Yuva: "ಒಬ್ಬನೇ ಶಿವ, ಒಬ್ಬನೇ ಯುವ" ಸಾಂಗ್‌ ಔಟ್!

Yuva First Single: ಚಂದನವನದ ಬಹುನಿರೀಕ್ಷಿತ ಯುವ ಸಿನಿಮಾದ ಮೊದಲ ಹಾಡು ʻಒಬ್ಬನೇ ಶಿವ, ಒಬ್ಬನೇ ಯುವʼ ನಿನ್ನೆ ಚಾಮರಾಜನಗರದಲ್ಲಿ ಬಿಡುಗೆಡೆಯಾಗಿದೆ. ಇಲ್ಲಿದೆ ಸಂಪೂರ್ಣ ವಿವರ.  

Written by - Zee Kannada News Desk | Last Updated : Mar 3, 2024, 10:39 AM IST
  • ನಿನ್ನೆ ಚಾಮರಾಜನಗರದಲ್ಲಿ ನಡೆದ ಯುವ ಸಾಂಗ್‌ ರಿಲೀಸ್‌ ಇವೆಂಟ್‌ನಲ್ಲಿ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ.
  • ಯುವರಾಜ್‌ಕುಮಾರ್‌ ಹೀರೋ ಆಗ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಸಕಲ ತಯಾರಿಯನ್ನ ಮಾಡಿಕೊಂಡೆ ಅಖಾಡಕ್ಕೆ ಧುಮುಕಿದ್ದಾರೆಂಬುದಕ್ಕೆ ಈ ಹಾಡೇ ಸಾಕ್ಷಿಯಾಗಿದೆ.
  • ಯುವ ಚಿತ್ರದ ಫಸ್ಟ್‌ ಸಿಂಗಲ್ ಬಿಡುಗಡೆಯಾಗಿ ಯುವ ಸಮೂಹವನ್ನು ಮಾತ್ರವಲ್ಲದೇ ಎಲ್ಲರನ್ನೂ ಸೆಳೆಯುತ್ತಿದೆ.
Yuva: "ಒಬ್ಬನೇ ಶಿವ, ಒಬ್ಬನೇ ಯುವ" ಸಾಂಗ್‌ ಔಟ್! title=

Yuva First Song Released: ಸ್ಯಾಂಡಲ್‌ವುಡ್‌ ಹೊಸ ಪ್ರತಿಭೆ ದೊಡ್ಮನೆ ಕುಡಿ ಯುವರಾಜ್‌ಕುಮಾರ್‌  ಅಭಿನಯದ ಯುವ ಚಿತ್ರದ ʻಒಬ್ಬನೇ ಶಿವ, ಒಬ್ಬನೇ ಯುವʼ ಹಾಡು ಬಿಡುಗಡೆಯಾಗಿದೆ. ನಿನ್ನೆ ಚಾಮರಾಜನಗರದಲ್ಲಿ ನಡೆದ ಯುವ ಸಾಂಗ್‌ ರಿಲೀಸ್‌ ಇವೆಂಟ್‌ನಲ್ಲಿ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ವರನಟ ಡಾ.ರಾಜ್‌ಕುಮಾರ್‌ ಜನಿಸಿ ಬೆಳೆದ ಚಾಮರಾಜನಗರದಲ್ಲೇ ಯುವರಾಜ್ ಕುಮಾರ್ ಮೊದಲ ಹೆಜ್ಜೆ ಇಟ್ಟಿದ್ದಾರೆ.

