Hema Malini: ಚುನಾವಣೆ ಹತ್ತಿರವಾಗುತ್ತಿದ್ದಂತೆ ಸುಡುಬಿಸಿಲಿನಲ್ಲಿ ಗದ್ದೆಗಿಳಿದು ಬೆಳೆ ಕತ್ತರಿಸಿದ ಹೇಮಾ ಮಾಲಿನಿ!

Hema Malini In Farm: ಬಾಲಿವುಡ್‌ ಖ್ಯಾತ ನಟಿ ಹಾಗೂ ರಾಜಕಾರಣಿ ಹೇಮಾ ಮಾಲಿನಿ ಸುಡುಬಿಸಿಲಿನಲ್ಲಿ ಹೊಲದಲ್ಲಿ ನಿಂತುಕೊಂಡು ಗೋಧಿ ಬೆಳೆಯನ್ನು ಕಟಾವು ಮಾಡಿದ್ದಾರೆ. ಈ ಫೋಟೊಗಳು ಸೋಶಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.

Written by - Zee Kannada News Desk | Last Updated : Apr 13, 2024, 11:44 AM IST
  • ನಟಿ ಹೇಮಾ ಮಾಲಿನಿ ಮಥುರೆಯಿಂದ ಲೋಕಸಭೆ ಚುನಾವಣೆಗೆ ನಿಂತಿರುವ ಕಾರಣ, ಕ್ಷೇತ್ರಕ್ಕೆ ಆಗಮಿಸಿ ಭರ್ಜರಿ ಕ್ಯಾಂಪೇನ್ ಮಾಡ್ತಿದ್ದಾರೆ.
  • ಸುಡು ಬಿಸಿಲಿನಲ್ಲಿ ಆರೆಂಜ್ ಕಲರ್ ಕಾಂಜೀವರಂ ಸೀರೆಯನ್ನು ಉಟ್ಟಿಕೊಂಡು ರೈತ ಮಹಿಳೆಯಂತೆ ಕುಡುಗೋಲು ಹಿಡಿದು ಗದ್ದೆಯಲ್ಲಿ ಕಟಾವಿಗೆ ಬಂದ ಗೋಧಿ ಬೆಳೆಯನ್ನು ಕತ್ತರಿಸಿದ್ದಾರೆ.
  • ಮಥುರಾದಿಂದ ಹೇಮಾ ಮಾಲಿನಿ ಸತತ ಎರಡು ಬಾರಿಯೂ ಗೆದ್ದಿದ್ದು, ಈ ಸಾರ್ತಿ ಕೂಡ ಮತ್ತೊಮ್ಮೆ ಗೆದ್ದು ಸಾಧನೆ ಮಾಡುವ ನಿರೀಕ್ಷೆಯಲ್ಲಿದ್ದಾರೆ.
Hema Malini: ಚುನಾವಣೆ ಹತ್ತಿರವಾಗುತ್ತಿದ್ದಂತೆ ಸುಡುಬಿಸಿಲಿನಲ್ಲಿ ಗದ್ದೆಗಿಳಿದು ಬೆಳೆ ಕತ್ತರಿಸಿದ ಹೇಮಾ ಮಾಲಿನಿ!  title=

Hema Malini's ‘Farm Girl’ Campaign: ಬಾಲಿವುಡ್‌ನ ಹೆಸರಾಂತ ನಟಿ ಹೇಮಾ ಮಾಲಿನಿ ಉರಿಬಿಸಿಲಿನಲ್ಲಿ ಗದ್ದೆಯಲ್ಲಿ ಕುಡುಗೋಲು ಹಿಡಿದು ಬೆಳೆಕತ್ತರಿಸಿದ್ದಾರೆ. ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದು, ಅಭ್ಯರ್ಥಿಗಳು ಭರ್ಜರಿ ಪ್ರಚಾರ ಮಾಡ್ತಿದ್ದಾರೆ. ಇದೀಗ ನಟಿ ಹೇಮಾ ಮಾಲಿನಿ ಮಥುರೆಯಿಂದ ಲೋಕಸಭೆ ಚುನಾವಣೆಗೆ ನಿಂತಿರುವ ಕಾರಣ,  ಕ್ಷೇತ್ರಕ್ಕೆ ಆಗಮಿಸಿ ಭರ್ಜರಿ ಕ್ಯಾಂಪೇನ್ ಮಾಡ್ತಿದ್ದಾರೆ.

