close

News WrapGet Handpicked Stories from our editors directly to your mailbox

ಐಟಿ ದಾಳಿ ನಂತರ ಯಶ್ ಏನಂದ್ರು?

ರಾಕಿಂಗ್ ಸ್ಟಾರ್ ಯಶ್ ಮೇಲೆ ನಡೆದ ಐಟಿ ರೇಡ್ ಇಂದಿಗೆ ಮುಕ್ತಾಯವಾಗಿದೆ.

Updated: Jan 5, 2019 , 06:11 PM IST
ಐಟಿ ದಾಳಿ ನಂತರ ಯಶ್ ಏನಂದ್ರು?

ಬೆಂಗಳೂರು: ರಾಕಿಂಗ್‌ ಸ್ಟಾರ್‌ ಯಶ್‌ ಅವರ ನಿವಾಸದಲ್ಲಿ ಐಟಿ ಅಧಿಕಾರಿಗಳು ಗುರುವಾರ ಬೆಳಗ್ಗಿನಿಂದ ಆರಂಭಿಸಿದ್ದ ರೇಡ್ ಶನಿವಾರ ಮಧ್ಯಾಹ್ನ ಅಂತ್ಯಗೊಂಡಿದೆ.

ಐಟಿ ಅಧಿಕಾರಿಗಳು ತೆರಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಶ್‌, ಐಟಿ ಅಧಿಕಾರಿಗಳು ಅವರ ಕೆಲಸ ಮಾಡಿದ್ದಾರೆ. ಸರ್ಕಾರಿ ಸಂಸ್ಥೆ ಯಾಗಿ ಏನು ಮಾಡಬೇಕೋ ಅದನ್ನು ಮಾಡಿದ್ದಾರೆ. ಇದಕ್ಕೆ ಯಾವುದೇ ಬಣ್ಣ ನೀಡುವುದು ಬೇಡ. ಅಧಿಕಾರಿಗಳು ನಮ್ಮನ್ನು ಕೇಳಿದ್ದಕ್ಕೆ ನಾವು ಉತ್ತರ ನೀಡಿದ್ದೇವೆ ಎಂದರು.

ಯಾವುದೋ ಮಾಧ್ಯಮ ಚಿಟ್‌ಫಂಡ್ ನಡೆಸ್ತಿದ್ದಾರೆ ಅಂತ ವರದಿ ಮಾಡಿದ್ದವು, ನನ್ನ ಜೀವನದಲ್ಲಿ ಅವೆಲ್ಲವನ್ನೂ ನೋಡಿಲ್ಲ, ಮಾಡಿಲ್ಲ ಜನ ನೋಡ್ತಾ ಇರುತ್ತಾರೆ ಅಂತ ಹೇಳಿದರಲ್ಲದೆ, ಮಹಾನುಭಾವ ಮಾಧ್ಯಮದವರು ತುಂಬಾ ಜೋರಾಗಿ ಮಾಡ್ತಾ ಇದ್ದಾರೆ. ಅವರು  ಮನಸಾಕ್ಷಿ ಇಟ್ಟುಕೊಂಡು ಕೆಲಸ ಮಾಡಲಿ ಎಂದು ಹೇಳಿದರು.