ಈ ಕಾರಣಕ್ಕೆ ಶಾರುಖ್ ಖಾನ್ ಸದ್ಯ ಸಿನಿಮಾದಲ್ಲಿ ನಟಿಸುತ್ತಿಲ್ಲ...!

ಅಭಿಮಾನಿಗಳು ಶಾರುಖ್ ಖಾನ್ ರನ್ನು ಮತ್ತೆ ಬೆಳ್ಳಿ ಪರದೆ ಮೇಲೆ ನೋಡಲು ಕುತೂಹಲದಿಂದ ಕಾಯುತ್ತಿದ್ದಾರೆ. ಆದರೆ ಇದಕ್ಕೆ ಅವರು ಇನ್ನು ಸ್ವಲ್ಪ ಕಾಯಬೇಕಾಗುತ್ತದೆ. ಏಕೆಂದರೆ ಈಗ ಈ ವಿಷಯವನ್ನು ಸ್ವತ ಬಾಲಿವುಡ್ ಬಾದಷಾ ಸ್ಪಷ್ಟ ಪಡಿಸಿದ್ದಾರೆ.   

Last Updated : Jun 22, 2019, 06:13 PM IST
ಈ ಕಾರಣಕ್ಕೆ ಶಾರುಖ್ ಖಾನ್ ಸದ್ಯ ಸಿನಿಮಾದಲ್ಲಿ ನಟಿಸುತ್ತಿಲ್ಲ...!      title=
Photo courtesy: Instagram

ನವದೆಹಲಿ: ಅಭಿಮಾನಿಗಳು ಶಾರುಖ್ ಖಾನ್ ರನ್ನು ಮತ್ತೆ ಬೆಳ್ಳಿ ಪರದೆ ಮೇಲೆ ನೋಡಲು ಕುತೂಹಲದಿಂದ ಕಾಯುತ್ತಿದ್ದಾರೆ. ಆದರೆ ಇದಕ್ಕೆ ಅವರು ಇನ್ನು ಸ್ವಲ್ಪ ಕಾಯಬೇಕಾಗುತ್ತದೆ. ಏಕೆಂದರೆ ಈಗ ಈ ವಿಷಯವನ್ನು ಸ್ವತ ಬಾಲಿವುಡ್ ಬಾದಷಾ ಸ್ಪಷ್ಟ ಪಡಿಸಿದ್ದಾರೆ.   

ಕೊನೆಯ ಬಾರಿಗೆ ಅವರು ಬೆಳ್ಳಿ ಪರದೆ ಮೇಲೆ ಆನಂದ್ ರೈ ಅವರ ಜೀರೋ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ಕಾಣುವಲ್ಲಿ ವಿಫಲವಾಗಿತ್ತು. ಈ ಹಿನ್ನಲೆಯಲ್ಲಿ ಈಗ ಶಾರುಖ ಖಾನ್ ತಮ್ಮ ಸಿನಿಮಾ ಆಯ್ಕೆ ವಿಚಾರವಾಗಿ ಈಗ ಹೆಚ್ಚು ಜಾಗೃತರಾಗಿದ್ದಾರೆ.

ಶಾರುಖ ಖಾನ್ ಮುಂಬರುವ ಹಲವು ಯೋಜನೆಗಳೊಂದಿಗೆ ಸಂಬಂಧ ಹೊಂದಿದ್ದರೂ,  ಈವರೆಗೆ ಯಾವುದೇ ಚಿತ್ರಕ್ಕೆ ಸಹಿ ಹಾಕಿಲ್ಲ. ತಮ್ಮ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸಿದ್ದರಿಂದ ಯಾವುದೇ ಚಿತ್ರಕ್ಕೆ ಸಹಿ ಹಾಕಿಲ್ಲ ಎಂದು ಹೇಳಿದ್ದಾರೆ. ಈಗ ಫಿಲಂ ಫೇರ್ ನೊಂದಿಗೆ ಮಾತನಾಡಿದ ಅವರು  "ನನ್ನ ಬಳಿ ಈಗ ಯಾವುದೇ ಚಿತ್ರವಿಲ್ಲ. ನಾನು ಯಾವುದೇ ಚಿತ್ರದ ಕೆಲಸ ಮಾಡುತ್ತಿಲ್ಲ. ಸಾಮಾನ್ಯವಾಗಿ ಏನಾಗುತ್ತದೆ ಎಂದರೆ ನಿಮ್ಮ ಒಂದು ಚಿತ್ರ ಮುಗಿಯುವಾಗ, ನೀವು ನಿಮ್ಮ ಕೆಲಸವನ್ನು ಪ್ರಾರಂಭಿಸುತ್ತೀರಿ ಮುಂದಿನ ಚಿತ್ರಕ್ಕಾಗಿ ನಾನು 3-4 ತಿಂಗಳುಗಳಲ್ಲಿ ತೊಡಗಿಸಿಕೊಳ್ಳುತ್ತೇನೆ. ಆದರೆ ಈ ಬಾರಿ ನನಗೆ ಹಾಗೆ ಅನಿಸುತ್ತಿಲ್ಲ ... ನನ್ನ ಹೃದಯ ನನಗೆ ಅವಕಾಶ ನೀಡುವುದಿಲ್ಲ..ನಾನು ಸಮಯ ತೆಗೆದುಕೊಳ್ಳಬೇಕು, ಚಲನಚಿತ್ರಗಳನ್ನು ನೋಡಬೇಕು, ಕೇಳಬೇಕು ಕಥೆಗಳು ಮತ್ತು ಹೆಚ್ಚಿನ ಪುಸ್ತಕಗಳನ್ನು ಓದಿ. ನನ್ನ ಮಕ್ಕಳು ಸಹ ಅವರ ಕಾಲೇಜು ಹಂತದಲ್ಲಿದ್ದಾರೆ ... ನನ್ನ ಮಗಳು ಕಾಲೇಜಿಗೆ ಹೋಗುತ್ತಿದ್ದಾಳೆ ಮತ್ತು ನನ್ನ ಮಗ ತನ್ನ ಅಧ್ಯಯನವನ್ನು ಮುಗಿಸಲಿದ್ದಾನೆ. ಹಾಗಾಗಿ ನನ್ನ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುತ್ತೇನೆ. " ಎಂದು ಹೇಳಿದ್ದಾರೆ.     
  

Trending News