ಅನುಷ್ಕಾ, ಕೃತಿ ಅಲ್ಲವೇ ಅಲ್ಲ.. ಇವರೇ ನೋಡಿ ಪ್ರಭಾಸ್‌ ಕ್ರಶ್‌..! ಕೊನೆಗೂ ಗುಟ್ಟು ರಟ್ಟು ಮಾಡಿದ ಬಾಹುಬಲಿ..

Prabhas marriage : ಪ್ಯಾನ್ ಇಂಡಿಯಾ ಹೀರೋ.. ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಮದುವೆ ವಿಚಾರ ಕಟ್ಟಪ್ಪ ಬಾಹುಲಿಯನ್ನ ಏಕೆ ಕೊಂದ? ಎನ್ನುವ ಪ್ರಶ್ನೆಗಿಂತ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ.. ಅನುಷ್ಕಾ ಶೆಟ್ಟಿ ಜೊತೆ ಮದುವೆ.. ಕೃತಿ ಸನೋನ್‌ ಜೊತೆ ಡೇಟಿಂಗ್‌.. ಹೀಗೆ ನೂರಾರು ಸುದ್ದಿಗಳು ಕೇಳಿಬಂದರೂ ಸಹ.. ಸಧ್ಯ ನಟ ಬಿಚ್ಚಿಟ್ಟ ಗುಟ್ಟು ಎಲ್ಲ ಬಾಯನ್ನು ಕಟ್ಟಿದೆ..

Written by - Krishna N K | Last Updated : Jul 25, 2024, 04:35 PM IST
    • ಪ್ಯಾನ್ ಇಂಡಿಯಾ ಹೀರೋ.. ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್
    • ಪ್ರಭಾಸ್ ಮದುವೆ ವಿಚಾರ ಕಟ್ಟಪ್ಪ ಬಾಹುಲಿಯನ್ನ ಏಕೆ ಕೊಂದ? ಎನ್ನುವ ಪ್ರಶ್ನೆಗಿಂತ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ..
    • ಪ್ರಭಾಸ್ ಟಾಲಿವುಡ್‌ನ ಮೋಸ್ಟ್ ಎಲಿಜಬಲ್ ಬ್ಯಾಚುಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ
ಅನುಷ್ಕಾ, ಕೃತಿ ಅಲ್ಲವೇ ಅಲ್ಲ.. ಇವರೇ ನೋಡಿ ಪ್ರಭಾಸ್‌ ಕ್ರಶ್‌..! ಕೊನೆಗೂ ಗುಟ್ಟು ರಟ್ಟು ಮಾಡಿದ ಬಾಹುಬಲಿ.. title=
Prabhas marriage

Prabhas first crush : ಯಂಗ್ ರೆಬೆಲ್ ಸ್ಟಾರ್, ಪ್ಯಾನ್ ಇಂಡಿಯಾ ಹೀರೋ ಪ್ರಭಾಸ್ ಟಾಲಿವುಡ್‌ನ ಮೋಸ್ಟ್ ಎಲಿಜಬಲ್ ಬ್ಯಾಚುಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇತ್ತೀಚೆಗೆ ಡಾರ್ಲಿಂಗ್‌ ಕಲ್ಕಿ ಚಿತ್ರದ ಮೂಲಕ ದೊಡ್ಡ ಯಶಸ್ಸನ್ನು ಪಡೆದರು. ಕಲ್ಕಿ ಚಿತ್ರ 1000 ಕೋಟಿ ರೂ.ಗಿಂತ ಹೆಚ್ಚು ಕೊಳ್ಳೆ ಹೊಡೆದು ಭಾರೀ ಸದ್ದು ಮಾಡುತ್ತಿದೆ.. 

