ಹಾಸನ: ರಾತ್ರಿ ಕಳೆದು ಬೆಳಗಾಗೊವಷ್ಟರಲ್ಲಿ ಪ್ರಾಣ ಬಿಟ್ಟ ಇಡೀ ಕುಟುಂಬ!

ರಾತ್ರಿ ಕಳೆದು ಬೆಳಗಾಗೊವಷ್ಟರಲ್ಲಿ ಇಡೀ ಕುಟುಂಬವೆ ಪ್ರಾಣ ಬಿಟ್ಟ ಘಟನೆ ಹಾಸನದಲ್ಲಿ (Hasan) ನಡೆದಿದೆ. ನಿನ್ನೆ ರಾತ್ರಿ ಕೂಡ ಸಂಬಂಧಿಕರೊಂದಿಗೆ ಚೆನ್ನಾಗಿ ಫೋನ್ ನಲ್ಲಿ ಮಾತಾಡಿದ್ದ ತಂದೆ, ತಾಯಿ ಮತ್ತು ಮಗ ಸಾವನ್ನಪ್ಪಿದ್ದಾರೆ. 

Written by - Zee Kannada News Desk | Last Updated : Feb 24, 2022, 06:27 PM IST
  • ರಾತ್ರಿ ಕಳೆದು ಬೆಳಗಾಗೊವಷ್ಟರಲ್ಲಿ ಪ್ರಾಣ ಬಿಟ್ಟ ಇಡೀ ಕುಟುಂಬ
  • ವೃತ್ತಿಯಲ್ಲಿ ಪೆಟ್ರೋಲ್ ಬಂಕ್ ನಡೆಸುತ್ತಿದ್ದ ಸತ್ಯ ಪ್ರಕಾಶ್
ಹಾಸನ: ರಾತ್ರಿ ಕಳೆದು ಬೆಳಗಾಗೊವಷ್ಟರಲ್ಲಿ ಪ್ರಾಣ ಬಿಟ್ಟ ಇಡೀ ಕುಟುಂಬ! title=
ಕುಟುಂಬ

ಹಾಸನ: ರಾತ್ರಿ ಕಳೆದು ಬೆಳಗಾಗೊವಷ್ಟರಲ್ಲಿ ಇಡೀ ಕುಟುಂಬವೆ ಪ್ರಾಣ ಬಿಟ್ಟ ಘಟನೆ ಹಾಸನದಲ್ಲಿ (Hasan) ನಡೆದಿದೆ. ನಿನ್ನೆ ರಾತ್ರಿ ಕೂಡ ಸಂಬಂಧಿಕರೊಂದಿಗೆ ಚೆನ್ನಾಗಿ ಫೋನ್ ನಲ್ಲಿ ಮಾತಾಡಿದ್ದ ತಂದೆ, ತಾಯಿ ಮತ್ತು ಮಗ ಸಾವನ್ನಪ್ಪಿದ್ದಾರೆ. 

ಇದನ್ನೂ ಓದಿ: ಸಿಖ್ ವಿದ್ಯಾರ್ಥಿನಿಗೆ ಟರ್ಬನ್ ತೆಗೆಯಲು ಹೇಳಿದ ಮೌಂಟ್ ಕಾರ್ಮೆಲ್ ಕಾಲೇಜಿನ ಆಡಳಿತ ಮಂಡಳಿ...!

ಮೊನ್ನೆಯಷ್ಟೆ ನೂರಾರು ಜನರ ಜೊತೆ ಸಂಭ್ರಮದಿಂದ ಕಾರ್ಯಕ್ರಮ ಮಾಡಿದ್ದ ಈ ಕುಟುಂಬಕ್ಕೆ ಅದೇನಾಗಿತ್ತೋ? ಮಗನ ಉಪನಯನ ಕಾರ್ಯಕ್ರಮ ಮಾಡಿ ಖುಷಿಯಾಗಿದ್ದವರು ಸಾವಿನೂರಿಗೆ ಪಯಣಿಸಿದ್ದಾರೆ. ಹಾಸನದ ಹೇಮಾವತಿ ನಗರದಲ್ಲಿರೋ ಮನೆಯೊಂದರಲ್ಲಿ ಇಂತಹ ಘಟನೆ ನಡೆದಿದೆ. 

