Tony Kakkar Viral Tweet - ಗಾಯಕ ಟೋನಿ ಕಕ್ಕರ್ ಅವರ ಟ್ವೀಟ್ ವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ಟ್ವೀಟ್ ನಲ್ಲಿ, ಟೋನಿ ಕಕ್ಕರ್ (Tony Kakkar) 'ನಿಮ್ಮ ಜೀವ ಹೆಚ್ಚು ಅಮೂಲ್ಯವಾದುದು' ಎಂದು ಬಳಕೆದಾರರೋಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. '100 ಜನ ಟೋನಿ ಕಕ್ಕರ್ ಬರುತ್ತಾರೆ-ಹೋಗುತ್ತಾರೆ' ಎಂದು ಟೋನಿ ಹೇಳಿದ್ದಾರೆ. ಟೋನಿ ಕಕ್ಕರ್ ಅವರ ಇತ್ತೀಚಿನ ಹಾಡು 'ಕಾಂಟಾ ಲಗಾ'ಗೆ (Tony Kakkar Kanta Laga Song) ದರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಲಭ್ಯವಾಗಿದೆ.
Aap maro mat.. kabhi bhi mat suno . Your life is precious.
100 Tony kakkar aayenge jayenge.
I wish aapko meri Umar lag jaaye 🙏 https://t.co/i6I29XuwUF
— Tony Kakkar (@TonyKakkar) September 9, 2021
ಇದನ್ನೂ ಓದಿ-ಆನ್ ಲೈನ್ ನಲ್ಲಿ ಸೋರಿಕೆಯಾದ ಕಂಗನಾ ರನೌತ್ ಅಭಿನಯದ ತಲೈವಿ
ಬಳಕೆದಾರನ ಕಾಮೆಂಟ್ ಗೆ ಜಬರ್ದಸ್ತ್ ರಿಪ್ಲೈ
ಟೋನಿಯ ಅವರ ಈ ಹಾಡಿಗೆ ಕೆಲವರು ತುಂಬಾ ಚೆನ್ನಾಗಿದೆ ಎಂದು ಹೇಳಿದರೆ, ಕೆಲವರಿಗೆ ಇದು ಸಂಪೂರ್ಣವಾಗಿ ಕಸವಾಗಿದೆ. ಏತನ್ಮಧ್ಯೆ, ಟ್ವಿಟರ್‌ನಲ್ಲಿ (Tony Kakkar Twitter) ಈ ಹಾಡಿಗೆ ಪ್ರತಿಕ್ರಿಯಿಸಿ, ಬಳಕೆದಾರನೊಬ್ಬ - 'ಸರ್, ನಿಮ್ಮ ಹಾಡುಗಳನ್ನು ಕೇಳುವುದಕ್ಕಿಂತ ನಾನು ವಿಷ ಸೇವಿಸಿ ಸಾಯುವುದು ಉತ್ತಮ' ಎಂದಿದ್ದಾನೆ. ಬಳಕೆದಾರರಿಂದ ಇಂತಹ ಪ್ರತಿಕ್ರಿಯೆಯನ್ನು ನೋಡಿ, ಟೋನಿ ತಮ್ಮ ಮೌನ ಮುರಿದಿದ್ದಾರೆ. ಬಳಕೆದಾರರ ಪ್ರತಿಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿ, ಅವರಿಗೆ ರೀಟ್ವೀಟ್ ಮಾಡಿರುವ ಟೋನಿ, 'ನೀವು ಸಾಯಬೇಡಿ, ನನ್ನ ಹಾಡನ್ನು ಕೇಳಬೇಡಿ, ನಿಮ್ಮ ಜೀವನವು ತುಂಬಾ ಅಮೂಲ್ಯವಾದುದು, 100 ಜನ ಟೋನಿ ಕಕ್ಕರ್ ಬರುತ್ತಾರೆ-ಹೋಗುತ್ತಾರೆ, ನನ್ನ ಆಯಸ್ಸು ಕೂಡ ನಿಮಗೆ ಲಭಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ' ಎಂದಿದ್ದಾರೆ.
ಇದನ್ನೂ ಓದಿ-ಹಿಂದಿ ಸಿನಿಮಾ ಜಗತ್ತನ್ನಾಳಿದ್ದ ಧಾರವಾಡ ಮೂಲದ ನಟಿ ಲೀಲಾ ಚಿತ್ನಿಸ್
ಬಳಕೆದಾರನ ವಿಶ್ ಏನು?
ಬಳಕೆದಾರನ ಈ ಕಾಮೆಂಟ್ ಟೋನಿ ಅವರ ಈ ಹಾಡು ಬಿಡುಗಡೆಯಾದ ನಂತರ ಬಂದಿದೆ. ಟೋನಿ ಅವರ ಈ ರೀಟ್ವೀಟ್ ಗೆ ಮತ್ತೆ ಬಳಕೆದಾರ ತನ್ನ ಪ್ರತಿಕ್ರಿಯೆ ನೀಡಿದ್ದಾನೆ. ತನ್ನ ಪ್ರತಿಕ್ರಿಯೆಯಲ್ಲಿ ಬರೆದುಕೊಂಡಿರುವ ಬಳಕೆದಾರ 'ನಾನು ಪ್ರೀತಿಯ ಹಾಡುಗಳನ್ನು ಹೆಚ್ಚಾಗಿ ಬರೆಯುತ್ತೇನೆ. ಆದರೆ, ನೀವು ಕೇವಲ ಡಾನ್ಸ್ ನಂಬರ್ ಕುರಿತು ಮಾತನಾಡುತ್ತಿರಿ. ಪ್ರೀತಿಯ ಹಾಡುಗಳನ್ನು ಕೂಡ ದೊಡ್ಡ ಪ್ರಮಾಣದಲ್ಲಿ ತಯಾರಿಸಿ. ಇದಕ್ಕಾಗಿ ಧನ್ಯವಾದಗಳು. ಆದರೆ, ನನ್ನ ಅನಿಸಿಕೆ ಏನು ಎಂಬುದು ನಿಮಗೆ ಅರಿವಾಗಿರಬೇಕು' ಎಂದಿದ್ದಾನೆ.
ಇದನ್ನೂ ಓದಿ-ಹಾಡುಹಗಲೇ ನಟಿ ಅಲಂಕೃತ ಸಹಾಯ್ ಮನೆಗೆ ನುಗ್ಗಿ 6 ಲಕ್ಷ ರೂ ದೊಚಿಸಿದ ದರೋಡೆಕೋರರು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.