Renukaswamy Murder Case: ದರ್ಶನ್‌ & ಗ್ಯಾಂಗ್‌ನಿಂದ ತಪ್ಪಿಸಿಕೊಳ್ಳಲು ಅವಕಾಶವಿದ್ರೂ ಓಡಿ ಹೋಗದ ರೇಣುಕಾಸ್ವಾಮಿ!

Renukaswamy Murder Case: ಬೆಂಗಳೂರು ತಲುಪುವಷ್ಟರಲ್ಲಿ ಹಲವು ಬಾರಿ ನಾನು ಕಾರು ನಿಲ್ಲಿಸಿದ್ದೆ. ರೇಣುಕಾಸ್ವಾಮಿ ಅಲ್ಲಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಅವಕಾಶವಿತ್ತು. ಆದರೆ ಆತ ತಪ್ಪಿಸಿಕೊಳ್ಳಲಿಲ್ಲವೆಂದು ಮೋಹನ್‌ಗೆ ರವಿ ಹೇಳಿದ್ದನಂತೆ. ​

Written by - Puttaraj K Alur | Last Updated : Jun 15, 2024, 04:17 PM IST
  • ʼಡಿʼ ಗ್ಯಾಂಗ್‌ನಿಂದ ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣ
  • ಹತ್ಯೆಯಾದ ರೇಣುಕಾ ಸ್ವಾಮಿ ತಪ್ಪಿಸಿಕೊಳ್ಳಲು ಸಾಕಷ್ಟು ಅವಕಾಶವಿತ್ತು
  • ಪೊಲೀಸರ ವಿಚಾರಣೆ ವೇಳೆ ಆರೋಪಿಗಳಿಂದ ಸ್ಫೋಟಕ ಸತ್ಯ ಬೆಳಕಿಗೆ
Renukaswamy Murder Case: ದರ್ಶನ್‌ & ಗ್ಯಾಂಗ್‌ನಿಂದ ತಪ್ಪಿಸಿಕೊಳ್ಳಲು ಅವಕಾಶವಿದ್ರೂ ಓಡಿ ಹೋಗದ ರೇಣುಕಾಸ್ವಾಮಿ! title=
ಓಡಿ ಹೋಗದ ರೇಣುಕಾಸ್ವಾಮಿ!

Renukaswamy Murder Case: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ಆತನ ಗೆಳತಿ ಪವಿತ್ರ ಗೌಡ ಸೇರಿದಂತೆ ಇದುವರೆಗೆ ೧೮ ಜನರನ್ನು ಬಂಧಿಸಲಾಗಿದೆ. ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು, ಹಲವಾರು ಪ್ರಬಲ ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸಿದ್ದು, ಮಹಜರು ಪ್ರಕ್ರಿಯೆ ಬಹುತೇಕ ಮುಗಿದದಿದೆ.

ಹತ್ಯೆಯಾದ ರೇಣುಕಾಸ್ವಾಮಿಯನ್ನು ಅಪಹರಣ ಮಾಡಲಾಗಿದ್ದ ಚಿತ್ರದುರ್ಗಕ್ಕೂ ತೆರಳಿ ಅಲ್ಲಿಯೂ ಮಹಜರು ಮಾಡಲಾಗಿದೆ. ಪ್ರಕರಣದ A8 ಆರೋಪಿ ರವಿ ಪೊಲೀಸರಿಗೆ ಶರಣಾಗಿದ್ದಾನೆ. ರವಿಯ ಸ್ನೇಹಿತ ಮೋಹನ್ ಎಂಬಾತ ರೇಣುಕಾ ಸ್ವಾಮಿಯ ಅಪಹರಣದ ಬಗ್ಗೆ ಬಾಯ್ಬಿಟ್ಟಿದ್ದಾನೆ.ಆರೋಪಿ ರವಿ ಕ್ಯಾಬ್ ಚಾಲಕನಾಗಿದ್ದು, ಟೊಯೊಟಾ ಇಟಿಯಾಸ್ ಕಾರು ಇಟ್ಟುಕೊಂಡು ಬಾಡಿಗೆ ಓಡಿಸುತ್ತಿದ್ದ. ಆತನ ಮತ್ತೊಬ್ಬ ಗೆಳೆಯ ಕರೆ ಮಾಡಿ ಬೆಂಗಳೂರಿಗೆ ಬಾಡಿಗೆಗೆ ಹೋಗಲು ಹೇಳಿದ್ದನಂತೆ. ಅದರಂತೆ ಜಗ್ಗು ಎಂಬಾತನ ಬೇಡಿಕೆ ಮೇರೆಗೆ ರವಿ ಇಟಿಯಾಸ್ ಕಾರು ತೆಗೆದುಕೊಂಡು ಹೋಗಿದ್ದಾನೆ. ಚಿತ್ರದುರ್ಗದ ಬಳಿ ಜಗ್ಗು, ಅನು, ರಘು ಹಾಗೂ ರೇಣುಕಾಸ್ವಾಮಿ ಕಾರಿಗೆ ಹತ್ತಿದ್ದಾರೆ.

