ಅಂಡರ್​ ವರ್ಲ್ಡ್​ನ ಹೊಸ ದೃಷ್ಟಿಕೋನವನ್ನು ಬಿಚ್ಚಿಡಲಾಗಿತ್ತು. ಇದರಲ್ಲಿ ಉಪ್ಪಿಯ ವಿಭಿನ್ನ ಗೆಟಪ್ಪು... ಲುಕ್ಕು... ಕಂಡು ಚಿತ್ರಪ್ರೇಮಿಗಳು ಥ್ರಿಲ್ಲಾಗಿದ್ದರು.
Real Star Upendra: ಸಂಕ್ರಾಂತಿ ಹಬ್ಬಕ್ಕೆ ರಿಯಲ್‍ 'ಸ್ಟಾರ್ ಉಪ್ಪಿ' ನೀಡಲಿದ್ದಾರೆ 'ಬಿಗ್ ಸರ್ಪ್ರೈಸ್ ಗಿಫ್ಟ್'..! title=

ಬೆಂಗಳೂರು: 'ಕಬ್ಜ'.. ರಿಯಲ್‍ ಸ್ಟಾರ್ ಉಪ್ಪಿ ಹಾಗೂ ಆರ್.ಚಂದ್ರು ಕಾಂಬಿನೇಷನ್‍ನಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಈ ಚಿತ್ರ ಪ್ರಕಟವಾದಾಗಿನಿಂದಲೂ ಸ್ಯಾಂಡಲ್‍ವುಡ್‍ನಲ್ಲಿ ಬಿರುಗಾಳಿ ಎದ್ದಿದೆ. ಏಳು ಭಾಷೆಗಳಲ್ಲಿ ಸಿದ್ಧವಾಗುತ್ತಿರುವ ಈ ಅಪ್ಪಟ ಕನ್ನಡ ಮಣ್ಣಿ ಸಿನಿಮಾ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರದ ಮೂಲಕ ಉಪೇಂದ್ರ ಅವರು ಮತ್ತೆ ಕಮರ್ಷಿಯಲ್​ ಸಿನಿಮಾದತ್ತ ಮುಖ ಮಾಡಿದ್ದಾರೆ. ಈಗಾಗಲೇ ಚಿತ್ರತಂಡ ರಿಲೀಸ್​ ಮಾಡಿರುವ ಥೀಮ್​ ಪೋಸ್ಟರ್​, ಪೋಸ್ಟರ್​ ಹಾಗೂ ವಿಭಿನ್ನವಾದ ಫೋಟೋಶೂಟ್ ಸಿನಿ ದುನಿಯಾದಲ್ಲಿ ಸಖತ್​ ಸಂಚಲನ ಸೃಷ್ಟಿಸಿದೆ.

'ಕಬ್ಜ' ಚಿತ್ರದ ಫೋಟೋಶೂಟ್ ಮೇಕಿಂಗ್​ನಲ್ಲಿ ಅಂಡರ್​ ವರ್ಲ್ಡ್​ನ ಹೊಸ ದೃಷ್ಟಿಕೋನವನ್ನು ಬಿಚ್ಚಿಡಲಾಗಿತ್ತು. ಇದರಲ್ಲಿ ಉಪ್ಪಿ(Upendra)ಯ ವಿಭಿನ್ನ ಗೆಟಪ್ಪು... ಲುಕ್ಕು... ಕಂಡು ಚಿತ್ರಪ್ರೇಮಿಗಳು ಥ್ರಿಲ್ಲಾಗಿದ್ದರು. ಕೆಜಿಎಫ್​ ನಂತರ ಕನ್ನಡದಲ್ಲಿ ಭಾರೀ ಮಟ್ಟದಲ್ಲಿ ಸದ್ದು ಮಾಡಲಿರುವ ಸಿನಿಮಾ ಎಂದೇ ಹೇಳಲಾಗುತ್ತಿದೆ. ಇದರಿಂದಾಗಿ ಕಬ್ಜ ಚಿತ್ರದ ಬಗ್ಗೆ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲವಿದೆ.

