ಮತ್ತೆ ಬೆಚ್ಚಿಬೀಳಿಸಲು ಸಜ್ಜಾದ ಹಾಲಿವುಡ್‌ ಸರಣಿ ಸಿನಿಮಾ ʼಇವಿಲ್‌ ಡೆಡ್‌ʼ ..!

Evil Dead Rise : ಹಾರರ್‌ ಸಿನಿಮಾಗಳು ಅಂದರೆ ಕೆವರಿಗೆ ಇಷ್ಟ ಇನ್ನೂ ಕೆಲವರಿಗೆ ಭಯ. ಅದರಲ್ಲೂ ಬಹುತೇಕ ಜನರು ಹಾರರ್‌ ಸಿನಿಮಾ ನೋಡೋದು ಒಂದು ಥ್ರಿಲ್ ಅಂತಾರೆ. ಇದು ಸರಣಿ ಸಿನಿಮಾ ಈ ಚಿತ್ರವನ್ನು ನೋಡಿ ಬೆಚ್ಚಿ ಬೀಳದವರು ಇಲ್ಲವೇ ಇಲ್ಲ. ಇದೀಗ ಈ ಸಿನಿಮಾದ ಮತ್ತೊಂದು ಸರಣಿ ರಿಲೀಸ್‌ ಆಗಲಿದ್ದು, ಹಾರರ್‌ ಸಿನಿ ರಸಿಕರು ಈ ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.   

Written by - Zee Kannada News Desk | Last Updated : Apr 20, 2023, 10:17 AM IST
  • 80ರ ದಶಕದ ಆರಂಭದಲ್ಲಿ 'ದಿ ಇವಿಲ್ ಡೆಡ್' ಎನ್ನುವ ಸಿನಿಮಾ ಬಂದಿತ್ತು
  • ಸರಣಿಯ ಇನ್ನೂ ಎರಡು ಇನಿಮಾಗಳು ಸಿನಿರಸಿಕರನ್ನು ಭಯಬೀತರಾಗುವಂತೆ ಮಾಡಿದ್ದವು
  • ಇನ್ನೂ ಈ 'ಇವಿಲ್ ಡೆಡ್ ರೈಸ್' ಪ್ರೀಮಿಯರ್‌ ಶೋಗಳು ಈಗಾಗಲೇ ವಿದೇಶದಲ್ಲಿ ಸದ್ದು ಮಾಡುತ್ತಿವೆ.
ಮತ್ತೆ ಬೆಚ್ಚಿಬೀಳಿಸಲು ಸಜ್ಜಾದ ಹಾಲಿವುಡ್‌ ಸರಣಿ ಸಿನಿಮಾ ʼಇವಿಲ್‌ ಡೆಡ್‌ʼ ..!  title=

Hollywood Film : 80ರ ದಶಕದ ಆರಂಭದಲ್ಲಿ 'ದಿ ಇವಿಲ್ ಡೆಡ್' ಎನ್ನುವ ಸಿನಿಮಾ ಬಂದಿತ್ತು. ಇದಾದನಂತರ ಈ ಸರಣಿಯ ಇನ್ನೂ ಎರಡು ಇನಿಮಾಗಳು ಸಿನಿರಸಿಕರನ್ನು ಭಯಬೀತರಾಗುವಂತೆ ಮಾಡಿದ್ದವು. ಅಂತಹದೇ ಬೆಚ್ಚಿ ಬೀಳಿಸುವ ಮತ್ತೋಂದು ಸರಣಿ ಸಿನಿಮಾ 'ಇವಿಲ್ ಡೆಡ್ ರೈಸ್' ಕ್ಷಣಗಣನೆ ಶುರುವಾಗಿದೆ. ಇದನ್ನೂ ಥಿಯೇಟರ್‌ ವಾತಾವರಣದಲ್ಲಿ ನೋಡೋದು ಇನ್ನೂ ಭಯಾನಕವಾಗಿರುತ್ತದೆ. ಅದರಲ್ಲೂ ಮಧ್ಯ ರಾತ್ರಿ ಶೋ ಅಂದರೆ ಜೀವವೇ ಬಾಯಿಗೆ ಬರೋದು ಗ್ಯಾರಂಟಿ. 

