GOAT Movie : ದಳಪತಿ ವಿಜಯ್ ಅಭಿನಯದ ʼಗೋಟ್ʼ ರಿಲೀಸ್ ಡೇಟ್ ಅನೌನ್ಸ್‌..!

GOAT Movie release date : ದಳಪತಿ ವಿಜಯ್‌ ನಟನೆಯ ಬಹುನಿರೀಕ್ಷಿತ ಸಿನಿಮಾ GOAT ಬಿಡುಗಡೆಗೆ ರೆಡಿಯಾಗಿದ್ದು, ಇಂದು ಈ ಸಿನಿಮಾದ ನಿರ್ಮಾಪಕ ಅರ್ಚನಾ ಕಲ್ಪಾತಿ ಮತ್ತು ನಿರ್ದೇಶಕ ವೆಂಕಟ್ ಪ್ರಭು ಅವರು ತಮ್ಮ ಟ್ಟಿಟರ್‌ ಖಾತೆಯಲ್ಲಿ GOAT ಸಿನಿಮಾಗೆ ಸಂಬಂಧಿಸಿದ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. 

Written by - Krishna N K | Last Updated : Apr 11, 2024, 06:32 PM IST
    • ದಳಪತಿ ವಿಜಯ್‌ ನಟನೆಯ ಬಹುನಿರೀಕ್ಷಿತ ಸಿನಿಮಾ GOAT
    • ಬಹುನಿರೀಕ್ಷಿತ ಸಿನಿಮಾ GOAT ಬಿಡುಗಡೆಗೆ ರೆಡಿಯಾಗಿದೆ
    • ಸಧ್ಯ ಚಿತ್ರತಂಡ ವಿಜಯ್‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ನೀಡಿದೆ.
GOAT Movie : ದಳಪತಿ ವಿಜಯ್ ಅಭಿನಯದ ʼಗೋಟ್ʼ ರಿಲೀಸ್ ಡೇಟ್ ಅನೌನ್ಸ್‌..! title=

Vijay GOAT movie :  ದಳಪತಿ ವಿಜಯ್ ಮತ್ತು ವೆಂಕಟ್ ಪ್ರಭು ಮೈತ್ರಿ ಕಾಂಬಿನೇಷನ್‌ನ ಗೋಟ್‌ (GOAT Movie) ಚಿತ್ರದ ಶೂಟಿಂಗ್ ಪ್ರಸ್ತುತ ಭರದಿಂದ ಸಾಗುತ್ತಿದೆ. ಈ ಚಿತ್ರಕ್ಕೆ GOAT - The Greatest Of All The Time ಎಂದು ಹೆಸರಿಡಲಾಗಿದೆ. ಇದರ ನಡುವೆ ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡುವ ಮೂಲಕ ಚಿತ್ರತಂಡ ವಿಜಯ್‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ನೀಡಿದೆ.

ಹೌದು.. ಗೋಟ್‌ ದಳಪತಿ ವಿಜಯ್ ನಟನೆಯ ಸಿನಿಮಾ, ಈ ಸಿನಿಮಾದಲ್ಲಿ ಪ್ರಶಾಂತ್, ಮೋಹನ್, ಪ್ರಭುದೇವ, ಜಯರಾಮ್, ಗಣೇಶ್, ಯೋಗಿ ಬಾಬು, ವೈಭವ್, ಸ್ನೇಹಾ, ಲೈಲಾ, ಮೀನಾಕ್ಷಿ ಚೌಧರಿ ಸೇರಿದಂತೆ ಸಾಕಷ್ಟು ಸ್ಟಾರ್‌ ಕಲಾವಿದರು ನಟಿಸುತ್ತಿದ್ದಾರೆ. ಹಲವು ವರ್ಷಗಳ ನಂತರ ಯುವನ್ ಶಂಕರ್ ರಾಜಾ ವಿಜಯ್ ಚಿತ್ರಕ್ಕೆ ಸಂಗೀತ ನೀಡಿದ್ದು ಈ ಚಿತ್ರದ ವಿಶೇಷ.

ಇದನ್ನೂ ಓದಿ: ನಟಿ ಪ್ರಿಯಾ ಮಣಿ ವೇಷ ನೋಡಿ.. ಜೈ ಶ್ರೀ ರಾಮ್, ಜೈ ಹಿಂದೂ ಎಂದ ನೆಟ್ಟಿಗರು...!

ಬಿಗಿಲ್ ನಂತರ ಈ ಚಿತ್ರವನ್ನು ಎಜಿಎಸ್ ಎಂಟರ್ಟೈನ್ಮೆಂಟ್ ನಿರ್ಮಿಸಿದೆ. ಕಳೆದ ವರ್ಷ ಆರಂಭವಾದ GOAT ಚಿತ್ರದ ಶೂಟಿಂಗ್ ಚೆನ್ನೈ, ದಕ್ಷಿಣ ಆಫ್ರಿಕಾ, ಹೈದರಾಬಾದ್ ಮತ್ತು ಪುದುಚೇರಿಯಲ್ಲಿ ನಡೆದಿತ್ತು. ಅದೀಗ ಅಂತಿಮ ಹಂತಕ್ಕೆ ಬಂದಿದ್ದು, ರಿಲೀಸ್‌ಗೆ ರೆಡಿಯಾಗಿದೆ.

ಚಿತ್ರದ ನಿರ್ಮಾಪಕಿ ಅರ್ಚನಾ ಕಲ್ಪಾತಿ ಅವರು ತಮ್ಮ ಎಕ್ಸ್ ಸೈಟ್ ನಲ್ಲಿ ಗೋಟ್‌ ಸಿನಿಮಾವನ್ನು ಸೆಪ್ಟೆಂಬರ್ 5 ರಂದು ಅಂದರೆ ವಿನಾಯಕ ಚತುರ್ಥಿಯಂದು ವಿಶ್ವದಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಇದರಿಂದ ದಳಪತಿ ಅಭಿಮಾನಿಗಳು ಖುಷಿಯಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News