ದೂರದಿಂದಲೇ ಬಾಯ್ ಫ್ರೆಂಡ್ ಫೋಟೋ ಕ್ಲಿಕ್‌ ಮಾಡಿದ ತಮನ್ನಾ..! ವಿಡಿಯೋ ವೈರಲ್‌

Tamannaah bhatia Viral video : ನಟ ವಿಜಯ್‌ ವರ್ಮಾ ಜೊತೆ ಮಿಲ್ಕಿ ಬ್ಯೂಟಿ ರಿಲೇಶನ್ ಶಿಪ್‌ನಲ್ಲಿ ಇದ್ದಾರೆ ಅಂತ ನೆಟ್ಟಿಗರು ಗುಮಾನಿ ಹಬ್ಬಿಸಿದ್ದಾರೆ. ಆದ್ರೆ ಇದು ಎಷ್ಟು ನಿಜವೋ.. ಸುಳ್ಳೋ.. ಯಾರಿಗೂ ಗೊತ್ತಿಲ್ಲ.. ಅವರೂ ಸಹ ಎಲ್ಲಿಯೂ ಹೇಳಿಕೊಂಡಿಲ್ಲ. ಆದ್ರೆ ಈ ನಡುವೆ ಇಬ್ಬರು ಒಟ್ಟಿಗೆ ಕೈ ಕೈ ಹಿಡಿದು ಕಾರ್ಯಕ್ರಮವೊಂದರಲ್ಲಿ ಕಂಡ ವಿಡಿಯೋ ಮಾತ್ರ ಯಾಕೋ ಲವ್‌ ಮ್ಯಾಟರ್‌ ನಿಜ ಎನ್ನುವಂತೆ ಮಾಡಿದೆ.

Written by - Krishna N K | Last Updated : Sep 9, 2023, 06:52 PM IST
  • ʼಜೈಲರ್‌ʼ ಸಿನಿಮಾದಲ್ಲಿನ ಕಾವಾಲಾ ಹಾಡಿನ ಮೂಲಕ ಮಿಲ್ಕಿ ಬ್ಯೂಟಿ ತಮನ್ನಾ ಕ್ರೇಜ್‌ ಗಿಟ್ಟಿಸಿಕೊಂಡರು.
  • ಇದೀಗ ನಟಿಯ ಕುರಿತು ವಿಡಿಯೋ ಒಂದು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದೆ.
  • ತಮನ್ನಾ ತನ್ನ ವದಂತಿ ಗೆಳೆಯನ ಫೋಟೋ ಕ್ಲಿಕ್‌ ಮಾಡುತ್ತಿರುವ ವಿಡಿಯೋ ಒಂದು ವೈರಲ್‌ ಆಗಿದೆ.
ದೂರದಿಂದಲೇ ಬಾಯ್ ಫ್ರೆಂಡ್ ಫೋಟೋ ಕ್ಲಿಕ್‌ ಮಾಡಿದ ತಮನ್ನಾ..! ವಿಡಿಯೋ ವೈರಲ್‌ title=

Tamannaah bhatia : ಇತ್ತೀಚಿಗೆ ತೆರೆಕಂಡ ʼಜೈಲರ್‌ʼ ಸಿನಿಮಾದಲ್ಲಿನ ಕಾವಾಲಾ ಹಾಡಿನ ಮೂಲಕ ಮಿಲ್ಕಿ ಬ್ಯೂಟಿ ತಮನ್ನಾ ಕ್ರೇಜ್‌ ಗಿಟ್ಟಿಸಿಕೊಂಡರು. ಅಲ್ಲದೆ ಈ ಹಾಡು ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾ ಪಟ್ಟೆ ಸದ್ದು ಮಾಡಿತ್ತು. ಇದೀಗ ನಟಿಯ ಕುರಿತು ವಿಡಿಯೋ ಒಂದು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದ್ದು, ತಮನ್ನಾಳನ್ನ ಪ್ರೀತಿಸುತ್ತಿದ್ದ ಪಡ್ಡೆ ಹೈಕ್ಳಿಗೆ ಹರ್ಟ್‌ ಆಗಿದೆ.

