ಟ್ರೈಲರ್ ಮೂಲಕ ಗಮನ ಸೆಳೆಯುತ್ತಿದೆ ಹಳ್ಳಿ ಸೊಗಡಿನ 'ಶಾಲಿವಾಹನ ಶಕೆ'

Shali Vahana Shake : ಟೈಟಲ್ ಮೂಲಕವೇ ಗಮನ ಸೆಳೆಯುತ್ತಿರುವ 'ಶಾಲಿವಾಹನ ಶಕೆ' ಟ್ರೈಲರ್ ರಿಲೀಸ್ ಮಾಡಿ ಸದ್ದು ಮಾಡುತ್ತಿದೆ. ಒಂದು ಕಥೆ  ಹೇಳ್ಲಾ, ವಾವ್ ಸಿನಿಮಾ ಮೂಲಕ ಖ್ಯಾತಿಗಳಿಸಿದ್ದ  ನಿರ್ದೇಶಕ ಗಿರೀಶ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಮೂರನೇ ಸಿನಿಮಾ ಇದಾಗಿದೆ. 

Written by - Chetana Devarmani | Last Updated : Sep 4, 2024, 10:15 AM IST
  • 'ಶಾಲಿವಾಹನ ಶಕೆ' ಟ್ರೇಲರ್ ರಿಲೀಸ್
  • ಟೈಟಲ್ ಮೂಲಕವೇ ಗಮನ ಸೆಳೆಯುತ್ತಿರುವ ಸಿನಿಮಾ
  • ಮತ್ತೆ ಬರ್ತಿದ್ದಾರೆ 'ಒಂದು ಕಥೆ ಹೇಳ್ಲಾ' ನಿರ್ದೇಶಕ ಗಿರೀಶ್
ಟ್ರೈಲರ್ ಮೂಲಕ ಗಮನ ಸೆಳೆಯುತ್ತಿದೆ ಹಳ್ಳಿ ಸೊಗಡಿನ 'ಶಾಲಿವಾಹನ ಶಕೆ'

Shali Vahana Shake Movie trailer: 'ಶಾಲಿವಾಹನ ಶಕೆ', ಸದ್ಯ ಟ್ರೇಲರ್ ಮೂಲಕ ಗಮನ ಸೆಳೆಯುತ್ತಿರುವ ಸಿನಿಮಾ. ವಿಭಿನ್ನವಾದ ಕಾನ್ಸೆಪ್ಟ್ ನೊಂದಿಗೆ ಚಿತ್ರಮಂದಿರಕ್ಕೆ ಬರಲು ಸಜ್ಜಾಗಿದೆ ಸಿನಿಮಾ. ಟೈಟಲ್ ಮೂಲಕವೇ ಗಮನ ಸೆಳೆಯುತ್ತಿರುವ 'ಶಾಲಿವಾಹನ ಶಕೆ' ಟ್ರೈಲರ್ ರಿಲೀಸ್ ಮಾಡಿ ಸದ್ದು ಮಾಡುತ್ತಿದೆ. ಒಂದು ಕಥೆ  ಹೇಳ್ಲಾ, ವಾವ್ ಸಿನಿಮಾ ಮೂಲಕ ಖ್ಯಾತಿಗಳಿಸಿದ್ದ  ನಿರ್ದೇಶಕ ಗಿರೀಶ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಮೂರನೇ ಸಿನಿಮಾ ಇದಾಗಿದ್ದು, ಗಿರೀಶ್ ಕಥೆಗೆ ಬಂಡವಾಳ ಹೂಡುವ ಮೂಲಕ ಜೀವ ತುಂಬಿದೆ ಸೈಡ್ ವಿಂಗ್ಸ್ ಸಿನಿಮಾಸ್ ನಿರ್ಮಾಣ ಸಂಸ್ಥೆ.

