ಬಾಲಿವುಡ್‌ ಸ್ಟಾರ್‌ ಸಲ್ಮಾನ್‌ ಖಾನ್‌ಗೆ ಬರ್ತ್‌ಡೇ ಸ್ಯಾಂಡಲ್‌ವುಡ್‌ ಬಾದ್‌ಶಾ ವಿಶ್!

Salmaan Khan Birthday: ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ ಬಾಲಿವುಡ್‌ ಸಲ್ಮಾನ್‌ ಖಾನ್‌ಗೆ ಸೋಷಿಯಲ್‌ ಮಿಡಿಯಾದಲ್ಲಿ ಹುಟ್ಟು ಹಬ್ಬದ ವಿಶಸ್‌ ತಿಳಿಸಿದ್ದಾರೆ.

Written by - Zee Kannada News Desk | Last Updated : Dec 27, 2023, 12:15 PM IST
  • ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್, ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ನಟನ ಹುಟ್ಟು ಹಬ್ಬಕ್ಕೆ ಕಿಚ್ಚ ಸುದೀಪ್ ಶುಭಾಶಯ ತಿಳಿಸಿದ್ದಾರೆ.
  • ಈ ಹಿಂದೆ ಅಭಿನಯ ಚಕ್ರವತಿ ಕಿಚ್ಚ ಸುದೀಪ್‌ ಸಲ್ಮಾನ್‌ ಘಾನ್‌ ಜೊತೆಗೆ ದಬಾಂಗ್‌ 3 ಚಿತ್ರದಲ್ಲಿ ತೆರೆಹಂಚಿಕೊಂಡಿದ್ದರು.
  • ಸಲ್ಲುಗಾಗಿಯೇ ಕಿಚ್ಚ ಭಿನ್ನ ಕಥೆ ಬರೆದಿದ್ದು, ಮುಂದಿನ ದಿನಗಳಲ್ಲಿ ಸಲ್ಮಾನ್ ಖಾನ್‌ಗೆ ಕಥೆ ಹೇಳಿ, ಸಿನಿಮಾ ಮಾಡುವುದಾಗಿ ಕಿಚ್ಚ ಸುದೀಪ್ ಹೇಳಿಕೊಂಡಿದ್ದಾರೆ.
ಬಾಲಿವುಡ್‌ ಸ್ಟಾರ್‌ ಸಲ್ಮಾನ್‌ ಖಾನ್‌ಗೆ ಬರ್ತ್‌ಡೇ ಸ್ಯಾಂಡಲ್‌ವುಡ್‌ ಬಾದ್‌ಶಾ ವಿಶ್! title=

Sudeep Wishes Salmaan Khan: ಇಂದು ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್,  ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ನಟನ  ಹುಟ್ಟು ಹಬ್ಬಕ್ಕೆ ಕಿಚ್ಚ ಸುದೀಪ್ ಶುಭಾಶಯ ತಿಳಿಸಿದ್ದಾರೆ. ಬಾದ್‌ಶಾ ಕಿಚ್ಚ ಸುದೀಪ್‌, ಇಂದು ಸೋಷಿಯಲ್ ಮೀಡಿಯಾದಲ್ಲಿ ಖಾತೆಯಲ್ಲಿ ಸಲ್ಮಾನ್‌ ಖಾನ್‌ ಜೊತೆಗಿರುವ ಫೋಟೋ ಶೇರ್‌ ಮಾಡುವುದರ ಜೊತೆಗೆ, ʻನಿಮ್ಮೊಂದಿಗೆ ಕಳೆದ ಕ್ಷಣಗಳು ಯಾವತ್ತಿಗೂ ಹಸಿರಾಗಿರುತ್ತವೆ. ನಿಮ್ಮಂತಹ ಅದ್ಭುತ ಮನುಷ್ಯ ನನಗೆ ಸಿಕ್ಕಿದ್ದಕ್ಕೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.