ಇದನ್ನೂ ಓದಿ: ಮಲ್ಲಿ ಮಿಸ್ಸಿಂಗ್‌ ಕುರಿತು ಹೆಚ್ಚಿದ ಅನುಮಾನ: ಸಿನಿಮಾ ಬ್ಯಾನರ್‌ ಇನ್ನೂ ಆಕ್ಟೀವ್‌..!

ಕಾರಿನಲ್ಲಿ ಹೋಗುವಾಗಲೇ ರೇಣುಕಾ ಸ್ವಾಮಿಗೆ ರಘು, ಜಗ್ಗು ಇನ್ನಿತರರು ಪವಿತ್ರಾಗೌಡಗೆ ಫೋಟೊ ಕಳಿಸಿರುವ ಬಗ್ಗೆ ಪ್ರಶ್ನಿಸಿದ್ದರಂತೆ. ಇದಕ್ಕೆ ರೇಣುಕಾಸ್ವಾಮಿ, ʼಅದು ತನ್ನ ಅಭ್ಯಾಸ, ನಾನು ಹಲವರಿಗೆ ಮೆಸೇಜ್ ಮಾಡುತ್ತಿರುತ್ತೇನೆʼ ಅಂತಾ ಹೇಳಿದ್ದಾನೆಂದು ರವಿ ತಮ್ಮ ಬಳಿ ಹೇಳಿದ್ದಾಗಿ ಮೋಹನ್ ತಿಳಿಸಿದ್ದಾನೆ. ಇದಲ್ಲದೆ ತುಮಕೂರಿನಲ್ಲಿ ಒಟ್ಟಿಗೆ ಎಲ್ಲರೂ ತಿಂಡಿ ತಿಂದಿದ್ದು, ಅಲ್ಲಿಯೂ ಸಹ ರೇಣುಕಾ ಸ್ವಾಮಿಯೇ ಬಿಲ್ ಕೊಟ್ಟಿದ್ದನೆಂದು ಮೋಹನ್ ಬಳಿ ರವಿ ಹೇಳಿಕೊಂಡಿದ್ದಾನಂತೆ.

