ನವದೆಹಲಿ: ಸುಶಾಂತ್ ಸಿಂಗ್ ರಾಜಪುತ್ ಅವರ ತಂದೆ ಕೆ.ಕೆ.ಸಿಂಗ್ ಇತ್ತೀಚೆಗೆ ಮುಂಬೈ ಪೊಲೀಸರಿಗೆ ತಮ ಹೇಳಿಕೆ ನೀಡಿದ್ದಾರೆ. ತಮ್ಮ ಹೇಳಿಕೆಯಲ್ಲಿ, ಅವರು ಸುಶಾಂತ್ ಖಿನ್ನತೆಗೆ ಒಳಗಾಗಿದ್ದ ಎಂಬ ಮಾಹಿತಿ ತಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಈ ಮಾಹಿತಿ ತಮಗೆ ಉದ್ಯಮದವರಿಂದಲೇ ತಿಳಿದಿದ್ದು, ಆದರೆ, ಉದ್ಯಮದಲ್ಲಿ ಉದ್ಭವಿಸಿದ್ದ ಪರಿಸ್ಥಿತಿಯಿಂದ ಸುಶಾಂತ್ ಅಸಮಾಧಾನ ಹೊಂದಿದ್ದರು. ಈ ವಿಷಯ ಖುದ್ದು ಸುಶಾಂತ್ ತನ್ನ ಜೊತೆಗೆ ಹಂಚಿಕೊಂಡಿದ್ದಾರೆ ಎಂದು ಅವರ ತಂದೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಕುರಿತು ಪೊಲೀಸರಿಗೆ ಹೇಳಿಕೆ ನೀಡಿರುವ ಸುಶಾಂತ್ ತಂದೆ, "ಕಳೆದ ಕೆಲ ತಿಂಗಳಿನಿಂದ ಎರಡರಿಂದ ಮೂರು ಬಾರಿ ತಮಗೆ ಸುಶಾಂತ್ ಚಿತ್ರರಂಗದಲ್ಲಿ ಉದ್ಭವಿಸಿರುವ ಪರಿಸ್ಥಿತಿಯಿಂದ ತಮ್ಮಲ್ಲಿ ಕ್ಷುಲ್ಲಕತೆಯ ಭಾವನೆ ಮೂಡುತ್ತಿದೆ ಎಂದು ಹೇಳಿದ್ದರು" ಎಂದಿದ್ದಾರೆ.
ಇನ್ನೊಂದೆಡೆ ಉಧ್ಯಮದಲ್ಲಿ ಉಂಟಾಗಿರುವ ಉದ್ವಿಗ್ನತೆಯ ಹಿನ್ನೆಲೆ ಸುಶಾಂತ್ ಒತ್ತದದಲ್ಲಿದ್ದರು ಎಂಬ ಮಾತನ್ನು ಅವರು -ಪೊಲೀಸರ ಬಳಿ ಒಪ್ಪಿಕೊಂಡಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಅಥವಾ ಇಂತಹ ಪರಿಸ್ಥಿತಿಯಲ್ಲಿ ಶುಶಾಂತ್ ಜೊತೆಗೆ ನಿಲ್ಲಲು ಕೇಳಿಕೊಂಡಾಗ, ಸುಶಾಂತ್ ತಾವು ಈ ಸಂಕಷ್ಟದ ಸ್ಥಿತಿಯಿಂದ ಖುದ್ದು ಹೊರಬರುವುದಾಗಿ ಮತ್ತು ಎಲ್ಲವೂ ಶೀಘ್ರವೇ ಸರಿಯಾಗಲಿದೆ ಎಂದು ಹೇಳಿದ್ದರು. ತಮ್ಮ ಜೊತೆಗಿನ ಮಾತುಕತೆಯ ವೇಳೆ ಸುಶಾಂತ್ ಎಂದಿಗೂ ಕೂಡ ಡಿಪ್ರೆಶನ್ ಎಂಬ ಶಬ್ದದ ಬಳಕೆ ಮಾಡಿಲ್ಲ ಅಥವಾ ತನ್ನ ರೋಗದ ಕುರಿತು ಉಲ್ಲೇಖ ಮಾಡಿರಲಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಸುಶಾಂತ್ ಯಾವುದೇ ಕಂಪನಿ ಅಥವಾ ವ್ಯಕ್ತಿಯಿಂದ ತಾನು ಸಂಕಷ್ಟಕೆ ಸಿಲುಕಿರುವುದಾಗಿ ಉಲ್ಲೇಖಿಸಿಲ್ಲ ಎಂದಿದ್ದಾರೆ.
