ನಿಮ್ಮ ಸಂಗಾತಿ ಇಚ್ಚಿಸುವುದು ಸೌಂದರ್ಯವೋ ವ್ಯಕ್ತಿತ್ವವೋ?

   

Last Updated : Dec 6, 2017, 04:27 PM IST
ನಿಮ್ಮ ಸಂಗಾತಿ ಇಚ್ಚಿಸುವುದು ಸೌಂದರ್ಯವೋ ವ್ಯಕ್ತಿತ್ವವೋ?  title=
ಸಾಂದರ್ಭಿಕ ಚಿತ್ರ :@Pixabay

ಇಂದಿನ ಫ್ಯಾಶನ್ ಯುಗದಲ್ಲಿ ನಿಮ್ಮ ಸಂಗಾತಿಯು ಇಷ್ಟ ಪಡುವ ಸಂಗತಿ ಯಾವುದು? ಅದು ಸೌಂದರ್ಯವೋ ಅಥವಾ ನಿಮ್ಮಲ್ಲಿನ ವ್ಯಕ್ತಿತ್ವವೋ ? ಎನ್ನುವ ಗೊಂದಲ ಮತ್ತು ಕುತೂಹಲ ಸಹಜ ಸಾಮಾನ್ಯವಾಗಿ ಎಲ್ಲರಲ್ಲಿಯೂ  ಇರುತ್ತದೆ.ಹಾಗಾಗಿ ಇಂತಹ ಸಂಗತಿಗಳನ್ನು ತಿಳಿದುಕೊಳ್ಳುವ ನಿಮ್ಮ ಈ ತುಡಿತಕ್ಕೆ ಈಗ ಹೊಸ ಸಂಶೋಧನೆಯೊಂದು ಸಹಾಯಕಾರಿಯಾಗಲಿದೆ.

'ಯು ಗವ್' ಎನ್ನುವ ಸಂಸ್ಥೆಯೊಂದು  ಸುಮಾರು 20 ದೇಶಗಳ ಜನರನ್ನು ಸಂದರ್ಶಿಸುವುದರ ಮೂಲಕ ಅಂತಿಮ ತಿರ್ಮಾನಕ್ಕೆ ಬಂದಿದೆ.ಇದರ ಪ್ರಕಾರ ಸೌಂದರ್ಯವು ಕಂಡಿತವಾಗಿ ವ್ಯಕ್ತಿಗೆ ಪ್ಲಸ್ ಪಾಯಂಟ್ ಆಗುತ್ತದೆ. ಆದರೆ ವ್ಯಕ್ತಿತ್ವ ಈ ಎಲ್ಲ ಬಾಹ್ಯ ಸೌಂದರ್ಯಕ್ಕಿಂತ ಅದು ಪ್ರಮುಖವಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಈ ಸಮೀಕ್ಷೆಯಲ್ಲಿ  ಜಗತ್ತಿನಲ್ಲಿನ ವಿವಿಧ ಭಾಗಗಳ ಮಹಿಳೆ ಮತ್ತು ಪುರುಷರನ್ನು ಸಂದರ್ಶಿಸಲಾಗಿದೆ. ಇದರಲ್ಲಿ  ಶ್ರೇಣಿಕೃತವಾಗಿ  ವ್ಯಕ್ತಿತ್ವ, ಬುದ್ಧಿವಂತಿಕೆ, ಹಾಸ್ಯ ಪ್ರಜ್ಞೆ, ಒಂದೇ ರೀತಿಯ ಆಸಕ್ತಿಗಳು ಹಾಗೂ ಹಣ ಸಂಪಾದನೆ ಈ ಎಲ್ಲ ವಿಷಯಗಳನ್ನು ಕುರಿತಾಗಿ ಅವರ ಪ್ರಾಶಸ್ತ್ಯವನ್ನು ಕೇಳಲಾಗಿತ್ತು, ಅದರಲ್ಲಿ ಬಹುತೇಕರು ವ್ಯಕ್ತಿತ್ವಕ್ಕೆ ಪ್ರಥಮ ಪ್ರಾಶಸ್ತ್ಯವನ್ನು ನೀಡಿದ್ದಾರೆ.

ಇದರಲ್ಲಿ ಬಹುತೇಕ ಮಹಿಳೆಯರು ಪುರುಷರಲ್ಲಿನ ವ್ಯಕ್ತಿತ್ವಕ್ಕೆ ಪ್ರಾಮುಖ್ಯತೆ ನೀಡಿದ್ದಾರೆ ಎಂದು ಹೇಳಲಾಗಿದೆ. ಸೌದಿ ಅರೇಬಿಯಾ ಮತ್ತು ಈಜಿಪ್ಟ್ ನಲ್ಲಿ ಮಹಿಳೆಯರು ಕ್ರಮವಾಗಿ ಶೇಕಡಾ 79,ಮತ್ತು 83 ರಷ್ಟು 'ವ್ಯಕ್ತಿತ್ವ'ದ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಈ ಸಮೀಕ್ಷೆ ತನ್ನ ವರದಿಯಲ್ಲಿ ತಿಳಿಸಿದೆ.   

Trending News