Video: ಅಪ್ಪು ಬಗ್ಗೆ ಎರಡು ವರ್ಷದ ಮುದ್ದು ಮಗು ಹೇಳಿದ್ದೇನು ಗೊತ್ತೇ?

ಅಪ್ಪು ಅಂದ್ರೆ ಆಕಾಶ,ಪುನೀತ್ ಅಂದ್ರೆ ದೇವ್ರು, ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ,

Written by - Zee Kannada News Desk | Last Updated : Aug 4, 2022, 06:47 PM IST
  • ಒಂದಂತೂ ಸತ್ಯ ಪುನೀತ್ ಅಮರ..ಈ ಭೂಮಿ ಇರೋವರೆಗೂ ಪುನೀತ್ ಹೆಸ್ರು ಮಾತ್ರ ಶಾಶ್ವತವಾಗಿರುತ್ತೆ.
  • ಈಗ ಹುಟ್ಟೋ ಕೂಸು ಕೂಡ ಪುನೀತ್ ನಮ್ಮ ದೇವ್ರು ಅಂತ ಖಂಡಿತ ಹೇಳೇ ಹೇಳುತ್ತೆ ಅನ್ನೋದು ಕೂಡ ಅಷ್ಟೇ ಸತ್ಯ,
Video: ಅಪ್ಪು ಬಗ್ಗೆ ಎರಡು ವರ್ಷದ ಮುದ್ದು ಮಗು ಹೇಳಿದ್ದೇನು ಗೊತ್ತೇ?  title=

ಬೆಂಗಳೂರು: ಅಪ್ಪು ಅಂದ್ರೆ ಆಕಾಶ,ಪುನೀತ್ ಅಂದ್ರೆ ದೇವ್ರು, ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ,

ಡಾ.ಪುನೀತ್ ರಾಜಕುಮಾರ್ ನಮ್ಮ ಜೊತೆಯಲ್ಲಿ ಇಲ್ಲದೇ ಇರಬಹುದು, ಆದ್ರೆ ನಾವು ಉಸಿರಾಡೋ ಗಾಳಿ,ಬೆಳಕು ಎಲ್ಲವೂ ಪುನೀತ್ ಮಯವಾಗಿದೆ ಮಕ್ಕಳಿಗೂ ಅಪ್ಪು ಅಂದ್ರೆ ಪ್ರಾಣ. ಊಟ ಮಾಡಿಸುವಾಗ ಅಪ್ಪು ಫೋಟೋ, ಡ್ಯಾನ್ಸ್ ಮತ್ತು ಹಾಡನ್ನ ತೋರಿಸಿದ್ರೆ ಸಾಕು ಹೊಟ್ಟೆ ತುಂಬಾ ಊಟ ಮಾಡೋ ಲೆವೆಲ್ಲಿಗೆ ಮಕ್ಕಳು ಇಷ್ಟ ಪಡೋ ಜೀವ ಪುನೀತ್ ಮಾತ್ರ.

ಅಪ್ಪು ಇಲ್ಲ ಅನ್ನೋದನ್ನ ಅರಗಿಸಿಕೊಳ್ಳೋದು ಇಂದಿಗೂ ಕಠಿಣವೇ ಬಿಡಿ.ಜಸ್ಟ್ ಎರಡು ವರ್ಷದ ಮಗು ಮುದ್ದು ಮುದ್ದಾಗಿ ಪುನೀತ್ ಅಂದ್ರೆ ನಂಗೆ ತುಂಬಾ ಇಷ್ಟ ಅನ್ನೋ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಆ ವಿಡಿಯೋ ನೋಡಿದ ಅಪ್ಪು ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.

ಹಾಗೆಯೇ ಮುಂದುವರೆದು ಎರಡು ವರ್ಷದ ಪುಟ್ಟ ಧನ್ವಿನ್ 'ನಾನು ಯಾರು ಗೊತ್ತಾ "ರಾಕಿ ಬಾಯ್" ಅಂತಾನೆ.ಜೊತೆಗೆ ದೊಡ್ಡವನಾದ ಮೇಲೆ "ರಾಕಿ ಬಾಯ್" ಆಗ್ತೀನಿ ಅನ್ನೋ ಮಾತುಗಳು ಕೂಡ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ದಿಲ್ ಖುಷ್ ಆಗುವಂತೆ ಮಾಡಿದೆ.

ಇದನ್ನೂ ಓದಿ: ಕರ್ನಾಟಕ ರತ್ನ ‘ಅಪ್ಪು’ ಅಭಿಮಾನಿಗಳಿಗೆ ಕಿಚ್ಚ ಸುದೀಪ್‌ ಸ್ಪೆಷಲ್‌ ಥ್ಯಾಂಕ್ಸ್..!‌

ರಾಕಿಂಗ್ ಸ್ಟಾರ್ ಯಶ್ ಫ್ಯಾನ್ಸ್ ಕೂಡ ಈ ವೈರಲ್ ವಿಡಿಯೋವನ್ನ ಲೈಕ್ ಮತ್ತು ಶೇರ್ ಮಾಡೋದ್ರ ಮೂಲಕ ಮಕ್ಕಳಿಗೂ ಕೂಡ ಪುನೀತ್ ಮತ್ತು ಯಶ್ ಅಂದ್ರೆ ಎಷ್ಟು ಇಷ್ಟ ನೋಡಿ ಅಂತ ಕಾಮೆಂಟ್ ಮಾಡುತ್ತಿದ್ದಾರೆ.

