close

News WrapGet Handpicked Stories from our editors directly to your mailbox

ಕಿಚ್ಚ ಸುದೀಪ್, ಪ್ರಭುದೇವ ಜೊತೆ ಊರ್ವಶಿ ಹಾಡಿಗೆ ಸ್ಟೆಪ್ ಹಾಕಿದ ಸಲ್ಮಾನ್ ಖಾನ್! ವೀಡಿಯೋ ವೈರಲ್

ಸೂಪರ್ ನಟ, ಡ್ಯಾನ್ಸರ್ ಆದ ಪ್ರಭುದೇವ ಹಾಗೂ ಕಿಚ್ಚ ಸುದೀಪ್ ಜೊತೆ ಊರ್ವಶಿ ಹಾಡಿಗೆ ಸ್ಟೆಪ್ ಹಾಕಿದ ವೀಡಿಯೋವೊಂದನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. 

Divyashree K Divyashree K | Updated: Jul 10, 2019 , 11:12 AM IST
ಕಿಚ್ಚ ಸುದೀಪ್, ಪ್ರಭುದೇವ ಜೊತೆ ಊರ್ವಶಿ ಹಾಡಿಗೆ ಸ್ಟೆಪ್ ಹಾಕಿದ ಸಲ್ಮಾನ್ ಖಾನ್! ವೀಡಿಯೋ ವೈರಲ್

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಅವರ ವೈಯಕ್ತಿಕ ಜೀವನದಿಂದ ಹಿಡಿದು ಸಿನಿಮಾ ಚಟುವಟಿಕೆಗಳ ಬಗ್ಗೆ ಒಂದಲ್ಲಾ ಒಂದು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಇದೀಗ ಅಂತಹದೇ ಒಂದು ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸೌಂಡ್ ಮಾಡ್ತಿದೆ!

ಸೂಪರ್ ನಟ, ಡ್ಯಾನ್ಸರ್ ಆದ ಪ್ರಭುದೇವ ಹಾಗೂ ಕಿಚ್ಚ ಸುದೀಪ್ ಜೊತೆ ಊರ್ವಶಿ ಹಾಡಿಗೆ ಸ್ಟೆಪ್ ಹಾಕಿದ ವೀಡಿಯೋವೊಂದನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಆ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗ್ತಿದೆ.

 
 
 
 

 
 
 
 
 
 
 
 
 

Dance class from the master himself . . Prabhu Deva @kichchasudeepa @wardakhannadiadwala

A post shared by Salman Khan (@beingsalmankhan) on

ಸಲ್ಮಾನ್ ಖಾನ್ ಅಭಿನಯದ ಬಾಲಿವುಡ್ ನ 'ದಬಾಂಗ್ 3' ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಹ ನಟಿಸುತ್ತಿದ್ದಾರೆ. ದಬಾಂಗ್-3' ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಅಭಿನಯಿಸುತ್ತಿದ್ದಾರೆ. ಚುಲ್ ಬುಲ್ ಪಾಂಡೆ ಪಾತ್ರದಲ್ಲಿ ನಟ ಸಲ್ಮಾನ್ ಖಾನ್ ನಟಿಸಿದ್ದು, ಸಿಖಂದರ್ ಭಾರದ್ವಜ್ ಪಾತ್ರದ ಮೂಲಕ ಖಳ ನಟನಾಗಿ ಕಿಚ್ಚ ಸುದೀಪ್ ಅಬ್ಬರಿಸಲಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಸಲ್ಮಾನ್ ಖಾನ್ ಜೊತೆ ಕಿಚ್ಚ ಸುದೀಪ್ ತೆರೆಯಾ ಮೇಲೆ ಕಾಣಿಸಿಕೊಳ್ಳಲಿದ್ದಾರೆ.