ಯುವ ಚಿತ್ರದ ಮೊದಲ ಹಾಡು ʻಒಬ್ಬನೇ ಶಿವ ಒಬ್ಬನೇ ಯುವʼ ಸಾಲುಗಳು ಹಾಡನ್ನು ನೋಡಿದವರು ನೋಡ್ತಾನೇ ಇದ್ದು, ಬಿಟ್ಟು ಬಿಡದಂಗೆ  ಕೇಳ್ತಾನೆ ಇರಬೇಕು ಅನ್ನಿಸುವ ಹಾಗೆ ಇದೆ. ಈ ಸಾಂಗ್‌ ಮೈ ಮರೆಸುವುದರ ಜೊತೆಗೆ ಮೈ ಕುಣಿಸುತ್ತದೆ. ಈ ಹಾಡನ್ನು ನೋಡುತ್ತಾಯಿದ್ದರೇ ಥೇಟ್ ನಮ್ಮೆಲ್ಲರ ಯುವರತ್ನ ನೆನಪಿಸುವಂತೆ ಮಾಡುತ್ತದೆ, ಆದರೆ ಇಲ್ಲಿ ಅಪ್ಪು ಕಾಣಲ್ಲ. ಬದಲಿಗೆ ಯುವ ಕಣ್ಣಲ್ಲಿ ಅಪ್ಪು ಕಾಣ್ತಾರೆ. ಇದರಲ್ಲಿ ಯುವ ಪುನೀತ್‌ ರಾಜ್‌ಕುಮಾರ್‌ ಹೆಸರನ್ನ ಉಳಿಸಬೇಕು, ಕಾಪಾಡಬೇಕು ಎಂದು ಹೆಜ್ಜೆ ಹಾಕಿದ್ದಾರೆ. 

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಕೊಟ್ರು ಗುಡ್‌ ನ್ಯೂಸ್..‌ ಮದುವೆ ವದಂತಿ ಬೆನ್ನಲ್ಲೇ ಅಭಿಮಾನಿಗಳಿಗೆ ಸಿಕ್ತು ಸರ್‌ಪ್ರೈಸ್‌.!

ಇನ್ನೂ ನಟ ಯುವರಾಜ್‌ಕುಮಾರ್‌ ಹೀರೋ ಆಗ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಸಕಲ ತಯಾರಿಯನ್ನ ಮಾಡಿಕೊಂಡೆ ಅಖಾಡಕ್ಕೆ ಧುಮುಕಿದ್ದಾರೆಂಬುದಕ್ಕೆ ಈ ಹಾಡೇ ಸಾಕ್ಷಿಯಾಗಿದೆ. ರಾಜ್ ಕುಟುಂಬದ ಇತರ ಕಲಾವಿದರಂತೆ ಯುವ ಸಹ ನಟನೆ, ಡ್ಯಾನ್ಸ್‌, ಸಾಹಸ ಸೇರಿದಂತೆ ಪ್ರತಿಯೊಂದು ವಿಭಾಗದಲ್ಲೂ ತರಬೇತಿ ಪಡೆದಿದ್ದಾರೆ. ಸಿನಿಮಾದ ಮೊದಲ ಹಾಡನ್ನು ನೋಡಿದ ಫ್ಯಾನ್ಸ್‌ ಈ ನಟನ ಖದರ್‌ಗೆ ಈಗಾಗಲೇ ಫಿದಾ ಆಗಿದ್ದಾರೆ.

ಯುವ ಚಿತ್ರದ ಫಸ್ಟ್‌ ಸಿಂಗಲ್ ಬಿಡುಗಡೆಯಾಗಿ ಯುವ ಸಮೂಹವನ್ನು ಮಾತ್ರವಲ್ಲದೇ ಎಲ್ಲರನ್ನೂ ಸೆಳೆಯುತ್ತಿದೆ. ಈ ಹಾಡಿಗೆ ಸಾಹಿತ್ಯವನ್ನು ಸಿನಿಮಾದ ಸೃಷ್ಟಿಕರ್ತ ಸಂತೋಷ್ ಆನಂದ್ ರಾಮ್ ಬರೆದಿದ್ದಾರೆ. ಈ ಡೈರೆಕ್ಟರ್‌ ಕೇವಲ ನಿರ್ದೇಶನ ಅಷ್ಟೇ ಮಾಡದೆ ಹಾಡಿನ ಗಾಯಕ ನಕಾಶ್‌ ಜೊತೆಗೆ ಖುದ್ದು ಧ್ವನಿಯಾಗಿದ್ದಾರೆ. ಇನ್ನೂ ಈ ಸಾಂಗ್‌ಗೆ ಅಜನೀಶ್‌ ಲೋಕನಾಥ್‌ ಮ್ಯೂಸಿಕ್‌ ಕಂಪೋಸ್‌ ಮಾಡಿದ್ದಾರೆ. ಹಾಗೆ ಈ ಚಿತ್ರ ಇದೇ ಮಾರ್ಚ್‌ 29 ರಂದು ರಾಜ್ಯಾದ್ಯಂತ ಬೆಳ್ಳಿತೆರೆ ಮೇಲೇ ರಾರಾಜಿಸಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News