ಬೆಂಗಳೂರು: ಪುನೀತ್ ರಾಜ್ಕುಮಾರ್ ಎಂದರೆ ಇಂದಿಗೂ ಕರುನಾಡಿನಾದ್ಯಂತ ದೇವರ ಸ್ಥಾನದಲ್ಲಿಟ್ಟು ಪೂಜೆ ಮಾಡಲಾಗುತ್ತದೆ. ಅಪ್ಪುವನ್ನು ನೆನೆಯದ ದಿನಗಳಿಲ್ಲ. ಅಷ್ಟರ ಮಟ್ಟಿಗೆ ಇವರೆಂದರೆ ಎಂದರೆ ಅಚ್ಚು ಮೆಚ್ಚು.
ಇಂದು ಯಾವುದೇ ಕಾರ್ಯಕ್ರಮಕ್ಕೂ ಹೋದರೂ ಅಪ್ಪು ಪೋಟೋ ಪೂಜಿಸಲಾಗುತ್ತದೆ ಮದುವೆ ಸಮಾರಂಭಗಳಲ್ಲಿ ಹೆಚ್ಚಾಗಿ ಕರುನಾಡ ಯುವರತ್ನನ ಪೋಟೊವನ್ನು ಗಿಫ್ಟ್ ಆಗಿ ನೀಡುತ್ತಾರೆ.
ಇದನ್ನೂ ಓದಿ: Anikha Sindhya: ಮದುವೆಯ ಎಷ್ಟೋ ಪ್ರಪೋಸಲ್‌ಗಳನ್ನು ಕಳೆದುಕೊಳ್ಳಲು ವಿಲನ್ ರೋಲ್ ಕಾರಣ - ಲಕ್ಷ್ಮೀ ಬಾರಮ್ಮ ನಟಿ
ಅಷ್ಟೇ ಅಲ್ಲದೇ ಇತ್ತೀಚೀನ ಜಾತ್ರೆ ಮಹೋತ್ಸವದಲ್ಲಿ ಯುವರತ್ನ ಭಾವ ಚಿತ್ರ ಹಿಡಿದು ಹಬ್ಬ ಆಚರಿಸುತ್ತಾರೆ. ಅಷ್ಟೇ ಅಲ್ಲದೇ ಇವರ ದೊಡ್ಡ ಅಭಿಮಾನಿಯೊಬ್ಬರು ತಮ್ಮ ಮದುವೆಗೆ ಅಪ್ಪು ಪೋಟೋದಿಂದಲೇ ಮದುವೆ ಮಂಟಪ ಸಿಂಗರಿಸಿದ್ದಾರೆ.
ಇದನ್ನೂ ಓದಿ: Actress Tara : ಸ್ಯಾಂಡಲ್ವುಡ್ ಹಿರಿಯ ನಟಿ ತಾರಾ ವಿರುದ್ಧ FIR!
ಸದ್ಯ ಈ ವಿಡೀಯೊ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಮೆಚ್ಚುಗೆ ಪಡೆದುಕೊಂಡಿದೆ. ನವೀನ್ ಕುಮಾರ್ ಮತ್ತು ಶ್ವೇತಾ ಎಂಬುವವರು ಡಾ. ರಾಜ್ಕುಮಾರ್ ಕುಟುಂಬ ಎಂದರೆ ಅಚ್ಚು ಮೆಚ್ಚಂತೆ ಹೀಗಾಗಿ ಮೊನ್ನೆ ನಡೆದ ಅಣ್ಣಾವ್ರು ಜನ್ಮದಿನದಂದು ಇಬ್ಬರು ಹಸೆಮಣೆ ಏರಿದ್ದಾರೆ. ಇವರ ಮದುವೆ ಮಂಟಪದಲ್ಲಿ ಅಣ್ಣಾವ್ರು ಮತ್ತು ಪುನೀತ್ ರಾಜ್ಕುಮಾರ್ ಫೋಟೊದಿಂದ ಅಲಂಕರಿಸಲಾಗಿತ್ತು.
ರಾಜ್ಕುಮಾರ್ರವರ ಕುಟುಂಬಸ್ಥರು ಇವರ ಅಭಿಮಾನಕ್ಕೆ ಫಿಧ ಆಗಿದ್ದಾರೆ. ನವ ದಂಪತಿಗಳಿಗೆ ರಾಘವೇಂದ್ರ ರಾಜ್ಕುಮಾರ್ ಹಾಗೂ ಅವರ ಮಗ ಯುವ ರಾಜ್ಕುಮಾರ್ ವಿಡಿಯೋ ಕಾಲ್ ಮೂಲಕ ಶುಭ ಹಾರೈಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.