Add Zee News as a Preferred Source

ಪೋಸ್ಟರ್ ಮೂಲಕ ಸಿನಿ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದ್ದ ಶಾಲಿವಾಹನ ಶಕೆ ಇದೀಗ ಟ್ರೈಲರ್ ಮೂಲಕ ಕುತೂಹಲ ಮತ್ತು ನಿರೀಕ್ಷೆಯನ್ನು  ದುಪ್ಪಟ್ಟು ಮಾಡಿದೆ. ಗಿರೀಶ್ ನಿರ್ದೇಶನದ ಜೊತೆಗೆ ನಾಯಕನಾಗಿಯೂ ಮಿಂಚಿದ್ದಾರೆ. ಗಿರೀಶ್ ಗೆ ಜೋಡಿಯಾಗಿ ಕಿರುತೆರೆಯ ಖ್ಯಾತ ನಟಿ ಸುಪ್ರೀತಾ ಬಣ್ಣ ಹಚ್ಚಿದ್ದಾರೆ. ಟ್ರೈಲರ್ ರಿಲೀಸ್ ಬಳಿಕ ಮಾತನಾಡಿದ ನಿರ್ದೇಶಕ ಮತ್ತು ನಾಯಕ ಗಿರೀಶ್, 'ಶಾಲಿವಾಹನ ಅಂದ್ರೆ ಈ ಸಿನಿಮಾದಲ್ಲಿ ಒಂದು ಹಳ್ಳಿಯ ಹೆಸರು. ಪೌರಾಣಿಕ ಹಿನ್ನಲೆ ಕೂಡ ಇದೆ. ಟ್ರೈಲರ್ ನಲ್ಲಿ ಕಾಣಿಸುವ ಶಂಖ ಪ್ರಮುಖ ಪಾತ್ರ ವಹಿಸುತ್ತದೆ.    ಸಾಕಷ್ಟು ಟೈಮ್ ಲೂಪ್ ಸಿನಿಮಾಗಳು ಬಂದಿವೆ. ಆದರೆ ಕನ್ನಡದಲ್ಲಿ ಇದು ಮೊದಲ ಪ್ರಯತ್ನ. ಟೈಮ್ ಲೂಪ್ ಕಥೆಯನ್ನು ಪೌರಾಣಿಕ ಹಿನ್ನೆಲೆಯಲ್ಲಿ ಹಾಗೂ ಹಳ್ಳಿ ಸೊಗಡೆನೊಂದಿಗೆ ಹೇಳಿದ್ದೇವೆ' ಎಂದರು.

ಇದನ್ನೂ ಓದಿ: "#ಪಾರು ಪಾರ್ವತಿ" ಯಾಗಿ ದೀಪಿಕಾ ದಾಸ್ ಎಂಟ್ರಿ.. ಸಿನಿಮಾಗೆ ಬಿಗ್ ಬಾಸ್ ಬೆಡಗಿ ಹಿರೋಯಿನ್

ನಿರ್ಮಾಪಕ  ಶೈಲೇಶ್ ಕುಮಾರ್ ಮಾತನಾಡಿ, 'ಇದೇ ಕಾಲಘಟ್ಟದಲ್ಲಿ ನಡೆಯುವ ಕಥೆ. ನಾಲ್ಕರಿಂದ ಐದು ದಿನದಲ್ಲಿ ನಡೆಯುವ ಕಥೆ ಶಾಲಿವಾಹನ ಶಕೆ' ಎಂದರು. ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಿರುವ ಖ್ಯಾತ ಕಲಾವಿದ ಸುಂದರ್ ವೀಣಾ ಮಾತನಾಡಿ, ' ಈ ಚಿತ್ರದಲ್ಲಿ ಮುಸ್ಲಿಮ್ ದರ್ವೇಸಿ ಭೂಬಯ್ಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಕಥೆ ತುಂಬಾ ಚೆನ್ನಾಗಿದೆ. ಪ್ರಮುಖವಾಗಿ ಒಂದು ರಂಗತಂಡ ಆಗಿದ್ದರಿಂದ ತುಂಬಾ ಖುಷಿಯಾಯಿತು' ಎಂದರು.