ಈ ತನಿಖೆಯಲ್ಲಿ, ಇದೆ ಮೊದಲ ಬಾರಿಗೆ ಸುಶಾಂತ್ ಕುಟುಂಬದ ಸದಸ್ಯರೊಬ್ಬರು, ಉದ್ಯಮದ ವರ್ತನೆಯಿಂದ ಸುಶಾಂತ್ ಅಸಮಾಧಾನಗೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಅಂದರೆ, ಸುಶಾಂತ್ ಅವರ ಮರಣದ ನಂತರ ನಡೆಯುತ್ತಿರುವ ಸಂಗತಿಗಳು, ಚಿತ್ರರಂಗದ ಮೇಲೆ ಮಾಡಲಾಗುತ್ತಿರುವ ಆರೋಪಗಳು ನಿಜ ಎಂದೇ ಸಾರುತ್ತಿವೆ. ಹಾಗಾದರೆ,ಉದ್ಯಮದಲ್ಲಿ ನಡೆಯುತ್ತಿದ್ದ ಈ ಘಟನೆಗೆಲೇ ಸುಶಾಂತ್ನನ್ನು ಖಿನ್ನತೆಗೆ ತಳ್ಳಿವೆಯೇ ಮತ್ತು ಸುಶಾಂತ್ ಸಾವಿಗೆ ಇದೇ ಕಾರಣವೇ? ಸದ್ಯ ಈ ಪ್ರಶ್ನೆಗೈಗೆ ಉತ್ತರ ಹುಡುಕುವಲ್ಲಿ ಪೊಲೀಸರು ನಿರತರಾಗಿದ್ದಾರೆ.
ಸುಶಾಂತ್ ತಂದೆ ಪಾಟ್ನಾ ಮರಳುವುದಕ್ಕೂ ಮುನ್ನವೇ ಅವರಿಂದ ಈ ಹೇಳಿಕೆ ಪಡೆಯಲಾಗಿದೆ. ಸುಮಾರು ಒಂದು ಗಂಟೆಗಳ ಕಾಲ ಸುಶಾಂತ್ ಅವರ ತಂದೆ ಹಾಗೂ ಅವರ ಇಬ್ಬರು ಸಹೋದರಿಯರ ಸ್ಟೇಟ್ಮೆಂಟ್ ಪಡೆಯಲಾಗಿದೆ. ಪೋಲೀಸ್ ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಸುಶಾಂತ್ ಕುಟುಂಬ ತೀವ್ರ ಆಘಾತದಲ್ಲಿಕ್ಕ ಕಾರಣ ವಿಸ್ತೃತ ರೂಪದಲ್ಲಿ ಹೇಳಿಕೆ ಪಡೆಯಲು ಸಾಧ್ಯವಾಗಿಲ್ಲ. ಆದರೆ, ಅವಶ್ಯಕ ಎನಿಸಿದರೆ ಮತ್ತೊಮ್ಮೆ ಅವರಿಂದ ವಿಸ್ತೃತ ರೂಪದಲ್ಲಿ ಹೇಳಿಕೆ ಪಡೆದು ಶುಶಾಂತ್ ಸಾವಿಗೆ ಕಾರಣಗಳನ್ನು ಪತ್ತೆ ಹಚ್ಚಲಾಗುವುದು ಎಂದು ಹೇಳಿವೆ.
ಶುಶಾಂತ್ ಕುಟುಂಬ ಸದಸ್ಯರ ಜೋತೆಗೆಗೆ ಸುಶಾಂತ್ ಅವರ ಖಾಸಗಿ ಸಹೋದ್ಯೋಗಿ, ಮ್ಯಾನೇಜರ್, ಸ್ಟಾಫ್ ಹಾಗೂ ಕೆಲ ಸ್ನೇಹಿತರ ಹೇಳಿಕೆಗಳನ್ನು ಕೂಡ ಪಡೆಯಲಾಗಿದೆ. ಅವರ ಬಳಿಯಿಂದ ಶುಶಾಂತ್ ಅವರ ಕಳೆದ ಆರು ತಿಂಗಳುಗಳ ಪ್ರತಿ ಕ್ಷಣದ ಮಾಹಿತಿ ಕಲೆಹಾಕುವ ಪ್ರಯತ್ನ ನಡೆಸಲಾಗಿದೆ.
ಮುಂದಿನ ಎರಡು ದಿನಗಳಲ್ಲಿ ಸುಶಾಂತ್ ಅವರ ಆಪ್ತ ಸ್ನೇಹಿತೆ ರಿಯಾ ಚಕ್ರವರ್ತಿ ಅವರನ್ನೂ ಕೂಡ ಪೊಲೀಸರು ವಿಚಾರಣೆ ನಡೆಸಿ ಮಾಹಿತಿ ಕಲೆಹಾಕಲಿದ್ದಾರೆ ಎನ್ನಲಾಗಿದೆ. ಸುಶಾಂತ್ ಸಂಕಷ್ಟದ ಪರಿಸ್ಥಿತಿಯಲ್ಲಿ ರಿಯಾ ಪ್ರತಿ ಕ್ಷಣ ಕೂಡ ಅವರ ಜೊತೆಗೆ ಇದ್ದರು. ಅದರಲ್ಲೂ ವಿಶೇಷವಾಗಿ ಸುಶಾಂತ್ ಅವರ ಖಿನ್ನತೆಯ ಕುರಿತು ರಿಯಾ ಮಹತ್ವದ ಮಾಹಿತಿ ನೀಡುವ ನಿರೀಕ್ಷೆ ಪೊಲೀಸರು ಹೊಂದಿದ್ದಾರೆ.