ಇನ್ನೂ  ಈ 'ಇವಿಲ್ ಡೆಡ್ ರೈಸ್' ಪ್ರೀಮಿಯರ್‌ ಶೋಗಳು ಈಗಾಗಲೇ ವಿದೇಶದಲ್ಲಿ ಸದ್ದು ಮಾಡುತ್ತಿವೆ. ಭಾರತದಲ್ಲಿ ಹೈದರಾಬಾದ್‌, ಮುಂಬೈ ಸೇರಿದಂತೆ ಇಂದು ಕೆಲವೆಡೆ ಮಧ್ಯರಾತ್ರಿ 11.50ಕ್ಕೆ ಮೊದಲ ಪ್ರದರ್ಶನ ಶುರುವಾಗಲಿವೆ. ಹಾರರ್‌ ಸಿನಿಮಾಗಳನ್ನು ನೋಡುವುದು ಕೆಲವರಿಗೆ ಸಖತ್ ಥ್ರಿಲ್ ಕೊಡುತ್ತದೆ. ಇಂತಹ ಸಿನಿ ಪ್ರೇಮಿಗಳು ಈಗಾಗಲೇ ಟಿಕೆಟ್ ಬುಕ್ ಮಾಡಿಕೊಂಡು ಸಿನಿಮಾ ನೋಡಲು ಕಾಯುತ್ತಿದ್ದಾರೆ.

ಇದನ್ನೂ ಓದಿ-Divya Shridhar - Arnaav: "ನನ್ನ ಮಗುವಿನ ಮುಖ ತೋರಿಸು" - ಬಿಕ್ಕಿ ಬಿಕ್ಕಿ ಅತ್ತ ನಟಿ ದಿವ್ಯಾ ಪತಿ 

ಈ ಹಾರರ್‌ ಚಿತ್ರಕ್ಕೆ ಲೀ ಕ್ರೊನಿನ್ ಆಕ್ಷನ್ ಕಟ್ ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿದ್ದ ಟ್ರೈಲರ್ ನೋಡುಗರಲ್ಲಿ ಉತ್ಸಾಹ ಕೆರಳಿಸಿತ್ತು. ಸರಿಯಾಗಿ 10 ವರ್ಷಗಳ ನಂತರ ಈ ಸರಣಿ ಸಿನಿಮಾ ತೆರೆ ಕಾಣುತ್ತಿದ್ದು ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಚಿತ್ರದಲ್ಲಿ ಎಲ್ಲಿಸಾ ಸುಥರ್‌ಲೆಂಡ್, ಲಿಲಿ ಸುಲ್ಲಿವನ್, ಮಾರ್ಗನ್ ಡೇವಿಯಸ್ 'ಇವಿಲ್ ಡೆಡ್ ರೈಸ್' ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಹಾಲಿವುಡ್‌ ಸಿನಿಮಾಗಳು ಹೆಚ್ಚು ಕ್ರೈಂ ಆಧಾರಿತವಾಗಿದ್ದು, ರಕ್ತಪಾತಗಳನ್ನು ಯಾವುದೇ ತಡೆಗೋಡೆಗಳಿಲ್ಲದೇ ಹರಿಸಲಾಗುತ್ತದೆ. ಈ 'ಇವಿಲ್ ಡೆಡ್ ರೈಸ್' ಚಿತ್ರಕ್ಕಾಗಿ 6500 ಲೀಟರ್ ನಕಲಿ ರಕ್ತವನ್ನು ಬಳಸಿದ್ದಾರೆ ಎನ್ನಲಾಗ್ತಿದೆ. ಇದೇ ಕಾರಣಕ್ಕಾಗಿ ಈ ಸಿನಿಮಾ ಇನ್ನೂ ಭಯಂಕರವಾಗಿ ಮೂಡಿಬಂದಿರುವ ಸಾದ್ಯತೆ ಇದೆ ಎಂದು ಹೇಳಲಾಗುತ್ತಿದೆ. ಟ್ರೈಲರ್ ನೋಡಿದಾಗಲೇ ಕೆಲವರು ಬೆಚ್ಚಿ ಬಿದ್ದಿದ್ದರು. ಇನ್ನು ಸಿನಿಮಾ ನೋಡುವವರ ಕಥೆಯನ್ನು ಊಹಿಸಲು ಸಾದ್ಯವಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದಲ್ಲದೇ ಈ ಸಿನಿಮಾ ಇಂಟರ್‌ವಲ್ ಇಲ್ಲದೇ ಸತತ 2 ಗಂಟೆಗಳ ಕಾಲ ಈ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ.

ಇದನ್ನೂ ಓದಿ-Weekend with Ramesh 5: ಈ ವಾರದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಅತಿಥಿ ಯಾರು ಗೊತ್ತಾ..? 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News