Mayamriga Serial: ಮಾಯಾಮೃಗ ಧಾರವಾಹಿ ನೆನಪಿದಿಯೇ...ಸಚ್ಚಿ ಪಾತ್ರಧಾರಿ ಕಾರ್ತಿಕ್‌ ವೈಭವ್‌ ಯಾರು ಗೊತ್ತಾ?

Mayamruga Serial: ಟಿ.ಎನ್. ಸೀತಾರಾಮ್ ನಿರ್ದೇಶನ ಎಂದರೆ ಅಲ್ಲೊಂದು ವಿಶೇಷತೆ ಇದ್ದೆ ಇರುತ್ತೆ. ಅವರು ಹೆಚ್ಚಾಗಿ ನೈಜ್ಯತೆ ಕಥೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಹಾಗೆಯೇ ಅವರ ನಿರ್ದೇಶನದಲ್ಲಿ ಮೂಡಿ ಬಂದ ಮಾಯಾಮೃಗ ಧಾರವಾಹಿಯು ಒಂದಾಗಿದೆ.

Written by - Zee Kannada News Desk | Last Updated : May 5, 2023, 06:15 PM IST
  • ಮಾಯಾಮೃಗ ಧಾರಾವಾಹಿಯ ಮೂಲಕ ಮನೆಮತಾದ ಸಚ್ಚಿ ಪಾತ್ರಧಾರಿ
  • ಟಿ.ಎನ್. ಸೀತಾರಾಮ್ ನಿರ್ದೇಶನದ ಮಾಯಾಮೃಗ
  • ಇದೀಗ ಮುಂದುವರೆದು ಮತ್ತೆ ಮಾಯಾಮೃಗ
Mayamriga Serial: ಮಾಯಾಮೃಗ ಧಾರವಾಹಿ ನೆನಪಿದಿಯೇ...ಸಚ್ಚಿ ಪಾತ್ರಧಾರಿ ಕಾರ್ತಿಕ್‌ ವೈಭವ್‌ ಯಾರು ಗೊತ್ತಾ?  title=

ಬೆಂಗಳೂರು: ಟಿ.ಎನ್. ಸೀತಾರಾಮ್ ನಿರ್ದೇಶನ ಎಂದರೆ ಅಲ್ಲೊಂದು ವಿಶೇಷತೆ ಇದ್ದೆ ಇರುತ್ತೆ. ಅವರು ಹೆಚ್ಚಾಗಿ ನೈಜ್ಯತೆ ಕಥೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಹಾಗೆಯೇ ಅವರ ನಿರ್ದೇಶನದಲ್ಲಿ ಮೂಡಿ ಬಂದ ಮಾಯಾಮೃಗ ಧಾರವಾಹಿಯು ಒಂದಾಗಿದೆ.

ಖ್ಯಾತಿ ಪಡೆದ ಸೀರಿಯಲ್‌ ಒಂದೆಡೆಯಾದರೇ ಅದೇ ಧಾರವಾಹಿಯಿಂದ ಮನೆ ಮತಾದ ಸಚ್ಚಿ ಪಾತ್ರಧಾರಿ ಕಾರ್ತಿಕ್‌ ವೈಭವ್‌ ತಮ್ಮ ನಟನೆ ಮೂಲಕ ಮನಗೆದ್ದಿದ್ದರು. ಈಗಾಗಲೆ 'ಮಾಯಾಮೃಗ' ಧಾರಾವಾಹಿಯ ‌ಮುಂದುವರೆದ ಭಾಗ 'ಮತ್ತೆ ಮಾಯಾಮೃಗ'  ಪ್ರಸಾರವಾಗುತ್ತಿದೆ. ವೀಕ್ಷಕರು ಮೆಚ್ಚಿಕೊಂಡಿದ್ದಾರೆ. 

ಇದನ್ನೂ ಓದಿ: The Kerala Story : ಪೊಲೀಸ್‌ ಬಿಗಿ ಭದ್ರತೆಯೊಂದಿಗೆ ʼದಿ ಕೇರಳ ಸ್ಟೋರಿʼ ಸಿನಿಮಾ ಪ್ರದರ್ಶನ..!

