ʼನಟನಾಗಿ, ಬಾಳಸಂಗಾತಿಯಾಗಿ ಹಾಕಿದ ಹೆಜ್ಜೆಗಳು ಎಂದೆಂದಿಗೂ ಜೀವಂತʼ

ಇಂದು ಸ್ಯಾಂಡಲ್‌ವುಡ್‌ ಹಿರಿಯ ನಟ, ರೆಬಲ್‌ ಸ್ಟಾರ್‌ ಅಂಬರೀಷ್‌ ಅವರ 4ನೇ ವರ್ಷದ ಪುಣ್ಯ ಸ್ಮರಣೆ. ಅವರ ಅಭಿಮಾನಿಗಳು ಅಂಬಿಯ ಆದರ್ಶಗಳನ್ನು ಪಾಲಿಸುತ್ತ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಇನ್ನು ಪ್ರೀತಿಯ ಅಂಬಿಯನ್ನು ನೆನೆದು ಅವರ ಮಡದಿ, ಸಂಸದೆ ಸುಮಲತಾ ಅಂಬರೀಷ್‌ ಅವರು ಬಾವುಕ ನುಡಿಗಳನ್ನಾಡಿದ್ದಾರೆ.

Written by - Krishna N K | Last Updated : Nov 24, 2022, 11:28 AM IST
  • ಹಿರಿಯ ನಟ, ರೆಬಲ್‌ ಸ್ಟಾರ್‌ ಅಂಬರೀಷ್‌ ಅವರ 4ನೇ ವರ್ಷದ ಪುಣ್ಯ ಸ್ಮರಣೆ
  • ಅಂಬಿಯ ಅಭಿಮಾನಿಗಳು ಅವರ ಆದರ್ಶಗಳನ್ನು ಪಾಲಿಸುತ್ತ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ
  • ಪ್ರೀತಿಯ ಅಂಬಿಯನ್ನು ನೆನೆದು ಅವರ ಮಡದಿ, ಸಂಸದೆ ಸುಮಲತಾ ಅಂಬರೀಷ್‌ ಭಾವುಕ ನುಡಿಗಳನ್ನಾಡಿದ್ದಾರೆ
ʼನಟನಾಗಿ, ಬಾಳಸಂಗಾತಿಯಾಗಿ ಹಾಕಿದ ಹೆಜ್ಜೆಗಳು ಎಂದೆಂದಿಗೂ ಜೀವಂತʼ title=

ಬೆಂಗಳೂರು : ಇಂದು ಸ್ಯಾಂಡಲ್‌ವುಡ್‌ ಹಿರಿಯ ನಟ, ರೆಬಲ್‌ ಸ್ಟಾರ್‌ ಅಂಬರೀಷ್‌ ಅವರ 4ನೇ ವರ್ಷದ ಪುಣ್ಯ ಸ್ಮರಣೆ. ಅವರ ಅಭಿಮಾನಿಗಳು ಅಂಬಿಯ ಆದರ್ಶಗಳನ್ನು ಪಾಲಿಸುತ್ತ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಇನ್ನು ಪ್ರೀತಿಯ ಅಂಬಿಯನ್ನು ನೆನೆದು ಅವರ ಮಡದಿ, ಸಂಸದೆ ಸುಮಲತಾ ಅಂಬರೀಷ್‌ ಅವರು ಬಾವುಕ ನುಡಿಗಳನ್ನಾಡಿದ್ದಾರೆ.