ಈ ಹಿಂದೆ ಅಭಿನಯ ಚಕ್ರವತಿ ಕಿಚ್ಚ ಸುದೀಪ್‌ ಸಲ್ಮಾನ್‌ ಘಾನ್‌ ಜೊತೆಗೆ ದಬಾಂಗ್‌ 3 ಚಿತ್ರದಲ್ಲಿ ತೆರೆಹಂಚಿಕೊಂಡಿದ್ದರು. ಕೆಲ ತಿಂಗಳ ಹಿಂದೆಯಷ್ಟೇ ನಟ ಸುದೀಪ್ ನೀಡಿದ ಸಂದರ್ಶನವೊಂದರಲ್ಲಿ ತಮ್ಮ ಡೈರೆಕ್ಷನ್‌  ಬಗ್ಗೆ ಬ್ರೇಕಿಂಗ್ ಅಪ್‌ಡೇಟ್‌ವೊಂದನ್ನ ನೀಡಿದಾಗ, ಬ್ಯಾಡ್ ಬ್ಯಾಯ್ ಸಲ್ಮಾನ್ ಖಾನ್‌ ಗಾಗಿ ಚಿತ್ರವೊಂದನ್ನು ನಿರ್ದೇಶನ ಮಾಡುವುದಾಗಿ ಹೇಳಿದ್ದರು.

ಇದನ್ನೂ ಓದಿ: ಚೆಫ್‌ ಚಿದಂಬರನ ಜೊತೆ ಲವ್‌ ಮಾಕ್ಟೆಲ್‌ ಸಿಹಿ: ರೆಚಲ್ ಡೇವಿಡ್ ಮಸ್ತ್ ಲುಕ್ ರಿವೀಲ್!

ಹೌದು.. ಸಲ್ಲುಗಾಗಿಯೇ ಕಿಚ್ಚ ಭಿನ್ನ ಕಥೆ ಬರೆದಿದ್ದು, ಮುಂದಿನ ದಿನಗಳಲ್ಲಿ ಸಲ್ಮಾನ್ ಖಾನ್‌ಗೆ ಕಥೆ ಹೇಳಿ, ಸಿನಿಮಾ ಮಾಡುವುದಾಗಿ ಕಿಚ್ಚ ಸುದೀಪ್ ಹೇಳಿಕೊಂಡಿದ್ದಾರೆ. ಈ ಮೂಲಕ ಸುದೀಪ್‌ ತಾವು ಮತ್ತೆ ನಿರ್ದೇಶನದ ಕ್ಯಾಪ್ ಧರಿಸಿ, ಆಕ್ಷನ್‌ ಕಟ್‌ ಹೇಳುವುದರ ಬಗ್ಗೆ ಸೂಚನೆ ನೀಡಿದ್ದಾರೆ. ಇನ್ನು 2022ರಲ್ಲಿ ತೆರೆಗೆ ಬಂದ ವಿಕ್ರಾಂತ್ ರೋಣ ಚಿತ್ರದ ಹಿಂದಿ ವರ್ಷನ್ ಅನ್ನು ಸಲ್ಮಾನ್ ಖಾನ್ ಫಿಲ್ಮ್ಂ ಪ್ರೇಸೆಂಟ್ ಮಾಡಿ, ಈ ಮೂಲಕ ಸುದೀಪ್ ಸಲ್ಮಾನ್ ಸಾಥ್ ನೀಡಿದ್ದಾರೆ.

ಸಲ್ಮಾನ್ ಖಾನ್ ಮತ್ತು ಸುದೀಪ್ ಒಟ್ಟಿಗೆ ನಟಿಸಿದ್ದರಿಂದ, ತೆರೆಮರೆಯಲ್ಲಿ ಕೂಡ ಒಳ್ಳೆಯ ಬಾಂಧವ್ಯವಿದೆ. ಈ ಸ್ನೇಹಕ್ಕೆ ಸಾಕ್ಷಿಯಾಗಿ ಕಿಚ್ಚನ ಸಿನಿಮಾಗೆ ಸಲ್ಲು ಸಾಥ್ ನೀಡಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ನೋಡುವುದು ಪಕ್ಕಾ ಎನ್ನಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News