close

News WrapGet Handpicked Stories from our editors directly to your mailbox

ದೆಹಲಿ ಕೆಂಪುಕೋಟೆಯಲ್ಲಿ ಸಲ್ಮಾನ್ ಖಾನ್ ಸೈಕಲ್ ಸವಾರಿ !

ಬಿಯಿಂಗ್ ಹ್ಯೂಮನ್ ಸೈಕಲ್ ನ ಪ್ರಚಾರದ ಭಾಗವಾಗಿ ಈಗ ಬಾಲಿವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಅವರು ದೆಹಲಿಯ ಕೆಂಪುಕೋಟೆಯಲ್ಲಿ ಸೈಕಲ್ ಸವಾರಿ ಮಾಡಿದ್ದಾರೆ.

Updated: Jul 30, 2019 , 02:13 PM IST
 ದೆಹಲಿ ಕೆಂಪುಕೋಟೆಯಲ್ಲಿ ಸಲ್ಮಾನ್ ಖಾನ್ ಸೈಕಲ್ ಸವಾರಿ !
Photo courtesy: Twitter

ಮುಂಬೈ: ಬಿಯಿಂಗ್ ಹ್ಯೂಮನ್ ಸೈಕಲ್ ನ ಪ್ರಚಾರದ ಭಾಗವಾಗಿ ಈಗ ಬಾಲಿವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಅವರು ದೆಹಲಿಯ ಕೆಂಪುಕೋಟೆಯಲ್ಲಿ ಸೈಕಲ್ ಸವಾರಿ ಮಾಡಿದ್ದಾರೆ.

ಬಿಳಿ ಪೈಜಾಮಾದಲ್ಲಿ ಮಿಂಚುತ್ತಿರುವ ಸಲ್ಮಾನ್ ಖಾನ್ ಈಗ ಕೆಂಪು ಕೋಟೆ ಎದುರು ಎರಡು ಮೂರು ಸುತ್ತು ಹಾಕಿರುವ ವೀಡಿಯೋವೊಂದನ್ನು ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

ಸಲ್ಮಾನ್ ಖಾನ್ ಈಗಾಗಲೇ ಬಿಯಿಂಗ್ ಹ್ಯೂಮನ್ ಫೌಂಡೆಶನ್ ನಿಂದ ಹಲವಾರು ಸಾಮಾಜಿಕ ಕಾರ್ಯಗಳಿಗೆ ಹೆಸರಾಗಿದ್ದಾರೆ. 2007 ರಲ್ಲಿ ಪ್ರಾರಂಭವಾಗಿರುವ ಈ ಪ್ರತಿಷ್ಠಾನ ಪ್ರಮುಖವಾಗಿ ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಬಡವರಿಗೆ ಒದಗಿಸಲು ಶ್ರಮಿಸುತ್ತದೆ. ಈಗ ಇದರ ಮುಂದುವರೆದ ಭಾಗವಾಗಿ ಸಲ್ಮಾನ್ ಖಾನ್ ಅವರು ಬಿಯಿಂಗ್ ಹ್ಯೂಮನ್ ಇ-ಸೈಕಲ್ ನ್ನು ಪ್ರಾರಂಭಿಸಿದ್ದಾರೆ.ಇದು ಪ್ರಮುಖವಾಗಿ ಹಸಿರು ತಂತ್ರಜ್ಞಾನದಲ್ಲಿನ ಮಹತ್ವದ ಮೈಲುಗಲ್ಲಾಗಿದೆ 

ಬಿಯಿಂಗ್ ಹ್ಯೂಮನ್ ನಿಂದ ಉತ್ಪಾದಿಸಲಾಗುವ ಸೈಕಲ್ ಗಳು ಮುಂದುವರೆದ ತಂತ್ರಜ್ಞಾನವನ್ನು ಒಳಗೊಂಡಿರುವ ಇ-ಸೈಕಲ್ ಗಳಾಗಿವೆ. ಇವು ಸಾಮಾನ್ಯವಾದ ಸೈಕಲ್ ಗಳಿಗಿಂತ ಭಿನ್ನವಾಗಿವೆ.