ಅಂಬಿಯ ನೆನಪುಗಳನ್ನು ಮೆಲುಕು ಹಾಕಿರುವ ಸುಮಲತಾ ಅವರು, ʼನಟನಾಗಿ ಜೊತೆಯಾಗಿ, ಬಾಳಸಂಗಾತಿಯಾಗಿ ಹಾಕಿದ ಹೆಜ್ಜೆಗಳು ಯಾವತ್ತಿಗೂ ಜೀವಂತ. ನಿಮ್ಮ ಸಿಡುಕು, ಸಂಭ್ರಮ ಹಿತ ಹಿತ. ದೈಹಿಕವಾಗಿ ನೀವು ನಮ್ಮೊಂದಿಗೆ ಇಲ್ಲ ಅನ್ನುವುದನ್ನು ಬಿಟ್ಟರೆ, ಕ್ಷಣಕ್ಷಣವೂ ನೆನಪಾಗಿ ನನ್ನೊಂದಿಗೆ ಇದ್ದೀರಿ. ನಿಮ್ಮ ಕನಸು, ಕನವರಿಕೆ, ಸಮಾಜಮುಖಿ ಕೆಲಸ, ನಾಡಿನ ಮೇಲಿದ್ದ ಒಲವು ಅವು ಮುಂದುವರೆಯುತ್ತಿವೆ ನಿಮ್ಮದೇ ಹೆಸರಿನಲಿ. ಜೊತೆಗಿರದ ಜೀವ ಎಂದೆಂದಿಗೂ ಜೀವಂತ. ನಿಮ್ಮ ಪುಣ್ಯಸ್ಮರಣೆಗೆ ನನ್ನ ಹೃದಯಂತರಾಳದ ನಮನ. 'ಅಂಬಿ ಅಮರ'.ʼ ಎಂದು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬಾವುಕ ನುಡಿಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಕಮಲ್‌ ಹಾಸನ್‌ ಆಸ್ಪತ್ರೆಗೆ ದಾಖಲು : ವೈದ್ಯರು ಹೇಳಿದ್ದಿಷ್ಟು.. ಆತಂಕದಲ್ಲಿ ಫ್ಯಾನ್ಸ್‌..!

ಹೌದು.. ಸುಮಲತಾ ಮತ್ತು ಅಂಬರೀಶ್‌ ಅವರ ಸಂಬಂಧ ನಟನೆಯ ಮೂಲಕ ಪ್ರಾರಂಭವಾಗಿದ್ದು. ಸಿನಿಮಾದಲ್ಲಿ ನಾಯಕ ನಾಯಕಿಯಾಗಿ ನಟಿಸಿದ ಅವರು ನಿಜ ಜೀವನದಲ್ಲಿಯೂ ನಾಯಕ ನಾಯಕಿಯಾಗಿ ಸುಂದರ ಸಂಸಾರಕ್ಕೆ ಸಾಕ್ಷಿಯಾದವರು. ಅಜಾತ ಶತ್ರುವಾಗಿ ಸ್ಯಾಂಡಲ್‌ವುಡ್‌ ಹಿರಿಯಣ್ಣನಂತಿದ್ದ ಅಂಬರೀಶ್‌ ಅವರು ಕನ್ನಡಿಗರನ್ನು ಅಗಲಿ ಇಂದಿದೆ 4 ವರ್ಷಗಳು ಕಳೆದಿವೆ. ಆದ್ರೆ ಇದುವರೆಗೂ ಅವರ ನೆನೆಪುಗಳು ಮಾತ್ರ ಕನ್ನಡಿಗರ ಹೃದಯಾಳದಿಂದ ಮರೆಯಾಗಿಲ್ಲ.

2018ರ ನವೆಂಬರ್​ 24 ರಂದು ಕನ್ನಡಿಗರಿಗೆ ಕರಾಳ ದಿನ. ಕಲಿಯುಗದ ಕರ್ಣ, ಮಂಡ್ಯದ ಗಂಡು ಅಪಾರ ಅಭಿಮಾನಿಗಳನ್ನು ಕಣ್ಣೀರಿನ ಕಡಲಿನಲ್ಲಿ ತೆಲುವಂತೆ ಮಾಡಿ ಮರೆಯಾದ ದಿನ. ಸದಾ ಎಲ್ಲರ ಜೊತೆ ಹೃದಯತುಂಬಿ ಮಾತನಾಡುತ್ತಿದ್ದ ಕನ್ನಡಿಗರ ಹೆಮ್ಮೆಯ ಕನ್ವರ್‌ಲಾಲ್‌, ಇನ್ನಿಲ್ಲ ಎಂಬ ಸುದ್ದಿ ಅಖಂಡ ಕರ್ನಾಟಕ್ಕೆ ಶಾಕ್‌ ನೀಡಿತ್ತು. ಆದ್ರೆ ವಿಧಿಯಾಟದ ಮುಂದೆ ಎಲ್ಲರೂ ಶೂನ್ಯ ಎಂಬಂತೆ ಸತ್ಯವನ್ನು ಒಪ್ಪಿಕೊಳ್ಳಲೇಬೇಕಾಯಿತು. ಸದ್ಯ ಅಂಬಿ ನಮ್ಮ ಮಧ್ಯ ದೈಹಿಕವಾಗಿ ಇಲ್ಲ ಎಂದರೂ ಕನ್ನಡಿಗರ ಹೃದಯ ಸಾಮ್ರಾಜ್ಯದಲ್ಲಿ ʼಅಂಬಿ ಅಮರʼ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News