ಈ ಸಿನಿಮಾದಲ್ಲಿ ಟಾಲಿವುಡ್ ಸುಂದರಿ ಕಾಜಲ್​ ನಾಯಕಿಯಾಗಿ ಅಭಿನಯಿಸಲಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಡೇಟ್ಸ್​ ಸಮಸ್ಯೆಯಿಂದಾಗಿ ಕಾಜಲ್​ ಈ ಚಿತ್ರದಲ್ಲಿ ಅಭಿನಯಿಸುತ್ತಿಲ್ಲವಂತೆ. 'ಕಬ್ಜ' ಸಿನಿಮಾ 80ರ ದಶಕದ ಡಾನ್​ ಒಬ್ಬರ ಕತೆಯಾಗಿದ್ದು, ಇದರಲ್ಲಿ ಬೇರೆ ಭಾಷೆಗಳ ಖಳ ನಟರೂ ಕಾಣಿಸಿಕೊಳ್ಳಲಿದ್ದಾರಂತೆ.

D BOSS : ಈ ಸಲ ಹುಟ್ಟುಹಬ್ಬ ಆಚರಣೆ ಇಲ್ಲ , ಮಾರ್ಚ್ 11ಕ್ಕೆ ರಾಬರ್ಟ್ ರಿಲೀಸ್ : facebook liveನಲ್ಲಿ ಅಭಿಮಾನಿಗಳೊಂದಿಗೆ ದರ್ಶನ್ ಮಾತು

ಸಂಕ್ರಾಂತಿ ಹಬ್ಬಕ್ಕೆ ದೊಡ್ಡ ಸರ್ಪ್ರೈಸ್​ ಒಂದನ್ನು ಪ್ಲಾನ್​ ಮಾಡಿದ್ದು, ಹಬ್ಬದಂದು ಬೆಳಿಗ್ಗೆ 10ಕ್ಕೆ ತಿಳಿಯದಿದೆ. ಹೌದು, ಚಿತ್ರತಂಡ ಸರ್ಪ್ರೈಸ್​ ಏನೋ ಪ್ಲಾನ್​ ಮಾಡಿದೆ. ಆದರೆ ಅದು ಏನು ಅನ್ನೋದು ಮಾತ್ರ ಇನ್ನೂ ಬಹಿರಂಗವಾಗಿಲ್ಲ.

Sonakshi Sihnaಗೆ ಕಳ್ಳಿ ಎಂದು ಕರೆದ Huma Qurreshi, ಕಾರಣ ಇಲ್ಲಿದೆ

ಈ ಹಿಂದೆ “ಐ ಲವ್‌ ಯು’ ಚಿತ್ರವನ್ನು ಕನ್ನಡ ಹಾಗೂ ತೆಲುಗಿನಲ್ಲಷ್ಟೇ ಬಿಡುಗಡೆ ಮಾಡಿದ್ದ ಚಂದ್ರು, ಈ ಬಾರಿ ಬರೋಬ್ಬರಿ ಏಳು ಭಾಷೆಗಳಲ್ಲಿ ತಮ್ಮ ಹೊಸ ಸಿನಿಮಾವನ್ನು ಬಿಡುಗಡೆ ಮಾಡಲಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಬೆಂಗಾಲಿ, ಮರಾಠಿ ಭಾಷೆಗಳಲ್ಲಿ ಈ ಚಿತ್ರವನ್ನು ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಈ ಮೂಲಕ ಚಂದ್ರು ಪ್ಯಾನ್‌ ಇಂಡಿಯಾದತ್ತ ಮುಖ ಮಾಡಿದ್ದಾರೆ.

Rocking Star Yash: ಕಿರುತೆರೆಗೆ ಎಂಟ್ರಿ ಕೊಟ್ಟ ರಾಕಿಂಗ್‌ ಸ್ಟಾರ್ ಯಶ್‌ 'ತಾಯಿ ಪುಷ್ಪಾ'..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News