ಒಂದಂತೂ ಸತ್ಯ ಪುನೀತ್ ಅಮರ..ಈ ಭೂಮಿ ಇರೋವರೆಗೂ ಪುನೀತ್ ಹೆಸ್ರು ಮಾತ್ರ ಶಾಶ್ವತವಾಗಿರುತ್ತೆ. ಈಗ ಹುಟ್ಟೋ ಕೂಸು ಕೂಡ ಪುನೀತ್ ನಮ್ಮ ದೇವ್ರು ಅಂತ ಖಂಡಿತ ಹೇಳೇ ಹೇಳುತ್ತೆ ಅನ್ನೋದು ಕೂಡ ಅಷ್ಟೇ ಸತ್ಯ,

ಜೊತೆಗಿರದ ಜೀವ ಎಂದಿಗೂ ಜೀವಂತ". ಎನ್ನುವ ಮಾತನ್ನು ನಾವು ಪ್ರತಿದಿನ ಕೇಳುತ್ತಿರುತ್ತೇವೆ, ಕ್ಷಣ ಕ್ಷಣಕ್ಕೂ ನಮ್ಗೆ ಪುನೀತ್ ಹೆಸ್ರು ನೆನಪಿಗೆ ಬರುತ್ತಲೇ ಇರುತ್ತೆ.ಯಾಕಂದ್ರೆ ಅಪ್ಪು ಭೂಮಿಯ,ದೇಶದ ನಮ್ಮ ನಾಡಿನ ಆಸ್ತಿ. ಪುನೀತ್ ರಾಜ್ ಕುಮಾರ್ ಗೆ ಪುಟಾಣಿ ಫ್ಯಾನ್ಸ್ ಗಳು ಹೆಚ್ಚು. ಮಕ್ಕಳಿಗೆ ನಿಂಗೆ ಯಾರು ಇಷ್ಟ ಅಂದ್ರೆ ? ಪುನೀತ್ ರಾಜಕುಮಾರ್ ಅಂತಾರೆ. ಅದು ಬಿಟ್ರೆ ರಾಕಿಂಗ್ ಸ್ಟಾರ್ ಯಶ್ ಅಂತಾರೆ.ಇದೀಗ 2 ವರ್ಷದ ಪುಟ್ಟ ಮಗು ಮಾತಾನಾಡಿರುವ ವೀಡಿಯೋ ಈಗ ಸಾಕಷ್ಟು ವೈರಲ್ ಆಗಿದೆ.

ಕೆಜಿಎಫ್ ಸಿನಿಮಾ ಆದ ಬಳಿಕ ರಾಕಿಂಗ್ ಸ್ಟಾರ್ ಯಶ್ ಗೂ ಪುಟಾಣಿ ಫ್ಯಾನ್ಸ್ ಜಾಸ್ತಿಯಾಗಿದ್ದಾರೆ.ಅದೆಷ್ಟೋ ವಿಡಿಯೋದಲ್ಲಿ ಮಕ್ಕಳು ಯಶ್ ನೋಡಬೇಕು ಅಂತ ಕಣ್ಣೀರಿಟ್ಟ ವಿಡಿಯೋ ಇನ್ನು ಕಣ್ಣ ಮುಂದೆ ಹಾಗೇ ಇದೆ.

ಮತ್ತೇ ಮಾತು ಮುಂದುವರೆಸಿದ ಎರಡು ವರ್ಷದ ಪುಟ್ಟ ಪೋರ ನಾನು ಯಾರು ಗೊತ್ತಾ "ರಾಕಿ ಬಾಯ್" ಅಂತಾನೆ.ಜೊತೆಗೆ ದೊಡ್ಡವನಾದ ಮೇಲೆ "ರಾಕಿ ಬಾಯ್" ಆಗ್ತೀನಿ ಅನ್ನೋ ಮಾತುಗಳು ಕೂಡ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ದಿಲ್ ಖುಷ್ ಆಗುವಂತೆ ಮಾಡಿದೆ.

ಇದನ್ನೂ ಓದಿ: Puneeth Rajkumar Twitter: ಪುನೀತ್‌ ಟ್ವಿಟರ್‌ ಖಾತೆಗೆ ಮರಳಿದ ಬ್ಲೂ ಟಿಕ್

ರಾಕಿಂಗ್ ಸ್ಟಾರ್ ಯಶ್ ಫ್ಯಾನ್ಸ್ ಕೂಡ ಈ ವೈರಲ್ ವಿಡಿಯೋವನ್ನ ಲೈಕ್ ಮತ್ತು ಶೇರ್ ಮಾಡೋದ್ರ ಮೂಲಕ ಮಕ್ಕಳಿಗೂ ಕೂಡ ಪುನೀತ್ ಮತ್ತು ಯಶ್ ಅಂದ್ರೆ ಎಷ್ಟು ಇಷ್ಟ ನೋಡಿ ಅಂತ ಕಾಮೆಂಟ್ ಮಾಡುತ್ತಿದ್ದಾರೆ.

ಒಂದಂತೂ ಸತ್ಯ ಪುನೀತ್ ಅಮರ..ಈ ಭೂಮಿ ಇರೋವರೆಗೂ ಪುನೀತ್ ಹೆಸ್ರು ಮಾತ್ರ ಶಾಶ್ವತವಾಗಿರುತ್ತೆ. ಈಗ ಹುಟ್ಟೋ ಕೂಸು ಕೂಡ ಪುನೀತ್ ನಮ್ಮ ದೇವ್ರು ಅಂತ ಖಂಡಿತ ಹೇಳೇ ಹೇಳುತ್ತೆ ಅನ್ನೋದು ಕೂಡ ಅಷ್ಟೇ ಸತ್ಯ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News