ಒಂದೇ ಸಿನಿಮಾದಿಂದ ಸಂಭಾವನೆ ಹೆಚ್ಚಿಸಿಕೊಂಡು ರಶ್ಮಿಕಾ, ಸಮಂತಾ, ನಯನತಾರಾಗೆ ಶಾಕ್‌ ಕೊಟ್ಟ ಸೌತ್‌ ನಟಿ ಈಕೆ!!

South Actress: ನ್ಯಾಚುರಲ್‌ ಬ್ಯೂಟಿ ಕ್ವೀನ್‌ ಸಾಯಿ ಪಲ್ಲವಿ ಎಲ್ಲ ಸೌತ್‌ ಸ್ಟಾರ್‌ ನಟಿಯರನ್ನು ಮೀರಿಸಿದ್ದಾರೆ.. ಅಷ್ಟರ ಮಟ್ಟಿಗೆ ಕ್ರೇಜ್‌ ಗಿಟ್ಟಿಸಿಕೊಂಡಿರುವ ಇವರು ಸದ್ಯ ಸಮಂತಾ, ರಶ್ಮಿಕಾ ಮಂದಣ್ಣ ಮತ್ತು ನಯನತಾರಾ ಅವರಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ.. 

Written by - Savita M B | Last Updated : Apr 13, 2024, 12:17 PM IST
  • ದಕ್ಷಿಣ ಭಾರತದ ಟಾಪ್ ಹೀರೋಯಿನ್ ಗಳೆಂದರೆ ರಶ್ಮಿಕಾ ಮಂದಣ್ಣ, ಸಮಂತಾ ಮತ್ತು ನಯನತಾರಾ
  • ಸದ್ಯ ಸಾಯಿ ಪಲ್ಲವಿ ಈ ಮೂವರು ದಕ್ಷಿಣ ಭಾರತದ ತಾರೆಯರನ್ನು ಹಿಂದಿಕ್ಕಿದ್ದಾರೆ
 ಒಂದೇ ಸಿನಿಮಾದಿಂದ ಸಂಭಾವನೆ ಹೆಚ್ಚಿಸಿಕೊಂಡು ರಶ್ಮಿಕಾ, ಸಮಂತಾ, ನಯನತಾರಾಗೆ ಶಾಕ್‌ ಕೊಟ್ಟ ಸೌತ್‌ ನಟಿ ಈಕೆ!!   title=

South Actress Sai Pallavi: ದಕ್ಷಿಣ ಭಾರತದ ಟಾಪ್ ಹೀರೋಯಿನ್ ಗಳೆಂದರೆ ರಶ್ಮಿಕಾ ಮಂದಣ್ಣ, ಸಮಂತಾ ಮತ್ತು ನಯನತಾರಾ. ಇವರೆಲ್ಲರಿಗಿಂತ ನಯನತಾರಾ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಲೇಡಿ ಓರಿಯೆಂಟೆಡ್ ಚಿತ್ರಕ್ಕಾಗಿ ಅವರು ರೂ. 7-10 ಕೋಟಿ ಕೇಳುತ್ತಾರೆ.. 

ಸದ್ಯ ಸಾಯಿ ಪಲ್ಲವಿ ಈ ಮೂವರು ದಕ್ಷಿಣ ಭಾರತದ ತಾರೆಯರನ್ನು ಸೋಲಿಸಿದ್ದಾರೆ. ವಾಸ್ತವವಾಗಿ ಸಾಯಿ ಪಲ್ಲವಿ ಕಮರ್ಷಿಯಲ್ ಹೀರೋಯಿನ್ ಅಲ್ಲ. ಅವರಿಗೆ ಸ್ಟಾರ್ ಹೀರೋಯಿನ್ ಸ್ಥಾನಮಾನವಿಲ್ಲ. ಹಾಗೆಯೇ ಸಾಯಿ ಪಲ್ಲವಿ ಗ್ಲಾಮರಸ್ ಪಾತ್ರಗಳನ್ನು ಮಾಡುವುದಿಲ್ಲ. ನಟನೆಗೆ ಆದ್ಯತೆ ಇರುವ ಪಾತ್ರಗಳನ್ನು ಮಾತ್ರ ಮಾಡುತ್ತಾರೆ.. 

