close

News WrapGet Handpicked Stories from our editors directly to your mailbox

ಮೆಗಾ ಆಕ್ಷನ್ ಥ್ರಿಲ್ಲರ್ ಬಾಹುಬಲಿಯ 'ಸಾಹೋ' ಟ್ರೈಲರ್

ಬಾಹುಬಲಿ ಎರಡು ಭಾಗಗಳಿಂದ ಸಾಕಷ್ಟು ಖ್ಯಾತಿ ಪಡೆದಿದ್ದ ಪ್ರಭಾಸ್ ಈಗ ಸಾಹೋ ಮೂಲಕ ಆಕ್ಷನ್ ಥ್ರಿಲ್ಲರ್ ನ್ನು ಅಭಿಮಾನಿಗಳಿಗೆ ನೀಡಲು ಹೊರಟಿದ್ದಾರೆ.

Updated: Aug 10, 2019 , 08:13 PM IST
ಮೆಗಾ ಆಕ್ಷನ್ ಥ್ರಿಲ್ಲರ್ ಬಾಹುಬಲಿಯ 'ಸಾಹೋ' ಟ್ರೈಲರ್
Photo: Instagram

ಮುಂಬೈ: ಬಾಹುಬಲಿ ಎರಡು ಭಾಗಗಳಿಂದ ಸಾಕಷ್ಟು ಖ್ಯಾತಿ ಪಡೆದಿದ್ದ ಪ್ರಭಾಸ್ ಈಗ ಸಾಹೋ ಮೂಲಕ ಆಕ್ಷನ್ ಥ್ರಿಲ್ಲರ್ ನ್ನು ಅಭಿಮಾನಿಗಳಿಗೆ ನೀಡಲು ಹೊರಟಿದ್ದಾರೆ.

ಹೌದು, ಈ ಸಿನಿಮಾ ಆರಂಭದಲ್ಲಿ ತನ್ನ ವಿಭಿನ್ನ ಬಗೆ ಪೋಸ್ಟರ್ ನಿಂದಾಗಿ ಸಾಕಷ್ಟು ಗಮನ ಸೆಳೆದಿತ್ತು. ಈಗ ಬಹು ದಿನಗಳಿಂದ ಕಾಯ್ದು ಕುಳಿತಿದ್ದ ಸಾಹೋ ನ ರೂಪ ಇಂದು ಬಿಡುಗಡೆಯಾದ ಟ್ರೈಲರ್ ಮೂಲಕ ಸಾಕಾರಗೊಂಡಿದೆ.ಟ್ರೈಲರ್ ನಲ್ಲಿ ಗ್ಯಾಂಗ್ ಸ್ಟಾರ್ ಗಳ ಜೊತೆಗೆ ಪ್ರಭಾಸ್ ಸೆಣೆಸುವ ದ್ರಶ್ಯಗಳು ಸಾಕಷ್ಟು ರೋಚಕವಾಗಿದೆ.

ಸಾಹೋ ಚಿತ್ರದಲ್ಲಿ ಕನ್ನಡದವರೇ ಆದ ಪ್ರಕಾಶ ಬೆಳವಾಡಿ ಸವಾಲಿನ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ. ಜೊತೆಗೆ ಮಂದಿರಾ ಬೇಡಿ , ನೀಲ್ ನಿತಿನ್ ಮುಖೇಶ್ ಚುಂಕಿ ಪಾಂಡೆ ಅರುಣ್ ವಿಜಯ್ ಹಾಗೂ ಚಿತ್ರದ ನಾಯಕಿಯಾಗಿ ಶ್ರದ್ಧಾ ಕಪೂರ್ ಕೂಡ ಅಷ್ಟೇ ಸವಾಲಿನ ಪಾತ್ರದ ಮೂಲಕ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಚಿತ್ರದ ಹಲವು ದೃಶ್ಯಗಳಂತೂ ಹಾಲಿವುಡ್ ಮಾದರಿಯಲ್ಲಿ ಮೂಡಿ ಬಂದಿವೆ. ಬಾಹುಬಲಿಯಂತಹ ಐತಿಹಾಸಿಕ ಹಾಗೂ ಪೌರಾಣಿಕ ಪಾತ್ರಗಳನ್ನು ಮೇಳೈಸಿದ ಪಾತ್ರದಲ್ಲಿ ಅಭಿನಯಿಸಿದ್ದ ಪ್ರಭಾಸ್, ಈಗ ಈ ಚಿತ್ರದಲ್ಲಿ ಮಾತ್ರ ಅದಕ್ಕೆ ತದ್ವಿರುದ್ದ ಎನ್ನುವ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಸುಜೀತ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಾಹೋ ಸಿನಿಮಾವನ್ನು ಯುವಿ ಕ್ರಿಯೇಷನ್ಸ್ ನಿರ್ಮಿಸಿದೆ. ಆರಂಭದಲ್ಲಿ ಈ ಸಿನಿಮಾ ಅಗಸ್ಟ್ 15 ರಂದು ಬಿಡುಗಡೆ ಆಗಲಿದೆ ಎಂದು ಹೇಳಲಾಗುತ್ತಿತ್ತು.ಆದರೆ ಅಕ್ಷಯ ಕುಮಾರ್ ಅಭಿನಯದ ಮಿಶನ್ ಮಂಗಲ್ ಹಾಗೂ ಜಾನ್ ಅಬ್ರಾಹಂ ಅವರ ಬಾತ್ಲಾ ಹೌಸ್ ಬಿಡುಗಡೆಯಾಗುವ ಹಿನ್ನಲೆಯಲ್ಲಿ ಅಂತಿಮವಾಗಿ ಆಗಸ್ಟ್ 30 ಕ್ಕೆ ಬಿಡುಗಡೆ ದಿನಾಂಕವನ್ನು ನಿಗದಿ ಪಡಿಸಲಾಗಿದೆ.