ಹೇಮಾ ಮಾಲಿನಿ ಮಥುರಾದಿಂದ ಚುನಾವಣೆಗೆ ಮೂರನೇ ಬಾರಿ ನಿಂತಿದ್ದು, ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಅದೇ ಸಂದರ್ಭದಲ್ಲಿ ಈ ನಟಿ ಸುಡು ಬಿಸಿಲಿನಲ್ಲಿ ಆರೆಂಜ್ ಕಲರ್ ಕಾಂಜೀವರಂ ಸೀರೆಯನ್ನು ಉಟ್ಟಿಕೊಂಡು ರೈತ ಮಹಿಳೆಯಂತೆ ಕುಡುಗೋಲು ಹಿಡಿದು ಗದ್ದೆಯಲ್ಲಿ ಕಟಾವಿಗೆ ಬಂದ ಗೋಧಿ ಬೆಳೆಯನ್ನು ಕತ್ತರಿಸಿದ್ದಾರೆ. ನಂತರ ಕೈಯಲ್ಲಿ ಕತ್ತರಿಸಿದ ಗೋಧಿ ಬೆಳೆಯನ್ನು ಹಿಡಿದು ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ.

ಇದನ್ನೂ ಓದಿ: ಕರೀನಾ ಕಪೂರ್‌ ಸೈಫ್‌ ಅಲಿ ಖಾನ್‌ ವಿಚ್ಛೇದನದ ಸುಳಿವು ಕೊಟ್ಟಬಿಡ್ತಾ ಒಂದೇ ಒಂದು ಪೋಸ್ಟ್‌ !?

ನಟಿ ಹೇಮಾ ಮಾಲಿನಿ ಹೊಲದಲ್ಲಿ ನಿಂತು ತೆಗೆಸಿಕೊಂಡಿರುವ ಫೋಟೋಸ್‌ ಸೋಶಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ. ಅದೇ ವೇಳೆ ಹೊಲದಲ್ಲಿ ಕೆಲಸ ಮಾಡುವ ಮಹಿಳೆಯರೊಂದಿಗೆ ಹೇಮಾ ಮಾಲಿನಿ ಸಂವಾದ ನಡೆಸಿ ಅವರೊಂದಿಗೆ ಫೋಟೋಗಳನ್ನು ಕೂಡ ತೆಗೆಸಿಕೊಂಡಿದ್ದಾರೆ. ಕಷ್ಟಪಟ್ಟು ದುಡಿಯುವ ರೈತರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದ್ದಾರೆ.

ಮಥುರಾದಿಂದ ಹೇಮಾ ಮಾಲಿನಿ ಸತತ ಎರಡು ಬಾರಿಯೂ ಗೆದ್ದಿದ್ದು, ಈ ಸಾರ್ತಿ ಕೂಡ ಮತ್ತೊಮ್ಮೆ ಗೆದ್ದು ಸಾಧನೆ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಈ ನಟಿ ಯಾವಗಲೂ ಜನರ ಕಷ್ಟ ತಿಳಿಯುವಲ್ಲಿ ಹಿಂದಕ್ಕೆ ಹೆಜ್ಜೆ ಇಟ್ಟಿಲ್ಲ. ಹೇಮಾ ಮಾಲಿನಿ ಮಥುರಾ ಕ್ಷೇತ್ರದಲ್ಲಿ ಜನಸೇವೆ ಮಾಡಿ ಪ್ರೀತಿ ಗಳಿಸಿದ್ದಾರೆ. ಇವರು ನಟನಯ ಜೊತೆಗೆ ರಾಜಕಿಐದಲ್ಲಿಯೂ ಸೈ ಎನಿಸಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News