ಬೆಂಗಳೂರು ತಲುಪುವಷ್ಟರಲ್ಲಿ ಹಲವು ಬಾರಿ ನಾನು ಕಾರು ನಿಲ್ಲಿಸಿದ್ದೆ. ರೇಣುಕಾಸ್ವಾಮಿ ಅಲ್ಲಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಅವಕಾಶವಿತ್ತು. ಆದರೆ ಆತ ತಪ್ಪಿಸಿಕೊಳ್ಳಲಿಲ್ಲವೆಂದು ಮೋಹನ್‌ಗೆ ರವಿ ಹೇಳಿದ್ದನಂತೆ. ಹೀಗಾಗಿ ಕಾರನ್ನು ನೇರವಾಗಿ ಶೆಡ್​ ಬಳಿಯೇ ತೆಗೆದುಕೊಂಡು ಹೋಗಲಾಯಿತು. ಅಲ್ಲಿ ಅದಾಗಲೇ ಸುಮಾರು 30 ಜನರು ಇದ್ದರಂತೆ. ರೇಣುಕಾ ಸ್ವಾಮಿಯನ್ನು ನೋಡಿ ಆತನನ್ನು ಹೊಡೆಯಲು ಇಷ್ಟೋಂದು ಜನರು ಬೇಕಾ ಅಂತಾ ಎಂದುಕೊಂಡು ಕೆಲವರು ಅಲ್ಲಿಂದ ಹೊರಟು ಹೋದರಂತೆ. ಕಾರು ಚಾಲಕ ರವಿ, ಜಗ್ಗು ಹಾಗೂ ಅನುರನ್ನು ಶೆಡ್​ನ ಹೊರಗೆ ಇರುವಂತೆ ಹೇಳಿ ರಾಘು ಹಾಗೂ ರೇಣುಕಾಸ್ವಾಮಿಯನ್ನು ಮಾತ್ರ ಒಳಗಡೆ ಕರೆದುಕೊಂಡು ಹೋದರಂತೆ.

ಇದನ್ನೂ ಓದಿ: Sangeetha Sringeri: ಬಿಗ್‌ಬಾಸ್‌ ಬ್ಯೂಟಿ ಸಂಗೀತಾ ಶೃಂಗೇರಿ‌ ಮದುವೆ ಆಗೋ ಹುಡುಗ ಇವರಂತೆ!

ಬಹಳಷ್ಟು ಹೊತ್ತು ರವಿ, ಜಗ್ಗು, ಅನು ಶೆಡ್‌ನ ಹೊರಗಡೆಯೇ ನಿಂತಿದ್ದರಂತೆ. ಬಳಿಕ ರಘು ಹೊರಗೆ ಬಂದು ರೇಣುಕಾಸ್ವಾಮಿ ಕೊಲೆ ಆಗಿಬಿಟ್ಟಿದೆ, ನೀನು ಅಪ್ರೂವರ್ ಆಗುತ್ತೀಯಾ ಅಂತಾ ರವಿಯನ್ನು ಕೇಳಿದ್ದನಂತೆ. ಆದರೆ ಅದಕ್ಕೆ ರವಿ ಒಪ್ಪಿಕೊಂಡಿಲ್ಲ. ಕೊನೆಗೆ ರಘು ನೀಡಿದ ೪ ಸಾವಿರ ಕಾರಿನ ಬಾಡಿಗೆ ಪಡೆದು ಜಗ್ಗು ಹಾಗೂ ಅನುವನ್ನು ಕಾರಿಗೆ ಹತ್ತಿಸಿಕೊಂಡು ಚಿತ್ರದುರ್ಗಕ್ಕೆ ವಾಪಸ್ಸಾಗಿದ್ದರಂತೆ. ಪ್ರಕರಣ ದಾಖಲಾಗಿ ೨ ದಿನದ ಬಳಿಕ ತಾನೇ ಹೋಗಿ ಪೊಲೀಸರ ಮುಂದೆ ಶರಣಾಗಿದ್ದಾರೆಂದು ರವಿ ಸ್ನೇಹಿತ ಹೇಳಿದ್ದಾನೆ. ಒಟ್ನಲ್ಲಿ ದರ್ಶನ್‌ ಅಂಡ್‌ ಗ್ಯಾಂಗ್‌ನಿಂದ ತಪ್ಪಿಸಿಕೊಳ್ಳಲು ಅವಕಾಶವಿದ್ದರೂ ರೇಣುಕಾಸ್ವಾಮಿ ತಪ್ಪಿಸಿಕೊಳ್ಳಲಿಲ್ಲ. ದುಷ್ಟರ ಕೈಗೆ ಸಿಕ್ಕು ಚಿತ್ರಹಿಂಸೆ ಅನುಭವಿಸಿ ನರಳಿ ನರಳಿ ಪ್ರಾಣಬಿಟ್ಟಿದ್ದಾನೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News