ಕಲ್ಕಿ ನಂತರ, ಯಂಗ್ ರೆಬೆಲ್ ಸ್ಟಾರ್ ಸಲಾರ್ 2, ರಾಜವಂಶ, ಸ್ಪಿರಿಟ್ ಮತ್ತು ಹನುರಾಘವಪುಡಿ ಚಿತ್ರಗಳಿಗೆ ಕಮಿಟ್ ಆಗಿದ್ದು, ಯಾವುದೇ ಗ್ಯಾಪ್ ಇಲ್ಲದೇ ಸಿನಿಮಾ ಮಾಡುತ್ತಿದ್ದಾರೆ. ವಯಸ್ಸು 45 ದಾಟಿದ್ದರೂ.. ಇನ್ನೂ ಮದುವೆಯಾಗದ ಸಿಂಗಲ್ ರೆಬೆಲ್ ಸ್ಟಾರ್ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಆದರೆ ಮದುವೆಯಾಗುವುದಿಲ್ಲ ಎಂದು ಹೇಳುತ್ತಿಲ್ಲ. 

ಇದನ್ನೂ ಓದಿ:ಈ ಸ್ಟಾರ್‌ ನಟ ವರ್ಷಕ್ಕೆ 30 ಕೋಟಿ ರೂ. ದೇಣಿಗೆ ನೀಡ್ತಾರೆ..! ಬಡ ವಿದ್ಯಾರ್ಥಿಗಳಿಗೆ ಬೆನ್ನಾಗಿ ನಿಂತಿದ್ದಾರೆ..

ಇತ್ತೀಚಿಗೆ ಪ್ರಭಾಸ್ ತಮ್ಮ ಮೊದಲ ಕ್ರಶ್ ಯಾರೆಂದು ಬಹಿರಂಗಪಡಿಸಿದರು. ಈ ಹಿಂದೆ ಬಾಹುಬಲಿ ಸಿನಿಮಾ ರಿಲೀಸ್‌ ಸಂದರ್ಭದಲ್ಲಿ ನೀಡಿದ ಸಂದರ್ಶನವೊಂದರಲ್ಲಿ, ಡಾರ್ಲಿಂಗ್‌ ತಮ್ಮ ಮೊದಲ ಕ್ರಶ್ ಬಗ್ಗೆ ಹೇಳಿಕೊಂಡಿದ್ದರು.. 

ಚಿಕ್ಕವನಿದ್ದಾಗ ಸ್ಕೂಲಿನಲ್ಲಿ ಒಬ್ಬ ಟೀಚರ್ ಇದ್ದರು, ಅವರ ಹೆಸರು ಯಮವಲ್ಲಿ. ನಾನು ಚೆನ್ನೈನ ಡಾನ್ ಬಾಸ್ಕೋ ಶಾಲೆಯಲ್ಲಿ ಓದುತ್ತಿದ್ದಾಗ ನನ್ನ ಶಾಲೆಯ ಶಿಕ್ಷಕರೇ ನನ್ನ ಮೊದಲ ಕ್ರಶ್ ಎಂದು ಪ್ರಭಾಸ್ ಹೇಳಿಕೊಂಡಿದ್ದಾರೆ.. ಈ ವಿಡಿಯೋ ಇದೀಗ ಮತ್ತೊಮ್ಮೆ ವೈರಲ್ ಆಗಿದೆ.

ಇದನ್ನೂ ಓದಿ:9 ಜನರ ಜೊತೆ ಒಂದೇ ಮನೆಯಲ್ಲಿ.. 5 ನಿಮಿಷಕ್ಕೆ 2 ಕೋಟಿ..! ಬೆಚ್ಚಿ ಬೀಳಿಸುತ್ತೆ ಈ ನಟಿಯ ಹಿಸ್ಟರಿ

ಪ್ರಭಾಸ್ ಪ್ರೇಮ ವಿವಾಹದ ಬಗ್ಗೆ ಹಲವಾರು ವದಂತಿಗಳು ಹಬ್ಬಿವೆ. ಅನುಷ್ಕಾರನ್ನ ಮದುವೆಯಾಗುತ್ತಾರೆ.. ಎಂಗೇಜ್ ಮೆಂಟ್ ಆಯ್ತು.. ಅಮೆರಿಕದಲ್ಲಿ ಮನೆ ಕೂಡ ಖರೀದಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಅಲ್ಲದೆ, ಆದಿಪುರುಷ ಸಿನಿಮಾ ಸಮಯದಲ್ಲಿ ಕೃತಿಸನನ್‌ ಹೆಸರು ಡಾರ್ಲಿಂಗ್‌ ಜೊತೆ ತಳುಕು ಹಾಕಿಕೊಂಡಿತ್ತು.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News