"ಉತ್ತರ ಕಾಂಡ"ಕ್ಕೆ ಡಾಲಿ ಧನಂಜಯ ನಾಯಕ

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ಚಿತ್ರ " ಉತ್ತರಕಾಂಡ". ಈ ಚಿತ್ರದಲ್ಲಿ ನಾಯಕನಾಗಿ ಡಾಲಿ ಧನಂಜಯ  ಮಿಂಚಲಿದ್ದಾರೆ. 

Written by - YASHODHA POOJARI | Edited by - Ranjitha R K | Last Updated : Aug 24, 2022, 09:13 AM IST

  • ಉತ್ತರ ಕಾಂಡ" ಚಿತ್ರದ ನಾಯಕ ಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.
  • ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ.
  • ಜನವರಿಯಲ್ಲಿ ಚಿತ್ರೀಕರಣ ಆರಂಭ
  "ಉತ್ತರ ಕಾಂಡ"ಕ್ಕೆ ಡಾಲಿ ಧನಂಜಯ ನಾಯಕ  title=
Uttarakaanda film

ಬೆಂಗಳೂರು : ಉತ್ತರ ಕಾಂಡ" ಚಿತ್ರದ ನಾಯಕ ಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.  ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಧನಂಜಯ ಅವರ ಹುಟ್ಟುಹಬ್ಬದ ದಿನದಂದು ಕೆ.ಆರ್.ಜಿ ಸ್ಟುಡಿಯೋಸ್ ಸಂಸ್ಥೆ ಈ ಸುದ್ದಿಯನ್ನು ಹಂಚಿಕೊಂಡು, ನಾಯಕ ನಟನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ಚಿತ್ರ " ಉತ್ತರಕಾಂಡ". ಈ ಚಿತ್ರದಲ್ಲಿ ನಾಯಕನಾಗಿ ಡಾಲಿ ಧನಂಜಯ  ಮಿಂಚಲಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಮೂಡಿ ಬಂದ ಡಾಲಿ ಧನಂಜಯ  ಅಭಿನಯಿಸಿದ್ದ "ರತ್ನನ ಪ್ರಪಂಚ" ಚಿತ್ರ ಭಾರೀ ಯಶಸ್ಸು ಕಂಡಿತ್ತು. ಇದೇ ಕಾಂಬಿನೇಶನ್ ನಲ್ಲಿ "ಹೊಯ್ಸಳ" ಚಿತ್ರ ಸಹ ತೆರೆ ಮೇಲೆ ಬರುತ್ತಿದ್ದು, ಮೂರನೇ ಚಿತ್ರವಾಗಿ "ಉತ್ತರಕಾಂಡ" ನಿರ್ಮಾಣವಾಗಲಿದೆ.

ಇದನ್ನೂ ಓದಿ : 'ವಿಕಿಪೀಡಿಯ' ಸಿನಿಮಾದ ಮೆಲೋಡಿ ಸಾಂಗ್ ರಿಲೀಸ್: ಮೋಡಕ್ಕೆ ಮೋಡನೇ ಎಂದು ಗುನುಗಿದ ರಘು ದೀಕ್ಷಿತ್

"ದಯವಿಟ್ಟು ಗಮನಿಸಿ", " ರತ್ನನ ಪ್ರಪಂಚ" ದಂತಹ ವಿಭಿನ್ನ ಚಿತ್ರಗಳ ನಿರ್ದೇಶಕ ರೋಹಿತ್ ಪದಕಿ ನಿರ್ದೇಶನದಲ್ಲಿ "ಉತ್ತರಕಾಂಡ"  ಕೂಡಾ ಮೂಡಿಬರುತ್ತಿದೆ. ಕೆಲವು ದಿನಗಳ ಹಿಂದೆ ಈ ಚಿತ್ರದ ಪೋಸ್ಟರ್ ಬಿಡುಗಡೆಯಾಗಿತ್ತು. ಆದರೆ ಆ ಸಂದರ್ಭದಲ್ಲಿ ನಾಯಕ ಯಾರು ? ಎಂಬ ಕುತೂಹಲವಿತ್ತು‌. ಆ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. 

"ಉತ್ತರ ಕಾಂಡ" ಉತ್ತರ ಕರ್ನಾಟಕದ ಗ್ಯಾಂಗ್ ಸ್ಟರ್ ಕಥೆಯನ್ನು ಆಧರಿಸಿದೆ.‌ ಈ ಕಾರಣದಿಂದ ಉತ್ತರ ಕರ್ನಾಟಕದಲ್ಲೇ ಹೆಚ್ಚಿನ ಭಾಗದ ಚಿತ್ರೀಕರಣ ನಡೆಯುತ್ತದೆ. "ಹೊಯ್ಸಳ" ಚಿತ್ರದ ನಂತರ,  ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಜನವರಿಯಲ್ಲಿ ಎಂದು ಚಿತ್ರದ ಚಿತ್ರೀಕರಣ ನಡೆಯಲಿದೆ ನಿರ್ದೇಶಕ ರೋಹಿತ್  ತಿಳಿಸಿದ್ದಾರೆ. 

ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡುತ್ತಿದ್ದು, ಸ್ವಾಮಿ  ಛಾಯಾಗ್ರಹಣವಿರಲಿದೆ. ದೀಪು ಎಸ್ ಕುಮಾರ್  ಸಂಕಲನ ಹಾಗೂ ವಿಶ್ವಾಸ್ ಅವರ ಕಲಾ ನಿರ್ದೇಶನವಿರುತ್ತದೆ.

ಇದನ್ನೂ ಓದಿ : ಹೀರೋ ಆದ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್: ಯಥಾ ರಾಜ ತಥಾ ಪ್ರಜಾ ಚಿತ್ರಕ್ಕೆ ಮುಹೂರ್ತ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News