ಹೌದು... ತಮನ್ನಾ ಲವರ್‌ ಮ್ಯಾಟರ್‌ ಎಲ್ಲರಿಗೂ ಗೊತ್ತಿದೆ. ವಿಜಯ್‌ ವರ್ಮಾ ಜೊತೆ ಮಿಲ್ಕಿ ಬ್ಯೂಟಿ ರಿಲೇಶನ್ ಶಿಪ್‌ನಲ್ಲಿ ಇದ್ದಾರೆ ಅಂತ ನೆಟ್ಟಿಗರು ಗುಮಾನಿ ಹಬ್ಬಿಸಿದ್ದಾರೆ. ಆದ್ರೆ ಇದು ಎಷ್ಟು ನಿಜವೋ.. ಸುಳ್ಳೋ.. ಯಾರಿಗೂ ಗೊತ್ತಿಲ್ಲ.. ಈ ಕುರಿತು ಅವರೂ ಸಹ ಎಲ್ಲಿಯೂ ಹೇಳಿಕೊಂಡಿಲ್ಲ. ಆದ್ರೆ ಈ ನಡುವೆ ಇಬ್ಬರು ಒಟ್ಟಿಗೆ ಕೈ ಕೈ ಹಿಡಿದು ಕಾರ್ಯಕ್ರಮವೊಂದರಲ್ಲಿ ಕಂಡ ವಿಡಿಯೋ ಮಾತ್ರ ಯಾಕೋ ಲವ್‌ ಮ್ಯಾಟರ್‌ ನಿಜ ಎನ್ನುವಂತೆ ಮಾಡಿದೆ.

ಇದನ್ನೂ ಓದಿ: ನೀವು ತೆರೆಯ ಮೇಲೆ ನೋಡುವ ಗ್ಲಾಮರ್ ಹಿಂದೆ ಹೇಳಲಾಗದ ಕಥೆ ಇರುತ್ತದೆ : ರವೀನಾ ಟಂಡನ್

ಇನ್ನು ವೈರಲ್‌ ವಿಡಿಯೋದಲ್ಲಿ ತಮನ್ನಾ ಪರ್ಪಲ್‌ ಕಲರ್‌ ಗೌನ್‌, ಪರ್ಪಲ್‌ ಹೈಹಿಲ್ಸ್‌ ಹಾಗು ಶಾರ್ಟ್‌ ಕರ್ಲೀ ಹೇರ್‌ನಲ್ಲಿ ತುಂಬಾ ಕ್ಯೂಟ್‌ ಆಗಿ ಕಾಣುತ್ತಿದ್ದರು. ಅವರ ಡ್ರೆಸಿಂಗ್‌ ಸ್ಟೈಲ್‌, ಮ್ಯಾನರಿಸಂ, ವಾಕಿಂಗ್‌ ಸ್ಟೈಲ್‌, ಎಲ್ಲವೂ ಚೆನ್ನಾಗಿ ಬ್ಯಾಲೆಸಿಂಗಾಗಿ ಇತ್ತು. ಮುಖದಲ್ಲಿ ಇದ್ದ ಕ್ಯೂಟ್‌ ಸ್ಮೈಲ್‌ ಎಲ್ಲರನ್ನ ಬೆರಗಾಗುವಂತೆ ಮಾಡುತ್ತಿತ್ತು. ತಮನ್ನಾನ ಹಾಟ್‌ ಲಕ್‌ನ ಎಲ್ಲರೂ ಕಣ್ಣು ತುಂಬಿಕೊಳ್ಳುತ್ತಿದ್ದರು. 

