ನಟಿ ಶ್ರೀಲೀಲಾ ಡಯೆಟ್ ಪ್ಲಾನ್..‌ ಫಿಗರ್‌ ಮೈಂಟೇನ್ ಮಾಡೋಕೆ ಏನು ತಿನ್ನೋದು ಗೊತ್ತಾ?

Sreeleela Fitness Secret : ಮುದ್ದು ಮುದ್ದಾಗಿರುವ ಶ್ರೀಲೀಲಾ ಸ್ಲಿಮ್ ಆಂಡ್ ಬ್ಯೂಟಿಫುಲ್ ಆಗಿರಲು ಕಾರಣ ಅವರ ವರ್ಕೌಟ್‌ ಮತ್ತು ಡಯೆಟ್ ಪ್ಲ್ಯಾನ್.

Written by - Chetana Devarmani | Last Updated : Feb 12, 2024, 01:37 PM IST
  • ಸ್ಲಿಮ್ ಆಂಡ್ ಬ್ಯೂಟಿಫುಲ್ ಶ್ರೀಲೀಲಾ
  • ದಕ್ಷಿಣದ ಜನಪ್ರಿಯ ನಟಿ ಶ್ರೀಲೀಲಾ
  • ಶ್ರೀಲೀಲಾ ವರ್ಕೌಟ್‌ ಮತ್ತು ಡಯೆಟ್ ಪ್ಲ್ಯಾನ್
ನಟಿ ಶ್ರೀಲೀಲಾ ಡಯೆಟ್ ಪ್ಲಾನ್..‌ ಫಿಗರ್‌ ಮೈಂಟೇನ್ ಮಾಡೋಕೆ ಏನು ತಿನ್ನೋದು ಗೊತ್ತಾ? title=

Actress Sreeleela Diet Plan : ದಕ್ಷಿಣದ ಜನಪ್ರಿಯ ನಟಿ ಶ್ರೀಲೀಲಾ ಅಂದಕ್ಕೆ ಮರುಳಾಗದವರಿಲ್ಲ. ಕನ್ನಡದ 'ಕಿಸ್' ಸಿನಿಮಾ ಖ್ಯಾತಿಯ ಶ್ರೀಲೀಲಾ ಟಾಲಿವುಡ್‌ನ ಹಾಟ್ ಬೆಡಗಿಯರಲ್ಲಿ ಒಬ್ಬರು. ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಶ್ರೀಲೀಲಾ ಫಿಟ್ನೆಸ್‌ಗೆ ಫಿದಾ ಆಗದವರಿಲ್ಲ. ಮುದ್ದು ಮುದ್ದಾಗಿರುವ ಶ್ರೀಲೀಲಾ ಸ್ಲಿಮ್ ಆಂಡ್ ಬ್ಯೂಟಿಫುಲ್ ಆಗಿರಲು ಕಾರಣ ಅವರ ವರ್ಕೌಟ್‌ ಮತ್ತು ಡಯೆಟ್ ಪ್ಲ್ಯಾನ್.
 
ಹಲವಾರು ಸಂದರ್ಶನಗಳಲ್ಲಿ, ಶ್ರೀಲೀಲಾ ಅವರು ಸಮತೋಲಿತ ಆಹಾರವನ್ನು ಅನುಸರಿಸುತ್ತಾರೆ ಎಂದು ಹೇಳಿದ್ದಾರೆ. ಏನೇ ಆದರೂ ಡಯೆಟ್ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಸಮತೋಲಿತ ಆಹಾರವು ದೇಹಕ್ಕೆ ಅಗತ್ಯವಾದ ಜೀವಸತ್ವಗಳು, ಖನಿಜಗಳು, ಕ್ಯಾಲ್ಸಿಯಂ, ಪ್ರೋಟೀನ್, ಫೈಬರ್ ಮತ್ತು ದೈನಂದಿನ ಕಾರ್ಯಗಳನ್ನು ನಿರ್ವಹಿಸಲು ಅಗತ್ಯವಿರುವ ಇತರ ಪೋಷಕಾಂಶಗಳನ್ನು ಒದಗಿಸುತ್ತದೆ. 

ಇದನ್ನೂ ಓದಿ: ಪ್ರಭಾಸ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಗ್ರ್ಯಾಂಡ್ ಎಂಟ್ರಿ.! 

ಶ್ರೀಲೀಲಾ ಸ್ಟ್ರಿಕ್ಟ್‌ ಡಯೆಟ್‌ ಜೊತೆ ಯೋಗವನ್ನು ಸಹ ಮಾಡುತ್ತಾರೆ. ಶ್ರೀಲೀಲಾ ಫಿಟ್ನೆಸ್ ಮಂತ್ರ ಇದಾಗಿದೆ. ನಿಯಮಿತವಾಗಿ ಯೋಗವನ್ನು ಶ್ರೀಲೀಲಾ ಮಾಡುತ್ತಾರೆ. ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸುಧಾರಿಸಲು ಯೋಗ ಸಹಾಯ ಮಾಡುತ್ತದೆ. ಇದು ಮಾನಸಿಕ ಆರೋಗ್ಯ ಮತ್ತು ಶಾಂತತೆಯನ್ನು ಉತ್ತೇಜಿಸುತ್ತದೆ. ಮನಸ್ಸನ್ನು ವಿಶ್ರಾಂತಿ ಮಾಡುತ್ತದೆ. 

ಶ್ರೀಲೀಲಾ ಫಿಟ್‌ನೆಸ್ ದಿನಚರಿಯಲ್ಲಿ ವರ್ಕೌಟ್‌ಗಳನ್ನು ಅಳವಡಿಸಿಕೊಂಡಿದ್ದಾರೆ. ಜಿಮ್‌ಗೆ ಹೋಗಲು ಮತ್ತು ವಿಭಿನ್ನ ವ್ಯಾಯಾಮಗಳ ಮಿಶ್ರಣದೊಂದಿಗೆ ತನ್ನ ದೇಹಕ್ಕೆ ಸ್ಲಿಮ್‌ ಆಂಡ್‌ ಫಿಟ್‌ ಆಕಾರ ನೀಡಿದ್ದಾರೆ. ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಯೋಗಕ್ಷೇಮಕ್ಕೆ ನಿಯಮಿತ ದೈಹಿಕ ಚಟುವಟಿಕೆ ಅತ್ಯಗತ್ಯ. ನೀವು ನಿಯಮಿತವಾಗಿ ವ್ಯಾಯಾಮ ಮಾಡುವಾಗ ಮತ್ತು ದೈಹಿಕವಾಗಿ ಸಕ್ರಿಯವಾಗಿದ್ದಾಗ ತೂಕವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಮೆದುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ. ಮೂಳೆಗಳು ಮತ್ತು ಸ್ನಾಯುಗಳನ್ನು ಬಲಪಡಿಸುತ್ತದೆ.  

ಇದನ್ನೂ ಓದಿ: ಕಿಚ್ಚ ಸುದೀಪ್‌ʼಗೆ ಈ ಬಾಲಿವುಡ್‌ ನಟಿಯ ಮೇಲೆ ಕ್ರಶ್ ಅಂತೆ ‌!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News