ಸಂಜಯ್ ದತ್ ಜೊತೆಗೆ ಕದ್ದು ಮುಚ್ಚಿ ಮದುವೆಯಾಗಿದ್ರಂತೆ ನಟಿ ರೇಖಾ..?! ತಂದೆಯಿಂದ ಈ ಜೋಡಿ ದೂರಾಗಿದ್ದು ನಿಜವಾ..?

 sanjay dutt and rekha relationship: ರೇಖಾ ಮತ್ತು ಅಮಿತಾಭ್ ಬಚ್ಚನ್ ಅವರ ಪ್ರೇಮ ಸಂಬಂಧದ ಬಗ್ಗೆ ಎಲ್ಲರಿಗೂ ಗೊತ್ತು.. ಆದರೆ ಅವರ ಹೆಸರು ಸಂಜಯ್ ದತ್ ಜೊತೆಗೂ ಲಿಂಕ್ ಆಗಿದ್ದ ಸಮಯವಿತ್ತು..

Written by - Savita M B | Last Updated : Aug 6, 2024, 07:37 PM IST
  • ಬಾಲಿವುಡ್‌ನ ಎವರ್‌ಗ್ರೀನ್ ನಟಿ ರೇಖಾ ವಯಸ್ಸು 65 ದಾಟಿರಬಹುದು
  • ರೇಖಾ ಜೀವನದಲ್ಲಿ ಹಲವು ಬಾರಿ ಪ್ರೀತಿಯಾದರೂ ಆಕೆಗೆ ಸಂಸಾರಿಕ ಸುಖ ಸಿಗಲಿಲ್ಲ
ಸಂಜಯ್ ದತ್ ಜೊತೆಗೆ ಕದ್ದು ಮುಚ್ಚಿ ಮದುವೆಯಾಗಿದ್ರಂತೆ ನಟಿ ರೇಖಾ..?! ತಂದೆಯಿಂದ ಈ ಜೋಡಿ ದೂರಾಗಿದ್ದು ನಿಜವಾ..? title=

Actress Rekha: ಬಾಲಿವುಡ್‌ನ ಎವರ್‌ಗ್ರೀನ್ ನಟಿ ರೇಖಾ ವಯಸ್ಸು 65 ದಾಟಿರಬಹುದು, ಆದರೆ ಅವರ ಸ್ಟೋರಿಗಳು ಇನ್ನೂ ಎಲ್ಲರಿಗೂ ಇಂಟ್ರೆಸ್ಟಿಂಗ್‌ ಟಾಫಿಕ್‌ ಆಗಿವೆ.. ರೇಖಾ ತನ್ನನ್ನು ತಾನು ಮೆಂಟೇನ್ ಮಾಡಿಕೊಂಡಿರುವ ರೀತಿಯನ್ನು ನೋಡಿ ಜನ ಬೆರಗಾಗಿದ್ದಾರೆ.. ಈಗಲೂ ಯಂಗ್‌ ಹಿರೋಯಿನ್‌ಗಳಿಗೆ ಪೈಪೋಟಿ ನೀಡುವಂತಿದ್ದಾರೆ ನಟಿ..

ರೇಖಾ ಜೀವನದಲ್ಲಿ ಹಲವು ಬಾರಿ ಪ್ರೀತಿಯಾದರೂ ಆಕೆಗೆ ಸಂಸಾರಿಕ ಸುಖ ಸಿಗಲಿಲ್ಲ.. ಇದೆಲ್ಲದರ ನಡುವೆ ಬಾಲಿವುಡ್ ನಟ ಸಂಜಯ್ ದತ್ ಜೊತೆ ರೇಖಾ ಹೆಸರು ತಳುಕು ಹಾಕಿಕೊಂಡ ಸಮಯವೊಂದಿತ್ತು.. ಆಗ ಇವರಿಬ್ಬರ ಬಗ್ಗೆ ಚರ್ಚೆಗಳು ಸಾಕಷ್ಟಾಗಿದ್ದವು.. 

ಇದನ್ನೂ ಓದಿ-ʼಆʼ ನಟನೊಂದಿಗೆ ನಟಿಸಲು ಇಷ್ಟವಿಲ್ಲ ಎಂದು ಸಿನಿಮಾ ಕೈ ಬಿಟ್ಟ ರಶ್ಮಿಕಾ ಮಂದಣ್ಣ! ಅಷ್ಟಕ್ಕೂ ಹಿರೋ ಯಾರು?