ನಾಯಕಿ ಸುಪ್ರೀತಾ ಮಾತನಾಡಿ,  'ಇದೊಂದು ಮಾಮೂಲಿ ಕಥೆಯಲ್ಲ ಒಂದು ವಿಭಿನ್ನವಾದ ಸಿನಿಮಾ. ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಹಳ್ಳಿ ಸೊಗಡನ್ನು ಇಟ್ಟುಕೊಂಡು ಮಾಡಿರುವ ಟೈಮ್ ಲೂಪ್ ಸಿನಿಮಾ. ಒಂದು ವೇಳೆ ಲೈಫಲ್ಲಿ ನಡೆದ ಘಟನೆಯನ್ನು ಸರಿಪಡಿಸಿಕೊಳ್ಳಲು ಉತ್ತಮ ಚಾನ್ಸ್ ಸಿಕ್ಕರೆ ಏನು ಮಾಡಬಹುದು ಎನ್ನುವುದನ್ನು ಈ ಸಿನಿಮಾದಲ್ಲಿ ಹೇಳಿದ್ದೀವಿ' ಎಂದರು.

ಈ ಸಿನಿಮಾವನ್ನು 15 ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರೀಯರಾಗಿರುವ 'ಸೈಡ್ ವಿಂಗ್' ಹೆಸರಿನಲ್ಲಿ  ತಮ್ಮದೆ ತಂಡ ಕಟ್ಟಿಕೊಂಡು ನಾಟಕ ಪ್ರದರ್ಶನ ಮಾಡುತ್ತಿರುವ ಶೈಲೇಶ್ ಕುಮಾರ್ ಮೊದಲ ಬಾರಿಗೆ ಬಂಡವಾಳ ಹೂಡುವ ಮೂಲಕ ನಿರ್ಮಾಪಕರಾಗಿ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. 

 ಸಿನಿಮಾವನ್ನು ಬಹುತೇಕ  ಕುಣಿಗಲ್ ಸುತ್ತಮತ್ತ ಚಿತ್ರೀಕರಣ ಮಾಡಲಾಗಿದೆ. ಇದುವರೆಗೂ ಬಂದಿರುವ ಬಹುತೇಕ ಟೈಮ್ ಥ್ರಿಲ್ಲರ್ ಸಿನಿಮಾಗಳು ಟೆಕ್ನಾಲಜಿಯನ್ನು ಆಧರಿಸಿ ಇರುವ ಸಿನಿಮಾವಾಗಿರುತ್ತಿತ್ತು. ಆದರೆ ಇದು ಒಂದು ಹಳ್ಳಿ ಸೊಗಡಿನಲ್ಲಿ ದೇಸಿ ಕ್ಯಾರೆಕ್ಟರ್ ಗಳನ್ನು ಇಟ್ಟುಕೊಂಡು  ಮಾಡಿರುವ ಸಿನಿಮಾವಾಗಿದೆ.

ಈ ಸಿನಿಮಾದಲ್ಲಿ ಗಿರೀಶ್  ಹಾಗೂ  ನಟಿ ಸುಪ್ರೀತಾ ಜೊತೆಗೆ ಚಿಲ್ಲರ್ ಮಂಜು, ಸುಂದರ್ ವೀಣಾ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಅರುಣ್ ಸುರೇಶ್ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. ಹರಿ ಅಜಯ್ ಮತ್ತು ಕಾರ್ತಿಕ್ ಭೂಪತಿ ಎನ್ನುವರು ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸದ್ಯ ಟ್ರೇಲರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಶಾಲಿವಾಹನ ಶಕೆ ಇದೇ ತಿಂಗಳು 13ಕ್ಕೆ ಚಿತ್ರಮಂದಿರಕ್ಕೆ ಎಂಟ್ರಿಕೊಳ್ಳುತಿದೆ.

ಇದನ್ನೂ ಓದಿ: ಫ್ಯಾಂಟಸಿ‌ ʻಡಿಂಕುʼ ಸಿನಿಮಾ ಸದ್ಯದಲ್ಲೇ ಬಿಡುಗಡೆ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News