ಸಾವಿರ ಸಂಚಿಕೆಯ ಸಂಭ್ರಮದಲ್ಲಿ ಧಾರಾವಾಹಿ.! ನಿಮ್ಮೂರಿನಲ್ಲಿ ನಡೆಯಲಿದೆ 'ಜೀ಼ ಕನ್ನಡ ಗಟ್ಟಿಮೇಳ ಜಾತ್ರೆ'

ಜೀ ಕನ್ನಡ ವಾಹಿನಿಯ ಬಯಸಿದ ಬಾಗಿಲು ತೆರೆಯುವಂತೆ ಮಾಡಿದ ದೊಡ್ಡ ಕಥೆ ಇದು. ಹೆಣ್ಣು ಹೆತ್ತವರ ಕನಸು ಅದೇ 'ಗಟ್ಟಿಮೇಳ...'

Written by - Ranjitha R K | Last Updated : Jan 13, 2023, 03:42 PM IST
  • 1000 ಸಂಚಿಕೆಗಳನ್ನು ಪೂರೈಸುತ್ತಿರುವ 'ಗಟ್ಟಿಮೇಳ
  • ಅಭಿಮಾನಿಗಳ ಅಂಗಳದಲ್ಲಿ ಜೀ಼ ಕನ್ನಡ ಗಟ್ಟಿಮೇಳ ಜಾತ್ರೆ'
  • ಭಾನುವಾರ ಮಧ್ಯಾಹ್ನ 3.00 ಕ್ಕೆ ಜೀ ವಾಹಿನಿಯಲ್ಲಿ ಪ್ರಸಾರ
ಸಾವಿರ ಸಂಚಿಕೆಯ ಸಂಭ್ರಮದಲ್ಲಿ ಧಾರಾವಾಹಿ.! ನಿಮ್ಮೂರಿನಲ್ಲಿ ನಡೆಯಲಿದೆ  'ಜೀ಼ ಕನ್ನಡ ಗಟ್ಟಿಮೇಳ ಜಾತ್ರೆ' title=

ಬೆಂಗಳೂರು : ಕನ್ನಡ ಕಿರುತೆರೆಯ ಮನೋರಂಜನೆಯಲ್ಲಿ ಸದಾ ಹೊಸತನವನ್ನು ನೀಡುತ್ತಿರುವ ಜೀ ಕನ್ನಡ ವಾಹಿನಿಯ ಹೆಮ್ಮೆಯ ಕಥೆ 'ಗಟ್ಟಿಮೇಳ'. ಈ ಧಾರಾವಾಹಿ ಇದೀಗ  1000 ಸಂಚಿಕೆಗಳನ್ನು ಪೂರೈಸುತ್ತಿದೆ. ಸತತ ನಾಲ್ಕು ವರ್ಷಗಳಿಂದ ಕನ್ನಡ ಕಿರುತೆರೆಯ 8.00 ಗಂಟೆಯ ಸ್ಲಾಟ್ ಕಿಂಗ್‌ ಆಗಿ ಗಟ್ಟಿಯಾಗಿ ಕುಳಿತಿದೆ 'ಗಟ್ಟಿಮೇಳ..'

ಆರಂಭದಿಂದ ಇಂದಿನವರೆಗೂ ಹೊಸತನ ಟ್ವಿಸ್ಟ್‌ಗಳ ಮೂಲಕ ಕನ್ನಡ ಕಿರುತೆರೆಯ ಅಭಿಮಾನಿ ದೇವರುಗಳನ್ನು ತಲುಪುವುದರಲ್ಲಿ ಯಶಸ್ವಿಯಾದ ಕಥೆ.

