Video: 2006 ರಲ್ಲಿ ಐಶ್ವರ್ಯಾ ರೈ ಗೆ ಹಿನ್ನೆಲೆ ನರ್ತಕನಾಗಿದ್ದ ಸುಶಾಂತ್ ಸಿಂಗ್ ರಜಪೂತ್..!

ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಬಾಲಿವುಡ್ ಮತ್ತು ಭಾರತೀಯ ಟೆಲಿವಿಷನ್ ಉದ್ಯಮದಲ್ಲಿ ದೊಡ್ಡ ತಾರೆಯಾಗುವ ಮೊದಲು, ಅವರು ಶಿಯಾಮಾಕ್ ದಾವರ್ ಅವರ ನೃತ್ಯ ತಂಡದ ಭಾಗವಾಗಿದ್ದರು ಮತ್ತು ಹಲವಾರು ಕಾರ್ಯಕ್ರಮಗಳಲ್ಲಿ ಹಿನ್ನೆಲೆ ನರ್ತಕನಾಗಿ ಪ್ರದರ್ಶನ ನೀಡಿದ್ದರು. 

Last Updated : Jun 18, 2020, 10:29 PM IST
Video: 2006 ರಲ್ಲಿ ಐಶ್ವರ್ಯಾ ರೈ ಗೆ ಹಿನ್ನೆಲೆ ನರ್ತಕನಾಗಿದ್ದ ಸುಶಾಂತ್ ಸಿಂಗ್ ರಜಪೂತ್..! title=
Photo Courtsey : youtube

ನವದೆಹಲಿ: ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಬಾಲಿವುಡ್ ಮತ್ತು ಭಾರತೀಯ ಟೆಲಿವಿಷನ್ ಉದ್ಯಮದಲ್ಲಿ ದೊಡ್ಡ ತಾರೆಯಾಗುವ ಮೊದಲು, ಅವರು ಶಿಯಾಮಾಕ್ ದಾವರ್ ಅವರ ನೃತ್ಯ ತಂಡದ ಭಾಗವಾಗಿದ್ದರು ಮತ್ತು ಹಲವಾರು ಕಾರ್ಯಕ್ರಮಗಳಲ್ಲಿ ಹಿನ್ನೆಲೆ ನರ್ತಕನಾಗಿ ಪ್ರದರ್ಶನ ನೀಡಿದ್ದರು. 

ಇದನ್ನೂ ಓದಿ: ಸಾಯುವ ಮುನ್ನ ತಮ್ಮ ಸಿಬ್ಬಂದಿಯ ಬಾಕಿ ಹಣ ತೀರಿಸಿದ್ದ ನಟ ಸುಶಾಂತ್ ಸಿಂಗ್ ರಜಪೂತ್..! 

ಅವರ ನಿಧನದ ಕೆಲವು ದಿನಗಳ ನಂತರ, ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ನಡೆದ 2006 ರ ಕಾಮನ್‌ವೆಲ್ತ್ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಐಶ್ವರ್ಯಾ ರೈ ಬಚ್ಚನ್ ಅವರ ಡ್ಯಾನ್ಸ್ ಪ್ರದರ್ಶನದಲ್ಲಿ ಸುಶಾಂತ್ ಹಿನ್ನೆಲೆ ನರ್ತಕರಲ್ಲಿ ಒಬ್ಬರಾಗಿದ್ದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.ಆ ಸಂದರ್ಭದಲ್ಲಿ ಅವರು ಭಾರತವನ್ನು ಪ್ರತಿನಿಧಿಸಿದ್ದರು. ಮುಂದೆ 2010 ರಲ್ಲಿ ಭಾರತ ನವದೆಹಲಿಯಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಿತು.

ಇನ್ನೊಂದೆಡೆಗೆ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಅವರು ಅಗಲಿದ ಸುಶಾಂತ್ ಗೆ ಸಂತಾಪ ಸೂಚಿಸಿದ್ದಾರೆ.
 

Trending News