ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಆತ್ಮಹತ್ಯೆ ಪ್ರಕರಣದಲ್ಲಿ ಮುಂಬೈ ಪೊಲೀಸ್ ಆಯುಕ್ತ ಪರಂಬೀರ್ ಸಿಂಗ್ ಗಂಭೀರ ಹೇಳಿಕೆಯೊಂದನ್ನು ನೀಡಿದ್ದು, ಬಿಹಾರ ಪೊಲೀಸರಿಗೆ ಪ್ರಕರಣದಲ್ಲಿ ತನಿಖೆ ನಡೆಸುವ ಹಕ್ಕಿಲ್ಲ ಎಂದು ಹೇಳಿದ್ದಾರೆ. ನಮ್ಮ ತನಿಖೆ ಸರಿಯಾದ ದಿಕ್ಕಿನಲ್ಲಿದೆ ಎಂದು ಸಿಂಗ್ ಹೇಳಿದ್ದಾರೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿರುವ ಅವರು ಸುಶಾಂತ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದ ಹಲವಾರು ಗಂಭೀರ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ.
ಸುಶಾಂತ್ ಖಾತೆಯಲ್ಲಿ ಒಟ್ಟು 18 ಕೋಟಿ ರೂ.
ಪ್ರಕರಣದಲ್ಲಿ ನಾವು ಕೆಲವು ಆರ್ಥಿಕ ಕೋನಗಳ ಬಗ್ಗೆಯೂ ಓದಿದ್ದೇವೆ ಎಂದು ಸಿಂಗ್ ಹೇಳಿದ್ದಾರೆ. ಇದನ್ನು ಬಿಹಾರ ಪೊಲೀಸರ ಎಫ್ಐಆರ್ನಲ್ಲಿಯೂ ಬರೆಯಲಾಗಿದೆ. ಸುಶಾಂತ್ ಅವರ ಖಾತೆಗಳ ತನಿಖೆ ಮತ್ತು ಅವರ ಸಿಎ ವಿಚಾರಣೆಯ ಸಮಯದಲ್ಲಿ, ಇದುವರೆಗೆ ಅವರ ಖಾತೆಯಲ್ಲಿ ಒಟ್ಟು 18 ಕೋಟಿ ರೂ. ಇರುವುದು ಕಂಡು ಬಂದಿದೆ, ಇವುಗಳಲ್ಲಿ ಒಟ್ಟು 4-4.5 ಕೋಟಿ ರೂಪಾಯಿಗಳು ಇನ್ನೂ ಎಫ್ಡಿ ಖಾತೆಯಲ್ಲಿವೆ ಎಂದು ತಿಳಿಸಲಾಗಿದೆ. ಉಳಿದ 13-13.5 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದ್ದು, ಅವುಗಳ ಕುರಿತು ತನಿಖೆ ಮುಂದುವರೆದಿದೆ. ಇದುವರೆಗಿನ ತನಿಖೆಯಲ್ಲಿ ಈ ಹಣವನ್ನು ನೇರವಾಗಿ ರಿಯಾಗೆ ವರ್ಗಾವಣೆಗೊಂಡಿಲ್ಲ ಎಂಬುದು ಕಂಡುಬರುತ್ತಿದೆ.
ಬಿಹಾರ ಪೊಲೀಸರಿಗೆ ತನಿಖೆ ನಡೆಸುವ ಹಕ್ಕಿಲ್ಲ
ಈ ಕುರಿತು ಹೇಳಿಕೆ ನೀಡಿರುವ ಮುಂಬೈ ಪೋಲೀಸ್ ಆಯುಕ್ತರು, "ಒಂದು ವೇಳೆ ಅಪರಾಧವು ನಿಮ್ಮ ಪ್ರದೇಶದ ವ್ಯಾಪ್ತಿಯಿಂದ ಹೊರಗೆ ನಡೆದಿದ್ದರೆ, ನಮ್ಮ ಮಾಹಿತಿಯ ಪ್ರಕಾರ, ಶೂನ್ಯ ಎಫ್ಐಆರ್ ದಾಖಲಿಸುವ ಮೂಲಕ ಪ್ರಕರಣವನ್ನು ವರ್ಗಾಯಿಸಲಾಗುತ್ತದೆ. ನಮ್ಮ ಪ್ರಕಾರ, ಇದು ಸರಿಯಾದ ಪ್ರಕ್ರಿಯೆ. ಬಿಹಾರ ಪೊಲೀಸರು ನಮ್ಮನ್ನು ದಾಖಲೆಗಳಿಗಾಗಿ ಕೇಳಿದ್ದಾರೆ, ಈ ಕುರಿತು ನಾವು ಕಾನೂನಾತ್ಮಕ ಸಲಹೆ ಕೇಳಿದ್ದೇವೆ. ಒಂದು ವೇಳೆ ಬಿಹಾರ ಪೊಲೀಸರಿಗೆ ಬಳಿ ಅಂತಹ ಯಾವುದೇ ಕಾನೂನಾತ್ಮಕ ಅಂಶಗಳು ಇದ್ದರೆ, ಅವರು ನಮ್ಮೊಂದಿಗೆ ಹಂಚಿಕೊಳ್ಳಬಹುದು. ಸಹಕಾರ ನೀಡದೆ ಇರುವ ಯಾವುದೇ ಪ್ರಶ್ನೆ ಇಲ್ಲ. ನಾವು ಕಾನೂನು ಸಲಹೆಗಾಗಿ ಕಾಯುತ್ತಿದ್ದೇವೆ. ನನ್ನ ಪ್ರಕಾರ, ಕ್ಷೇತ್ರಾಧಿಕಾರ ನಮಾದಾಗಿದ್ದು, ಅವರ ಬಳಿ ಯಾವುದೇ ಕಾನೂನಾತ್ಮಕ ಅಧಿಕಾರ ಇದ್ದರೆ, ಅವರು ನಮಗೆ ತಿಳಿಸಬೇಕು" ಎಂದು ಅವರು ಹೇಳಿದ್ದಾರೆ.
