ಶಾಲೆಗೆ ಹೋಗಲ್ಲ ಅಂತ ಹಠ ಹಿಡಿದ ಮೊಮ್ಮಗ..! ತಾತ ರಜನಿ ಮಾಡಿದ ಕೆಲಸಕ್ಕೆ ಫ್ಯಾನ್ಸ್‌ ಫುಲ್‌ ಖುಷ್‌...

Super Star Rajinikanth : ಕ್ಯಾಬ್‌ನಲ್ಲಿ ಶಾಲೆಗೆ ಹೋಗಲು ಕಷ್ಟಪಡುತ್ತಿದ್ದ ಮೊಮ್ಮಗನಿಗಾಗಿ ರಜನಿಕಾಂತ್ ಮಾಡಿದ ಕೆಲಸ ನೆಟ್ಟಿಗರ ಹೃದಯ ಗೆದ್ದಿದೆ. ಈ ಕುರಿತ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.. 

Written by - Krishna N K | Last Updated : Jul 26, 2024, 07:20 PM IST
    • ಶಾಲೆಗೆ ಹೋಗಲ್ಲ ಅಂತ ಹಠ ಮಾಡುತ್ತಿದ್ದ ಮೊಮ್ಮಗ
    • ರಜನಿಕಾಂತ್ ಮಾಡಿದ ಕೆಲಸ ನೆಟ್ಟಿಗರ ಹೃದಯ ಗೆದ್ದಿದೆ.
    • ಈ ಕುರಿತ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌..
ಶಾಲೆಗೆ ಹೋಗಲ್ಲ ಅಂತ ಹಠ ಹಿಡಿದ ಮೊಮ್ಮಗ..! ತಾತ ರಜನಿ ಮಾಡಿದ ಕೆಲಸಕ್ಕೆ ಫ್ಯಾನ್ಸ್‌ ಫುಲ್‌ ಖುಷ್‌... title=
Rajinikanth

Rajinikanth with Grandson : ಶಾಲೆಗೆ ಹೋಗಲ್ಲ ಅಂತ ಹಠ ಮಾಡುತ್ತಿದ್ದ ಮೊಮ್ಮಗನನ್ನು ಸೂಪರ್‌ ಸ್ಟಾರ್‌ ತಾತ ರಜನಿಕಾಂತ್‌ ಅವರು ಹೇಗೇ ಕಳುಹಿಸಿದರು ಅಂತ ನಿಮಗೆ ಗೊತ್ತೆ..? ಈ ಕುರಿತ ಪೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.. 

ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ರಜನಿಕಾಂತ್ ಅವರು ʼಜೈಲರ್ʼ ಚಿತ್ರದ ಬ್ಲಾಕ್‌ಬಸ್ಟರ್ ಯಶಸ್ಸಿನ ನಂತರ, ಸಧ್ಯ ಖ್ಯಾತ ನಿರ್ದೇಶಕ ಜ್ಞಾನವೇಲ್ ನಿರ್ದೇಶನದ ವೇಟೈಯಾನ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಶೂಟಿಂಗ್ ಮುಗಿದ ನಂತರ ತಲೈವಾ ಲೋಕೇಶ್ ಕನಕರಾಜ್ ನಿರ್ದೇಶನದ ಕೂಲಿ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಅಮಿತಾಬ್ ಬಚ್ಚನ್, ತುಷಾರ ವಿಜಯನ್, ರಿತಿಕಾ ಸಿಂಗ್, ಮಂಜು ವಾರಿಯರ್, ಭಗತ್ ಬೆಸಿಲ್, ಸತ್ಯರಾಜ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ:'ಭಾಗ್ಯಲಕ್ಷ್ಮಿ' ಧಾರಾವಾಹಿ ನಟನ ಮೇಲೆ ವಾಮಾಚಾರ..! ದೂರು ದಾಖಲು

ಕೂಲಿ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿರುವಾಗಲೇ ಕ್ಯಾಬ್‌ನಲ್ಲಿ ಶಾಲೆಗೆ ಹೋಗಲು ಕಷ್ಟಪಡುತ್ತಿದ್ದ ಮೊಮ್ಮಗನಿಗಾಗಿ ರಜನಿಕಾಂತ್ ಮಾಡಿದ ಕೆಲಸ ನೆಟ್ಟಿಗರ ಹೃದಯ ಗೆದ್ದಿದೆ. ರಜನಿಕಾಂತ್ ಅವರ ಕಿರಿಯ ಮಗಳು ಸೌಂದರ್ಯ ರಜನಿಕಾಂತ್, ಅವರ ಮಗ ವೀರ್. ಮೊಮ್ಮಗ ಶಾಲೆಗೆ ಹೋಗುವುದಿಲ್ಲ ಎಂದು ಹಠ ಹಿಡಿದು ಕುಂತಿದ್ದ, ಈ ವೇಳೆ ರಜನಿಕಾಂತ್ ಅವರು ಮೊಮ್ಮಗನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ನೇರವಾಗಿ ಕ್ಲಾಸ್‌ ರೂಮ್‌ಗೆ ಬಿಟ್ಟು ಬಂದಿದ್ದಾರೆ..

ಇನ್ನು ಶಾಲೆಯಲ್ಲಿ ತಲೈವಾ ರಜನಿಕಾಂತ್ ಅವರನ್ನು ನೋಡಿದ ವಿದ್ಯಾರ್ಥಿಗಳು ಅಚ್ಚರಿ ವ್ಯಕ್ತ ಪಡಿಸಿದರು. ಸೌಂದರ್ಯ ರಜನಿಕಾಂತ್ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ, ಮೊಮ್ಮಗನೊಂದಿಗೆ ಕಾರಿನಲ್ಲಿ ರಜನೀಕಾಂತ್ ಇರುವ ಫೋಟೋ ಮತ್ತು ರಜನಿಕಾಂತ್‌ ನೋಡಿ ಶಾಲೆಯಲ್ಲಿ ಮಕ್ಕಳ ಪ್ರತಿಕ್ರಿಯೆ ಫೋಟೋವನ್ನು ಹಂಚಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News