'ಪದ್ಮಾವತ್ ಚಿತ್ರ ರಜಪೂತರಿಗೆ ಹೆಮ್ಮೆ' ಎಂದ ಶ್ರೀ ಶ್ರೀ ರವಿಶಂಕರ್ ಗುರೂಜಿ

ಭನ್ಸಾಲಿಯೊಂದಿಗೆ 'ಪದ್ಮಾವತ್' ಚಿತ್ರ ವೀಕ್ಷಿಸಿದ ಶ್ರೀ ಶ್ರೀ ರವಿಶಂಕರ್ ಗುರೂಜೀ ಇದು ರಜಪೂತರಿಗೆ ಹೆಮ್ಮೆ ಎಂದು ತಿಳಿಸಿದ್ದಾರೆ.  

Last Updated : Jan 18, 2018, 04:59 PM IST
'ಪದ್ಮಾವತ್ ಚಿತ್ರ ರಜಪೂತರಿಗೆ ಹೆಮ್ಮೆ' ಎಂದ ಶ್ರೀ ಶ್ರೀ ರವಿಶಂಕರ್ ಗುರೂಜಿ title=
ಫೋಟೋ ಕೃಪೆ- DNA

ನವದೆಹಲಿ: ದೇಶದಾದ್ಯಂತ ವಿವಾದವನ್ನು ಸೃಷ್ಟಿಸಿರುವ 'ಪದ್ಮಾವತ್' ಚಿತ್ರದ ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿ ಶಂಕರ್ ಗುರೂಜಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 'ಪದ್ಮಾವತ್ ಚಿತ್ರ ರಜಪೂತರಿಗೆ ಹೆಮ್ಮೆ' ತರುವ ಚಿತ್ರ ಎಂದು ಅವರು ತಿಳಿಸಿದ್ದಾರೆ.

'ಪದ್ಮಾವತ್' ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಭಾನ್ಸಾಲಿ ಬೆಂಗಳೂರಿನ ಸೆಂಟರ್ ಆಫ್ ದಿ ಆರ್ಟ್ ಆಫ್ ಲಿವಿಂಗ್ನಲ್ಲಿ ಸೋಮವಾರದಂದು ಚಿತ್ರದ ವಿಶೇಷ ಪ್ರದರ್ಶನವನ್ನು ಪ್ರದರ್ಶಿಸಿದ್ದಾರೆ. ಈ ಸ್ಕ್ರೀನಿಂಗ್ನಲ್ಲಿ ಶ್ರೀ ಶ್ರೀ ರವಿಶಂಕರ್ ಅವರು ಈ ಚಿತ್ರವನ್ನು ಭನ್ಸಾಲಿಯೊಂದಿಗೆ ನೋಡಿದರು ಮತ್ತು ಚಲನಚಿತ್ರವನ್ನು ಪ್ರಶಂಸಿಸಿದರು. ಡಿಎನ್ಎ ಸುದ್ದಿ ಪ್ರಕಾರ, ದೀಪಿಕಾ ಪಡುಕೋಣೆ, ಶಾಹಿದ್ ಕೂಪರ್ ಮತ್ತು ರಣ್ವೀರ್ ಸಿಂಗ್ ನಟನೆಯನ್ನು ಶ್ರೀ ಶ್ರೀ ರವಿ ಶಂಕರ್ ಪ್ರಶಂಸಿಸಿದ್ದಾರೆ. ಈ ಚಿತ್ರವನ್ನು ಏಕೆ ವಿರೋಧಿಸುತ್ತಿದ್ದಾರೆ ಎಂದು ನನಗೆ ಅರ್ಥವಾಗಲಿಲ್ಲ. ಆದರೆ ಈ ಚಿತ್ರವು ರಜಪೂತರ ಗೌರವವನ್ನು ತೋರಿಸುತ್ತದೆ ಮತ್ತು ರಾಣಿ ಪದ್ಮಿನಿಗೆ ಇದು ಒಂದು ಸುಂದರ ಗೌರವವಾಗಿದೆ ಎಂದು ಅವರು ಹೇಳಿದರು.

(ಫೋಟೋ ಕೃಪೆ- DNA)

ಜನರು ಪದ್ಮಾವತ್ ಆಚರಿಸಬೇಕು ಮತ್ತು ಈ ಚಿತ್ರದ ಬಗ್ಗೆ ಹೆಮ್ಮೆ ಪಡಬೇಕು ಎಂದು ಶ್ರೀ ಶ್ರೀ ರವಿಶಂಕರ್ ಹೇಳಿದರು.

ಈ ನಡುವೆ 'ಪದ್ಮಾವತ್' ಚಿತ್ರಕ್ಕೆ ನಾಲ್ಕು ರಾಜ್ಯಗಳು ರದ್ದುಗೊಳಿಸಿದ್ದನ್ನು ಸರ್ವೋಚ್ಚ ನ್ಯಾಯಾಲಯ ನಿಷೇಧಿಸಿದೆ. ಇದರಿಂದಾಗಿ ಚಿತ್ರ ತಂಡ ಬಿಡುಗಡೆಗೆ ಇದ್ದ ತೊಡಕು ನಿವಾರಣೆಯಾಗಿದೆ ಎಂದು ಸಂತಸದಲ್ಲಿದ್ದಾರೆ. ಒಂದೆಡೆ, ರಜಪೂತ ಮುಖ್ಯಸ್ಥ ವಿಕ್ರಮಾದಿತ್ಯ ಸಿಂಗ್, ತಮ್ಮ ಸಮಾಜದ ಸುಪ್ರೀಂ ಕೋರ್ಟ್ ತೀರ್ಪು ಸ್ವೀಕರಿಸುವುದಿಲ್ಲ. 'ಪದ್ಮಾವತ್' ಚಿತ್ರದ ವಿರುದ್ಧದ ಪ್ರತಿಭಟನೆ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ಮತ್ತೊಂದೆಡೆ, ಕರಣಿ ಸೇನಾದ ಸಂಸ್ಥಾಪಕ ಲೋಕೇಂದ್ರ ಸಿಂಗ್ ಕಾಲ್ವಿ ಪದ್ಮಾವತ್ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ಸಾರ್ವಜನಿಕ ಕರ್ಫ್ಯೂ ಜನವರಿ 25 ರಂದು ನಡೆಯಲಿದೆ ಎಂದು ತಿಳಿಸಿದ್ದಾರೆ.

Trending News