ಆದಾದ ಬಳಿಕ ಇವರು 2018 ರಲ್ಲಿ ತೆರೆಕಂಡ ನವೋದಯ ಡೇಸ್ ಚಿತ್ರದಲ್ಲು ಅಭಿನಯಿಸಿದ್ದರು. ಇದೀಗ ತಮ್ಮ ನಟನೆಯ ಪಾತ್ರಗಳನ್ನು ವಿವರಿಸಿದ್ದಾರೆ.ತಮ್ಮ ಪಾತ್ರ ಹಾಗು ಸೀರಿಯಲ್‌ ಕಥೆ ಬಗ್ಗೆ ಮಾತನಾಡಿದ ನಟ ಕಾರ್ತಿಕ್‌ ವೈಭವ್‌ ಸಚ್ಚಿ ಪಾತ್ರ ಬಹಳ ವಿಭಿನ್ನವಾದದ್ದು, ಒಂದು ಕಾಲದಲ್ಲಿ ಕಿರುತೆರೆ ಲೋಕದಲ್ಲಿ ಸಂಚಲನ ಸೃಷ್ಟಿಸಿದ ಧಾರಾವಾಹಿ ಮಾಯಾಮೃಗ.

ಮತ್ತೆ ಮಾಯಾಮೃಗ ಸೀರಿಯಲ್‌ ನಿಜ ಜೀವನದಲ್ಲಿ ನಡೆಯುವಂತಹ ಘಟನೆಗಳನ್ನ ಆಧಾರಿಸಿ ಪ್ರಸಾರವಾಗುತ್ತಿರುವ ಕಥೆ. ಟಿ.ಎನ್. ಸೀತಾರಾಮ್ ಅವರ ನಿರ್ದೇಶನದ ಧಾರಾವಾಹಿಗಳಿಗೆ ಒಂದು ದೊಡ್ಡ ಅಭಿಮಾನಿ ಬಳಗವೇ ಇದೆ.

ಇದನ್ನೂ ಓದಿ: The Kerala Story: ಇಸ್ಲಾಂ ಧರ್ಮದ ವಿರುದ್ಧ 'ದಿ ಕೇರಳ ಸ್ಟೋರಿ'ಯಲ್ಲಿ ಅಂಥದ್ದೇನಿದೆ?

ಈವರೆಗಿನ ಅವರ ಎಲ್ಲ ಧಾರಾವಾಹಿಗಳು ದೊಡ್ಡ ಯಶಸ್ಸು ಗಳಿಸಿವೆ. ಅದರಲ್ಲೂ ಅವರ 'ಮಾಯಾಮೃಗ' ಧಾರಾವಾಹಿ ಸಾಕಷ್ಟು ಹೆಸರು ಮಾಡಿತ್ತು. 23 ವರ್ಷಗಳ ಹಿಂದೆ ಪ್ರಸಾರವಾಗುತ್ತಿದ್ದ ಈ ಧಾರಾವಾಹಿಗೆ ಈಗಲೂ ಸಾಕಷ್ಟು ಅಭಿಮಾನಿಗಳಿದ್ದಾರೆ ಎಂದು ಹೇಳಿದ್ದಾರೆ.  

ಟಿ.ಎನ್. ಸೀತಾರಾಮ್ ಸುಲಭವಾಗಿ ಯಾರನ್ನು ಪಾತ್ರಕ್ಕೆ ಆರಿಸುವುದಿಲ್ಲ. ಆದರೆ ಸುಲಭವಾಗಿ ಅವರ ನಿರ್ದೇಶನ ಮೂಡಿ ಬಂದ ಮಾಯಾಮೃಗದಲ್ಲಿ ನಟಿಸಲು ಅವಕಾಶ ಸಿಕ್ಕೆದೆ ಎಂದರು. ಈ ಧಾರವಾಹಿಯಲ್ಲಿ ನೆಗೆಟೇವ್‌ ಪಾತ್ರಧಾರಿ ಮಾಡಿದರೂ ಅದನ್ನು ಜನ ಮೆಚ್ಚಿಕೊಂಡಿದ್ದಾರೆ ಎಂದಿದ್ದಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News