ಮನೆಯ ಮಾಲೀಕ ಸತ್ಯಪ್ರಕಾಶ್, ಹಂಡತಿ ಅನ್ನಪೂರ್ಣ, ಮಗ ಗೌರವ್ ಮತ್ತು ತಾಯಿ ಎಲ್ಲರೂ ಊಟ ಮಾಡಿ ಮಲಗಿದ್ದಾರೆ. ಸತ್ಯಪ್ರಕಾಶ್ ತಾಯಿ ಪ್ರತಿನಿತ್ಯದಂತೆ ಮನೆಯ ಮೊದಲ ಮಹಡಿಯಲ್ಲಿ ಮಲಗಿದ್ದಾರೆ. ಬೆಳಗ್ಗೆ 9 ಗಂಟೆಗೆ ಎದ್ದ ಆಕೆ ಪ್ರತಿ ದಿನ ನಾನು ಏಳೋ ಮುಂಚೆಯೇ ಕಾಫಿ ತರ್ತಿದ್ರಲ್ಲಾ ಇವತ್ತು ಇನ್ನೂ ಏಕೆ ತಂದಿಲ್ಲ ಎಂದು ಕೆಳಗಿಳಿದು ಬಂದು ರೂಂ ನಲ್ಲಿ ನೋಡಿದ್ದಾರೆ. 

ಆಗ ಮೂವರೂ ಕೂಡ ಒಂದೇ ಮಂಚದ ಮೇಲೆ ಮಲಗಿರುವಂತೆ ಕಂಡಿದ್ದಾರೆ. ಎಬ್ಬಿಸಲು ಪ್ರಯತ್ನಿಸಿದ್ದಾರೆ, ಯಾರು ಏಳದಿದ್ದಾಗ ಪಕ್ಕದ ಮನೆಯವರನ್ನ ಕರೆದು ತನ್ನ ಮಗಳಿಗೆ ವಿಷಯ ಮುಟ್ಟಿಸುವಂತೆ ಹೇಳಿದ್ದಾರೆ. ಪಕ್ಕದ ಮನೆಯವರ ದೂರವಾಣಿ ಮೂಲಕ ಸತ್ಯಪ್ರಕಾಶ್ ತಂಗಿ ಮನೆಗೆ ತಿಳಿಸಿದ್ದಾರೆ. ಬಳಿಕ ನೋಡಿದಾಗ ಮೂವರು ಮೃತಪಟ್ಟಿರುವುದು ತಿಳಿದುಬಂದಿದೆ.

ಇದನ್ನೂ ಓದಿ: JOBS: ಅಥ್ಲೆಟಿಕ್ ತರಬೇತಿದಾರರ ತಾತ್ಕಾಲಿಕ ಹುದ್ದೆಗೆ ಅರ್ಜಿ ಆಹ್ವಾನ

ವೃತ್ತಿಯಲ್ಲಿ ಪೆಟ್ರೋಲ್ ಬಂಕ್ ನಡೆಸುತ್ತಿದ್ದ ಸತ್ಯ ಪ್ರಕಾಶ್ ಮೊನ್ನೆಯಷ್ಟೇ ನೂರಾರು ಸಂಬಂಧಿಕರನ್ನು ಸೇರಿಸಿ ಮಗನ ಉಪನಯನ ಕಾರ್ಯವನ್ನೂ ಮಾಡಿದ್ದರು. ಮಗ ಗೌರವ್ ಮೈಸೂರಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದು, ನಟನೆಯಲ್ಲಿ ಆಸಕ್ತಿ ಹೊಂದಿದ್ದರು. ಮೊನ್ನೆಯಷ್ಟೇ ಕಾರ್ಯಕ್ರಮ ನಿಮಿತ್ತ ಹಾಸನದ ತನ್ನ ನಿವಾಸಕ್ಕೆ ಆಗಮಿಸಿದ್ದರು. ಈ ಸಂಬಂಧ ಹಾಸನದ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಹೆಚ್ಚು ಸಾಲ ಮಾಡಿದ್ದ ಕಾರಣ ಒಂದೇ ಕುಟುಂದ ಈ ಮೂವರೂ ಆತ್ಮಹತ್ಯೆಗೆ (suicide) ಶರಣಾಗಿರುವುದು ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News