ನಟಿ ರಿಯಾ ಚಕ್ರವರ್ತಿ ಕುರಿತು ಪ್ರಶ್ನಿಸಲಾಗಿ, ರಿಯಾ ಪ್ರಸ್ತುತ ಎಲ್ಲಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ನಾವು ನಾಲ್ಕು ಬಾರಿಗೆ ವಿಚಾರಣೆಗಾಗಿ ಅವರನ್ನು ಕರೆಯಿಸಿದ್ದು, ನಾಲ್ಕೂ ಬಾರಿ ಅವರು ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ದಿಶಾ ಸಾಲಿಯಾನ್ ಆತ್ಮಹತ್ಯೆ ಪ್ರಕರಣದ ತನಿಖೆ ಜಾರಿಯಲ್ಲಿದೆ
ಸುಶಾಂತ್ ಅವರ ಎಕ್ಸ್-ಮ್ಯಾನೇಜರ್ ದಿಶಾ ಸಾಲಿಯನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಸಿಂಗ್, "ಈ ಘಟನೆ ಜೂನ್ 8-9ರ ರಾತ್ರಿ ನಡೆದಿದೆ. ದಿಶಾ ಸಾಲಿಯನ್ ಪ್ರಕರಣದಲ್ಲಿ, ಆ ರಾತ್ರಿ 6 ಜನರು ಹಾಜರಿದ್ದರು. ನಮ್ಮ ತನಿಖೆ ನಡೆಯುತ್ತಿದೆ. ಎಲ್ಲಾ ಹೇಳಿಕೆಗಳನ್ನು ದಾಖಲಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಲಾಗಿದೆ. ಮನೆಯವರ ಹೇಳಿಕೆಗಳನ್ನು ದಾಖಲಿಸಲಾಗಿದೆ. ಇಲ್ಲಿಯವರೆಗೆ ನಡೆದ ತನಿಖೆಯಲ್ಲಿ ದಿಶಾ ಸಾಲಿಯನ್ ಅವರು ಕೆಲವು ವೈಯಕ್ತಿಕ ಸಮಸ್ಯೆ ಎದುರಿಸುತ್ತಿದ್ದರು ಎಂಬುದಾಗಿ ತೋರುತ್ತಿದೆ. ಅದೂ ಕೂಡ ಅವರ ಆತ್ಮಹತ್ಯೆಗೆ ಒಂದು ಕಾರಣವಾಗಬಹುದು." ಎಂದಿದ್ದಾರೆ.
ದಿಶಾ ಸಾವಿನ ಸುದ್ದಿ ತಿಳಿದು ಸುಶಾಂತ್ ಅಸ್ವಸ್ಥಗೊಂಡಿದ್ದರು
ಈ ಕುರಿತು ತಮ್ಮ ಸುದ್ದಿಗೋಷ್ಠಿಯಲ್ಲಿ ಉಲ್ಲೇಖಿಸಿರುವ ಮುಂಬೈ ಪೋಲೀಸ್ ಆಯುಕ್ತರು, "ಸುಶಾಂತ್ಗೆ ದಿಶಾ ಪರಿಚಯವೂ ಇರಲಿಲ್ಲ. ದಿಶಾ ಅವರ ಸಾವಿನಲ್ಲಿ ಅವರ ಹೆಸರು ಉಲ್ಲೇಖಗೊಂಡಿದಡಕ್ಕೆ ಸುಶಾಂತ್ ಆತಂಕಕ್ಕೆ ಒಳಗಾಗಿದ್ದರು. ದಿಶಾ ಯಾರು? ಎಂದು ಸುಶಾಂತ್ ಕೆಲ ಜನರಿಗೆ ಸಂದೇಶವನ್ನೂ ಕಳುಹಿಸಿದ್ದಾರೆ" ಆ ಸಂದೇಶ ನಮ್ಮ ಬಳಿ ಇದೇ ಎಂದಿದ್ದಾರೆ.
ಔತಣಕೂಟಕ್ಕೆ ಸಂಬಂಧಿಸಿದಂತೆ ಅವರನ್ನು ವಿಚಾರಿಸಲಾಗಿ ನಮ್ಮ ಬಳಿ ಸಿಸಿಟಿವಿ ದೃಶ್ಯಾವಳಿಗಳಿವೆ ಎಂದು ಸಿಂಗ್ ಹೇಳಿದ್ದಾರೆ. ಸುಶಾಂತ್ ಅವರ ಮನೆಯಲ್ಲಿ ಆ ದಿನ ಯಾವುದೇ ಪಾರ್ಟಿ ಇರಲಿಲ್ಲ ಎಂಬುದು ನಮ್ಮ ಅನಿಸಿಕೆ. ನಮ್ಮ ತನಿಖೆಯಲ್ಲಿ ಇಲ್ಲಿಯವರೆಗೆ, ಯಾವುದೇ ರಾಜಕೀಯ ಪಕ್ಷದೊಂದಿಗೆ ಕನೆಕ್ಷನ್ ಇರುವುದು ಇದುವರೆಗೂ ತಿಳಿದುಬಂದಿಲ್ಲ.