ಸಂಜಯ್ ದತ್ ಅವರ ಜೀವನದಲ್ಲಿ ಯಾವುದೂ ಸರಿಯಿಲ್ಲದ ಸಮಯ ಮತ್ತು ಅವರು 'ಜಮೀನ್ ಆಸ್ಮಾನ್' (1984) ಚಿತ್ರದಲ್ಲಿ ರೇಖಾ ಅವರೊಂದಿಗೆ ಕೆಲಸ ಮಾಡಿದ್ದರು.. ಸಂಜಯ್ ದತ್ ಅವರ ವೃತ್ತಿಜೀವನವು ಮುಳುಗುತ್ತಿದ್ದ ಅದೇ ಅವಧಿಯಲ್ಲಿ ಆದರೆ ರೇಖಾ ಉತ್ತುಂಗದಲ್ಲಿದ್ದರು.. ಹೀಗಿರುವಾಗ ಸಂಜಯ್ ಅವರ ವಿಚಾರ ರೇಖಾಗೂ ಗೊತ್ತಿದ್ದು, ಅವರು ನಟನಿಗೆ ಆಸರೆಯಾಗಿದ್ದಳು ಎನ್ನಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಆ ಸಮಯದಲ್ಲಿ ರೇಖಾ ಸಂಜಯ್ ದತ್ ಅವರೊಂದಿಗೆ ಭಾವನಾತ್ಮಕವಾಗಿ ಹತ್ತಿರವಾಗಿದ್ದರಂತೆ.. 

ಇದನ್ನೂ ಓದಿ-ಕಾಂತಾರದ ಕಾಡಿನಲ್ಲಿ ಸೊಪ್ಪು ಸಿಗ್ತದೆ ಖ್ಯಾತಿಯ ಚಂದ್ರಕಲಾ ಪತಿ ಇವರೇ ನೋಡಿ ! 8 ವರ್ಷ ಕಿರಿಯವನನ್ನು ಕಿಡ್ನಾಪ್ ಮಾಡಿ ಮದುವೆಯಾಗಿದ್ದಂತೆ ನಟಿ

ಅಲ್ಲದೇ ರೇಖಾ ಅವರು ಸಂಜಯ್ ದತ್ ಅವರ ಹೆಸರಿನಲ್ಲಿ ಸಿಂಧೂರವನ್ನು ಧರಿಸುತ್ತಾರೆ ಎಂಬ ವದಂತಿಗಳಿವೆ. ಮಾಧ್ಯಮ ವರದಿಗಳ ಪ್ರಕಾರ, ಸಂಜಯ್‌ ದತ್‌ ತಂದೆ ಸುನೀಲ್ ದತ್ ರೇಖಾ ಅವರನ್ನು ಭೇಟಿಯಾಗಿ ಮಗನಿಂದ ದೂರವಿರಲು ಸಲಹೆ ನೀಡಿದ್ದರಂತೆ... ಅಂದಿನಿಂದ ರೇಖಾ ಸಂಜಯ್‌ನಿಂದ ಅಂತರ ಕಾಯ್ದುಕೊಳ್ಳತೊಡಗಿದ್ದರಂತೆ.. 

ಕೆಲವು ದಿನಗಳ ನಂತರ, ರೇಖಾ ಪತ್ರಿಕಾಗೋಷ್ಠಿಯನ್ನು ನಡೆಸಿ ಅದರಲ್ಲಿ - 'ಸಂಜಯ್ ದತ್ ಅವರೊಂದಿಗಿನ ನನ್ನ ಸಂಬಂಧವು ಕೇವಲ ವದಂತಿಯಾಗಿದೆ' ಎಂದು ಹೇಳಿದ್ದರು.. ಮಾಧ್ಯಮ ವರದಿಗಳ ಪ್ರಕಾರ, ರೇಖಾ ಈಗಲೂ ಸಂಜಯ್ ದತ್ ಹೆಸರಿನಲ್ಲಿ ಸಿಂಧೂರವನ್ನು ಹಚ್ಚುತ್ತಿದ್ದು, ಆದರೆ, ಈ ವಿಷಯಗಳಲ್ಲಿ ಎಷ್ಟು ಸತ್ಯವಿದೆ ಎಂಬುದು ಅವರಿಗೆ ಮಾತ್ರ ಗೊತ್ತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News