ಹಿರಿಯ ನಟ ಅರುಣ್ ಬಾಲಿ ನಿಧನ, ಬಾಲಿವುಡ್ ಗಣ್ಯರ ಕಂಬನಿ

Arun Bali Passes Away : ಹಿರಿಯ ನಟ ಅರುಣ್ ಬಾಲಿ ನಿಧನರಾಗಿದ್ದಾರೆ. ಅವರು ತಮ್ಮ 79 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಅನೇಕ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ  ಶೋಕ ವ್ಯಕ್ತಪಡಿಸಿದ್ದಾರೆ. 

Written by - Ranjitha R K | Last Updated : Oct 7, 2022, 10:30 AM IST
  • ಹಿರಿಯ ನಟ ಅರುಣ್ ಬಾಲಿ ನಿಧನ
  • 79 ನೇ ವಯಸ್ಸಿನಲ್ಲಿ ಇಹ ಲೋಕ ತ್ಯಜಿಸಿದ ನಟ
  • ಮೈಸ್ತೇನಿಯಾ ಗ್ರ್ಯಾವಿಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದರು
ಹಿರಿಯ ನಟ  ಅರುಣ್ ಬಾಲಿ ನಿಧನ, ಬಾಲಿವುಡ್ ಗಣ್ಯರ ಕಂಬನಿ  title=
Arun Bali Passes Away

Arun Bali Passes Away : ಹಿರಿಯ ನಟ ಅರುಣ್ ಬಾಲಿ ನಿಧನರಾಗಿದ್ದಾರೆ. ಅವರು ತಮ್ಮ 79 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಅರುಣ್ ಬಾಲಿ ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕೆಲ ತಿಂಗಳ ಹಿಂದೆ ಅವರನ್ನು ಕಡಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅರುಣ್ ಬಾಲಿ ಮೈಸ್ತೇನಿಯಾ ಗ್ರ್ಯಾವಿಸ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದರು. ಇದು  ಆಟೋ ಇಮ್ಯುನ್ ಕಾಯಿಲೆಯಾಗಿದೆ. ನರಗಳು ಮತ್ತು ಸ್ನಾಯುಗಳ ನಡುವಿನ ಸಂವಹನ ವೈಫಲ್ಯದಿಂದಾಗಿ ಇದು ಸಂಭವಿಸುತ್ತದೆ.

ಅರುಣ್ ಬಾಲಿ ಸಾವಿನಿಂದ ಟಿವಿ ಮತ್ತು ಬಾಲಿವುಡ್ ಇಂಡಸ್ಟ್ರಿಯಲ್ಲಿ ಶೋಕ ಮಡುಗಟ್ಟಿದೆ. ಅನೇಕ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶೋಕ ವ್ಯಕ್ತಪಡಿಸುತ್ತಿದ್ದಾರೆ. 

ಇದನ್ನೂ ಓದಿ : ‘ಕಾಲಾ ಚಶ್ಮಾ’ ಹಿಂದಿ ಹಾಡಿಗೆ ಜಪಾನ್ ಬಾಲೆಯರ ಭರ್ಜರಿ ಸ್ಟೆಪ್: ವಿಡಿಯೋ ನೋಡಿದ್ರೆ ನೀವು ಕುಣಿಯೋದು ಗ್ಯಾರಂಟಿ

ಮಾಧ್ಯಮ ವರದಿಗಳ ಪ್ರಕಾರ, ಅರುಣ್ ಬಾಲಿ  ಆರೋಗ್ಯ ಹದಗೆಟ್ಟ ಕಾರಣ, ಅವರನ್ನು ಮುಂಬೈನ ಹಿರಾನಂದಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅರುಣ್ ಬಾಲಿ ತಮ್ಮ ವೃತ್ತಿಜೀವನದಲ್ಲಿ ಶಾರುಖ್ ಖಾನ್‌, ಅಕ್ಷಯ್ ಕುಮಾರ್ ಮತ್ತು ಸುಶಾಂತ್ ಸಿಂಗ್ ರಜಪೂತ್‌ನಂತಹ ಸ್ಟಾರ್‌ಗಳೊಂದಿಗೆ ಕೆಲಸ ಮಾಡಿದ್ದಾರೆ. ಅವರು ಸ್ವತಃ ಮನರಂಜನಾ ಉದ್ಯಮದಲ್ಲಿ ಬಹಳ ದೊಡ್ಡ ಹೆಸರು ಮಾಡಿದ್ದರು. 

ಹಿರಿಯ ನಟ ಅರುಣ್ ವಾಲಿ 90 ರ ದಶಕದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಇದಾದ ಬಳಿಕ ‘ರಾಜು ಬನ್ ಗಯಾ ಜಂಟಲ್ ಮ್ಯಾನ್’, ‘ಫೂಲ್ ಔರ್ ಅಂಗಾರೆ’, ‘ಖಲ್ನಾಯಕ್’, ‘3 ಈಡಿಯಟ್ಸ್’, ‘ಪಾಣಿಪತ್’ ಸೇರಿದಂತೆ ಹಲವು ಚಿತ್ರಗಳಲ್ಲಿ ಅಮೋಘ ಅಭಿನಯ ನೀಡಿದ್ದಾರೆ. ಇದಲ್ಲದೆ, ಅನೇಕ ಟಿವಿ ಶೋಗಳಲ್ಲಿ ಕೂಡಾ ನಟಿಸಿದ್ದಾರೆ. 

ಇದನ್ನೂ ಓದಿ : ಚೋಳರ ಕಾಲದಲ್ಲಿ ʼಹಿಂದೂ ಧರ್ಮʼ ಎಂಬುದೇ ಇರಲಿಲ್ಲ : ಕಮಲ್‌ಹಾಸನ್‌

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News