Viral Video: ಟೈಗರ್ ಶ್ರಾಫ್-ಆಲಿಯಾ ಭಟ್ ಉಲ್ಟಾ ಡಾನ್ಸ್!

ಆಲಿಯಾ ಹಾಗೂ ಶ್ರಾಫ್ ಗೋಡೆಯ ಮೇಲೆ ಡ್ಯಾನ್ಸ್ ಮಾಡುವ ಮೂಲಕ ಮತ್ತಷ್ಟು ಅಭಿಮಾನಿಗಳನ್ನು ತಮ್ಮತ್ತ ಸೆಳೆದಿದ್ದಾರೆ. 

Updated: Jun 8, 2019 , 01:14 PM IST
Viral Video: ಟೈಗರ್ ಶ್ರಾಫ್-ಆಲಿಯಾ ಭಟ್ ಉಲ್ಟಾ ಡಾನ್ಸ್!

ನವದೆಹಲಿ: ಅಲಿಯಾ ಭಟ್ ಮತ್ತು ಟೈಗರ್ ಶ್ರೊಫ್ ಜೋಡಿ ಏನ್ ಮಾಡಿದರೂ ಸಖತ್ ಆಗಿರುತ್ತೆ ಅನ್ನೋ ಅಭಿಮಾನಿಗಳೀಗ ಈ ಜೋಡಿ ಡ್ಯಾನ್ಸ್ ವೀಡಿಯೋ ನೋಡಿ ಶಾಕ್ ಆಗಿದ್ದಾರೆ! ಯಾಕೆ ಗೊತ್ತಾ? 

ಟೈಗರ್ ಶ್ರಾಫ್ ಡ್ಯಾನ್ಸ್ ಹಾಗೂ ಸಾಹಸ ದೃಶ್ಯಗಳಿಗೆ  ಫೇಮಸ್. ಯಾವಾಗಲೂ ಏನನ್ನಾದರೂ ಕ್ರಿಯೇಟಿವ್ ಆಗಿ ಮಾಡ್ತಾನೆ ಇರ್ತಾರೆ. ಇದೀಗ ಆಲಿಯಾ ಹಾಗೂ ಶ್ರಾಫ್ ಗೋಡೆಯ ಮೇಲೆ ಡ್ಯಾನ್ಸ್ ಮಾಡುವ ಮೂಲಕ ಮತ್ತಷ್ಟು ಅಭಿಮಾನಿಗಳನ್ನು ತಮ್ಮತ್ತ ಸೆಳೆದಿದ್ದಾರೆ. ಈ ಡ್ಯಾನ್ಸ್ ವೀಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಶ್ರಾಫ್ ಶೇರ್ ಮಾಡಿದ್ದಾರೆ. ಅದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆ ವೀಡಿಯೋವನ್ನು ನೀವೂ ವೀಕ್ಷಿಸಿ...