VIRAL VIDEO: ಚಳಿಗಾಲದಲ್ಲಿ ಬಾಲಿವುಡ್ ನ ತಾಪಮಾನ ಹೆಚ್ಚಿಸಿದ ನೋರಾ ಫತೇಹಿ ಹಾಡು

ಹೆಸರಿಗೆ ತಕ್ಕಂತೆ 'ಗರ್ಮಿ' ಹಾಡು ಸಾಮಾಜಿಕ ಮಾಧ್ಯಮಗಳಲ್ಲಿ ಬಿಸಿ ಏರಿಸತೊಡಗಿದೆ. ಸಧ್ಯ ಈ ಹಾಡು ವೈರಲ್ ಆಗುತ್ತಿದ್ದು, ಜನರು ವರುಣ್ ಧವನ್ ಹಾಗೂ ಹೋರಾ ಫತೇಹಿ ಅವರ ಈ ಹಾಡನ್ನು ಭಾರಿ ಮೆಚ್ಚಿಕೊಳ್ಳುತ್ತಿದ್ದಾರೆ.

Nitin Tabib - | Updated: Dec 26, 2019 , 07:20 PM IST
VIRAL VIDEO: ಚಳಿಗಾಲದಲ್ಲಿ ಬಾಲಿವುಡ್ ನ ತಾಪಮಾನ ಹೆಚ್ಚಿಸಿದ ನೋರಾ ಫತೇಹಿ ಹಾಡು

ನವದೆಹಲಿ: ವರುಣ್ ಧವನ್, ಶ್ರದ್ಧಾ ಕಪೂರ್ ಹಾಗೂ ನೋರಾ ಫತೇಹಿ ಅಭಿನಯದ ಬಹುನಿರೀಕ್ಷಿತ ಚಿತ್ರ 'ಸ್ಟ್ರೀಟ್ ಡ್ಯಾನ್ಸರ್ 3ಡಿ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಕಳೆದ ವಾರವಷ್ಟೇ ಏ ಚಿತ್ರದ ಜಬರ್ದಸ್ತ್ ಟ್ರೈಲರ್ ಬಿಡುಗಡೆಗೊಳಿಸಲಾಗಿತ್ತು. ನಂತರ ಬಿಡುಗಡೆಗೊಂಡ 'ಮುಕಾಬಲಾ' ಹಾಡಿಗೂ ಕೂಡ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಏತನ್ಮಧ್ಯೆ ಈ ಚಿತ್ರದ 'ಗರ್ಮಿ' ಹೆಸರಿನ ಮತ್ತೊಂದು ಹಾಡು ಬಿಡುಗಡೆಗೊಂಡಿದ್ದು ಸಾಮಾಜಿಕ ಮಾಧ್ಯಮ ಹಾಗೂ ಬಾಲಿವುಡ್ ನಲ್ಲಿ ತಾಪಮಾನ ಹೆಚ್ಚಿಸತೊಡಗಿದೆ.

ಹೆಸರಿಗೆ ತಕ್ಕಂತೆ 'ಗರ್ಮಿ' ಹಾಡು ಸಾಮಾಜಿಕ ಮಾಧ್ಯಮಗಳಲ್ಲಿ ಬಿಸಿ ಏರಿಸತೊಡಗಿದೆ. ಸಧ್ಯ ಈ ಹಾಡು ವೈರಲ್ ಆಗುತ್ತಿದ್ದು, ಜನರು ವರುಣ್ ಧವನ್ ಹಾಗೂ ಹೋರಾ ಫತೇಹಿ ಅವರ ಈ ಹಾಡನ್ನು ಭಾರಿ ಮೆಚ್ಚಿಕೊಳ್ಳುತ್ತಿದ್ದಾರೆ.

ಖ್ಯಾತ ರಾಪ್ ಹಾಡುಗಾರ ಬಾದಷಾ ಹಾಗೂ ಬಾಲಿವುಡ್ ನಲ್ಲಿ ಮುಂಚೂಣಿಯಲ್ಲಿರುವ ಗಾಯಕಿ ನೇಹಾ ಕಕ್ಕಡ ಈ ಹಾಡಿಗೆ ತಮ್ಮ ಧ್ವನಿ ನೀಡಿದ್ದಾರೆ.  ಒಟ್ಟಾರೆ ಹೇಳುವುದಾದರೆ ವರ್ಷಾಂತ್ಯಕ್ಕೆ ಬಿಡುಗಡೆಯಾಗುತ್ತಿರುವ ಈ ಹಾಡು ನ್ಯೂ ಇಯರ್ ಪಾರ್ಟಿಗಳಲ್ಲಿ ಅಭಿಮಾನಿಗಳ ಚಳಿ ಬಿಡಿಸಲಿದೆ ಎಂಬುದು ಮಾತ್ರ ನಿಜ.

'ಸ್ಟ್ರೀಟ್ ಡ್ಯಾನ್ಸರ್ 3ಡಿ' ಚಿತ್ರ 2013ರಲ್ಲಿ ಬಿಡುಗಡೆಯಾಗಿದ್ದ 'ABCD' ಚಿತ್ರದ ಮೂರನೆಯ ಅವತರಿಣಿಕೆಯಾಗಿದೆ. ಚಿತ್ರದ ಎರಡನೇ ಚಾಪ್ಟರ್  2015ರಲ್ಲಿ ಬಿಡುಗಡೆಗೊಂಡಿತ್ತು. 'ಸ್ಟ್ರೀಟ್ ಡ್ಯಾನ್ಸರ್ 3ಡಿ' ಚಿತ್ರದಲ್ಲಿ ಹಳೆ ಕಲಾವಿದರ ಜೊತೆಗೆ ಇದೀಗ ಫೇಮಸ್ ಡ್ಯಾನ್ಸರ್ ಹಾಗೂ ನಟಿಯ ಎಂಟ್ರಿ ಆಗಿದೆ.  ಖ್ಯಾತ ನಿರ್ದೇಶಕ ಹಾಗೂ ಕೊರಿಯೋಗ್ರಾಫರ್ ರೆಮೋ ಡಿಸೋಜಾ ಈ ಚಿತ್ರದ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಜನವರಿ 24ಕ್ಕೆ  ಬಿಡುಗಡೆಯಾಗುತ್ತಿರುವ ಈ ಚಿತ್ರ, ಟಿ-ಸೀರೀಜ್ ಬ್ಯಾನರ್ ಅಡಿ ಈ ಚಿತ್ರ ನಿರ್ಮಾಣಗೊಂಡಿದೆ.