ಸದ್ಯ ತಮನ್ನಾ ಜೈಲರ್‌ ಸಿನಿಮಾದ ನಂತರ ರೋಮ್ಯಾಂಟಿಕ್‌ ಡ್ರಾಮ್‌ ವೆಬ್‌ ಸೀರೀಸ್‌ನಲ್ಲಿ ಬಿಸಿಯಾಗಿದ್ದಾರೆ. ನೆಟ್ಟಿಗರಿಂದ ಹಲವಾರು ಪಾಸಿಟಿವ್‌ ಫೀಡ್‌ಬ್ಯಾಕ್‌ ಸಹ ಪಡೆಯುತ್ತಿದ್ದಾರೆ. ಇಂತಹ ಬ್ಯುಸಿ ಶೆಡ್ಯೂಲ್‌ನಲ್ಲೂ ಟೈಮ್‌ ಮಾಡಿಕೊಂಡು ಅವಾರ್ಡ್‌ ಫಂಕ್ಷನ್‌ನಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ: ʼದಿ ಕಾಶ್ಮೀರಿ ಫೈಲ್ಸ್‌ʼ ನಿರ್ದೇಶಕನ ʼದಿ ವ್ಯಾಕ್ಸಿನ್‌ ವಾರ್‌ʼ ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ರಿಲೀಸ್‌

ಮುಂಬೈನಲ್ಲಿ ನಡೆದ ಅವಾರ್ಡ್‌ ಫಂಕ್ಷನ್‌ನಲ್ಲಿ ತಮನ್ನಾ ಹಾಗು ವಿಜಯ್‌ ವರ್ಮಾ ಕಾಣಿಸಿಕೊಂಡಿದ್ದರು. ತಮ್ಮನಾ ಪರ್ಪಲ್‌ ಡ್ರೆಸ್‌ನಲ್ಲಿ ಕಾಣಿಸಿಕೊಂಡರೆ, ಇತ್ತ ವಿಜಯ್‌ ಬ್ಲಾಕ್‌ ಹಾಗು ಸಿಲ್ವರ್‌ ಸೂಟ್‌ನಲ್ಲಿ ಶೈನ್‌ ಆಗುತ್ತಿದ್ದರು. ಇಬ್ಬರು ಕೈ ಕೈ ಹಿಡಿದು ಕೊಂಡು ನಡೆದಾಡಿದ ವಿಡಿಯೋ ಸಹ ತುಂಬಾನೇ ವೈರಲ್‌ ಆಗ್ತಾಯಿದೆ.

ಅಲ್ಲದೆ, ಫೋಟೋಗ್ರಾಫರ್ಸ್‌ ವಿಜಯ್‌ ವರ್ಮಾ ಚಿತ್ರಗಳನ್ನು ತೆಗೆಯುತ್ತಿದ್ದರೆ ಇತ್ತ ತಮನ್ನಾ ಸಹ ತಮ್ಮ ಫೋನ್‌ನಿಂದ ವಿಜಯ್‌ ಫೋಟೋ ಕ್ಲಿಕ್‌ ಮಾಡುತ್ತಿದ್ದರು. ಈ ವಿಡಿಯೋ ಸಹ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್‌ ಆಗುತ್ತಿದೆ. ಇದನ್ನ ನೋಡಿ ನೆಟ್ಟಿಗರು ಕಪಲ್‌ ಗೋಲ್ಸ್‌, ಭಾಬಿ ಫೋಟೋ ಕ್ಲಿಕ್‌ ಮಾಡ್ತೀದಾರೆ. ಅಂತೆಲ್ಲಾ ಕಂಮೆಂಟ್‌ ಮಾಡುತ್ತಿದ್ದಾರೆ. ವಿಜಯ್‌ ಹಾಗು ತಮನ್ನಾ ತಮ್ಮ ರಿಲೇಶನ್ ಶಿಪ್ ಬಗ್ಗೆ ಯಾವುದೇ ರೀತಿಯ ಸಿಕ್ರೇಟ್‌ ಇಟ್ಟಿಲ್ಲ, ಇದರ ಬಗ್ಗೆ ಬಹಿರಂಗವಾಗಿ ಎಲ್ಲಿಯೂ ಮಾತನಾಡಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News