ಇದನ್ನೂ ಓದಿ-Hema Malini: ಚುನಾವಣೆ ಹತ್ತಿರವಾಗುತ್ತಿದ್ದಂತೆ ಸುಡುಬಿಸಿಲಿನಲ್ಲಿ ಗದ್ದೆಗಿಳಿದು ಬೆಳೆ ಕತ್ತರಿಸಿದ ಹೇಮಾ ಮಾಲಿನಿ!

ಸದ್ಯ ಭರ್ಜರಿ ತಯಾರಿಯಲ್ಲಿರುವ ರಾಮಾಯಣ ಸಿನಿಮಾದವನ್ನು ಹಿಂದಿ ಮಾತ್ರವಲ್ಲದೆ ಹಲವು ಭಾಷೆಗಳಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ಯೋಜಿಸುತ್ತಿದ್ದಾರೆ.  ಚಿತ್ರದಲ್ಲಿ ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ನಟಿಸುತ್ತಿದ್ದು, ಸೀತೆಯ ಪಾತ್ರಧಾರಿಯಾಗಿ ಸಾಯಿ ಪಲ್ಲವಿ ಕಾಣಿಸಿಕೊಳ್ಳಲಿದ್ದಾರೆ.. 

ಇತ್ತೀಚೆಗೆ ಕೆಜಿಎಫ್ ಸ್ಟಾರ್ ಯಶ್ ಸಹ ಈ ತಂಡ ಸೇರಿಕೊಂಡಿದ್ದರು. ಅವರು ನಿರ್ಮಾಣ ಪಾಲುದಾರರಾಗಿ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆ ಕೂಡ ಮಾಡಲಾಗಿದೆ. ನಿರ್ದೇಶಕ ನಿತೇಶ್ ತಿವಾರಿ ರಾಮಾಯಣವನ್ನು ಮೂರು ಭಾಗಗಳಲ್ಲಿ ತೆರೆಗೆ ತರಲಿದ್ದಾರೆ ಎಂದು ವರದಿಯಾಗಿದೆ. 

ಇದನ್ನೂ ಓದಿ-Actress Saritha: ಕೇವಲ 15 ವರ್ಷಕ್ಕೆ ಮದುವೆಯಾಗಿದ್ದ ನಟಿ ಸರಿತಾ! ಎರಡೆರಡು ವಿವಾಹವಾದರೂ ಒಂಟಿಯಾಗಿ ಬದುಕುತ್ತಿರುವುದು ಏಕೆ ಗೊತ್ತಾ?

ರಾಮಾಯಣದಲ್ಲಿ ಸೀತೆಯ ಪಾತ್ರಕ್ಕೆ ಸಾಯಿ ಪಲ್ಲವಿ ರೂ. 10-15 ಕೋಟಿ ಸಂಭಾವನೆ ಕೇಳಿದ್ದಾರೆ ಎನ್ನಲಾಗಿದೆ.. ಇದು ಆಕೆಯ ನಿಯಮಿತ ಸಂಭಾವನೆಗಿಂತ ಐದರಿಂದ ಆರು ಪಟ್ಟು ಹೆಚ್ಚು. ಸಾಮಾನ್ಯವಾಗಿ ಸಾಯಿ ಪಲ್ಲವಿ ಚಿತ್ರಕ್ಕೆ ರೂ. 2 ಕೋಟಿ ತೆಗೆದುಕೊಳ್ಳುತ್ತಾರೆ..   

ಇನ್ನು ರಾಮಾಯಣ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ನ್ಯಾಚುರಲ್‌ ಬ್ಯೂಟಿ ಎಂದೇ ಗುರುತಿಸಿಕೊಂಡಿರುವ ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ಎಷ್ಟರ ಮಟ್ಟಿಗೆ ಇಂಪ್ರೆಸ್ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕು.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News