VIRAL VIDEO: ಕಡಲು ತೀರದಲ್ಲಿ ಕ್ಯಾಮರಾ ಕಣ್ಣಿಗೆ ಮೋಹಕ ಪೋಸ್ ನೀಡಿದ ಸನ್ನಿ

ವೈರಲ್ ಆಗಿರುವ ಈ ವಿಡಿಯೋವನ್ನು ಸ್ವತಃ ಸನ್ನಿ ಲಿಯೋನ್ ಅವರೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅವರು ಕಡಲು ತೀರದಲ್ಲಿ ಕ್ಯಾಮೆರಾ ಕಣ್ಣಿಗೆ ಮೋಹಕ ಪೋಸ್ ನೀಡುತ್ತಿರುವುದು ಕಂಡುಬಂದಿದೆ.  

Last Updated : Dec 23, 2019, 04:41 PM IST
VIRAL VIDEO: ಕಡಲು ತೀರದಲ್ಲಿ ಕ್ಯಾಮರಾ ಕಣ್ಣಿಗೆ ಮೋಹಕ ಪೋಸ್ ನೀಡಿದ ಸನ್ನಿ title=

ನವದೆಹಲಿ: ಬಾಲಿವುಡ್ ನ ಖ್ಯಾತ ಮೋಹಕ ನಟಿ ಸನ್ನಿ ಲಿಯೋನ್ ಅವರಿಗೆ ಸಂಬಂಧಿಸಿದ ವಿಡಿಯೋವೊಂದು ಕಳೆದ ಕೆಲ ದಿನಗಳಿಂದ ಸಾಮಾಜಿಕ ಮಾಧ್ಯಮಗಳ ಮೇಲೆ ಸಕತ್ ವೈರಲ್ ಆಗುತ್ತಿದೆ. ಈ ವೈರಲ್ ವಿಡಿಯೋವನ್ನು ಸ್ವತಃ ಸನ್ನಿ ಲಿಯೋನ್ ಅವರೇ ತಮ್ಮ ಇನ್ಸ್ಟಾಗ್ರಾಮ್ ಖಾತೆಗೆ ಹರಿಬಿಟ್ಟಿದ್ದಾರೆ. ಕಡಲು ತೀರದಲ್ಲಿ ಕ್ಯಾಮರಾ ಕಣ್ಣಿಗೆ ಸನ್ನಿ ಮೋಹಕ ಪೋಸ್ ನೀಡುತ್ತಿರುವುದನ್ನು ನೀವು ಗಮನಿಸಬಹುದಾಗಿದೆ. ಎರಡು ದಿನಗಳ ಹಿಂದೆಯೇ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾಗಿರುವ ಈ ವಿಡಿಯೋವನ್ನು ಈಗಾಗಲೇ 8 ಲಕ್ಷಕ್ಕೂ ಅಧಿಕ ಜನರು ವಿಕ್ಷೀಸಿದ್ದಾರೆ.

'ರಾಗಿಣಿ MMS ರಿಟರ್ನ್ಸ್ ಸೀಜನ್-2' ಕಾಣಿಸಿಕೊಳ್ಳಲಿದ್ದಾರೆ ಸನ್ನಿ
ಈ ಮೋಹಕ ನಟಿ ತಮ್ಮ ಮುಂಬರುವ ಚಿತ್ರ 'ರಾಗಿಣಿ MMS ರಿಟರ್ನ್ಸ್ ಸೀಜನ್-2' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಸನ್ನಿ ಈ ಚಿತ್ರದ ಪ್ರಮೋಶನ್ ನಲ್ಲಿ ತೊಡಗಿದ್ದಾರೆ ಹಾಗೂ ನಿರಂತರವಾಗಿ ಇದಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಾರೀ ಆಕ್ಟಿವ್ ಆಗಿರುವ ಸನ್ನಿ ಲಿಯೋನ್, ನಿರಂತರವಾಗಿ ತಮ್ಮ ವಿಡಿಯೋ ಹಾಗೂ ಫೋಟೋಗಳನ್ನು ತಮ್ಮ ಅಭಿಮಾಹಿಗಳ ಜೊತೆ ಹಂಚಿಕೊಳ್ಳುತ್ತಲೇ ಇರುತ್ತಾರೆ. ಶೀಘ್ರವೇ ಅವರು 'ರಾಗಿಣಿ MMS ರಿಟರ್ನ್ಸ್ 2' ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸಲು ಸಿದ್ಧವಾಗಿದ್ದಾರೆ. ಇದು ಈ ಹಿಂದೆ ಬಿಡುಗಡೆಯಾಗಿದ್ದ 'ರಾಗಿಣಿ MMS' ಚಿತ್ರದ ಮುಂದುವರೆದ ಅವತರಿಣಿಕೆಯಾಗಿದೆ. ಈ ಚಿತ್ರದಲ್ಲಿ ವರುಣ್ ಸೂದ್ ಹಾಗೂ ದಿವ್ಯಾ ಅಗರ್ವಾಲ್ ಕೂಡ ಸನ್ನಿ ಜೊತೆ ಕಾಣಿಸಿಕೊಂಡಿದ್ದಾರೆ.

Trending News