ಇದನ್ನೂ ಓದಿ : Check bounce Case : ಸ್ಯಾಂಡಲ್‌ವುಡ್ ನಿರ್ದೇಶಕ ಗುರು ಪ್ರಸಾದ್ ಅರೆಸ್ಟ್‌

ವೇದ್ಯಾ ಎಂಬ ಹೆಸರಿನಲ್ಲಿ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದಿರುವ ವೇದಾಂತ್ ಮತ್ತು ಅಮೂಲ್ಯ ಪ್ರೇಮಕಥೆಯಲ್ಲಿರುವ ರೊಮ್ಯಾನ್ಸ್, ಎಮೋಷನ್ ಮತ್ತು ತರಲೆ ತುಂಟಾಟಗಳು ವೀಕ್ಷಕರನ್ನು ಸೆಳೆಯುತ್ತಿವೆ.‌

ಪ್ರತಿ ವರ್ಷ ಜೀ಼ ಕುಟುಂಬ ಅವಾರ್ಡ್‌ನಲ್ಲಿ ಜನ ಮೆಚ್ಚಿದ ಧಾರಾವಾಹಿ, ನಾಯಕ ನಟಿ, ನಾಯಕ ನಟ ಹಾಗೂ ಅತ್ಯುತ್ತಮ ರೇಟೆಡ್ ಸೀರಿಯಲ್ ಅವಾರ್ಡ್‌ಗಳನ್ನು ತನ್ನ ಮುಡಿಗೇರಿಸಿಕೊಂಡ ಈ ಕಥೆ, ಇಡೀ ಧಾರವಾಹಿಗಳ ಇತಿಹಾಸದಲ್ಲಿ ಸಾವಿರಕ್ಕೂ ಅಧಿಕ ಅಭಿಮಾನಿಗಳ ಪೇಜ್‌ಗಳನ್ನು ಹೊಂದಿರುವ 'ದಿ ಬಿಗ್ ಫ್ಯಾನ್ ಬೇಸ್ ಸೀರಿಯಲ್ ಆಫ್ ಡಿಕೇಡ್'  ಆಗಿ ಹೊರ ಹೊಮ್ಮಿದೆ. 

ಇಲ್ಲಿ ವೇದಾಂತ್- ಅಮೂಲ್ಯ ಪಾತ್ರಗಳೊಂದಿಗೆ ಆ ಪಾತ್ರಗಳ ಸುತ್ತಮುತ್ತ ಇರುವ ವೈಜಯಂತಿ , ವೈದೇಹಿ, ವಿಕ್ರಾಂತ್, ಆರತಿ, ಅದಿತಿ ಮತ್ತು ಧ್ರುವ ಅವರ ಪ್ರೇಮಾಧ್ಯಾಯ, ಸಾರ್ಥಕ್ ಮತ್ತು ವೇದಾಂತ್ ನೆಚ್ಚಿನ ತಂಗಿ ಆಧ್ಯ , ಅಂಜಲಿ ಮಂಜುನಾಥ್, ಪರಿಮಳ, ಖಡಕ್ ವಿಲನ್ ಸುಹಾಸಿನಿ ವಸಿಷ್ಠ ಮತ್ತು ತನ್ನ ನಟನೆಯಿಂದಲೇ ಎಲ್ಲರನ್ನೂ ನಗಿಸುತ್ತಿರುವ ಕಾಂತಾ ಪಾತ್ರಗಳು ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿವೆ. 

ಇದನ್ನೂ ಓದಿ : "ಸುವರ್ಣ ಸಂಕ್ರಾಂತಿ ಸಂಭ್ರಮ"... ಸ್ಯಾಂಡಲ್‌ವುಡ್ ತಾರೆಯರ ಸಮಾಗಮ..! ತಪ್ಪದೇ ವೀಕ್ಷಿಸಿ

ಆರಂಭದಿಂದ ಇಲ್ಲಿಯವರೆಗೂ ವಿಭಿನ್ನ ರೀತಿಯ ಧಾರಾವಾಹಿಗಳ ನಡುವೆಯೂ ತನ್ನ ಸ್ಥಾನವನ್ನು ಬಿಟ್ಟುಕೊಡದೆ ಗಟ್ಟಿಯಾಗಿ ಮುಂದುವರಿಯುತ್ತಿರುವ 'ಗಟ್ಟಿಮೇಳ'  ಆರಂಭದಿಂದಲೂ ಇಂದಿನವರೆಗೂ ಅತಿ ಹೆಚ್ಚು ಬಾರಿ  ನಂಬರ್ 1 ಧಾರಾವಾಹಿಯಾಗಿ ಹೊರಹೊಮ್ಮಿದೆ. ಈ ಧಾರಾವಾಹಿ ದಾಖಲೆಯ 16.8 ಟಿವಿಆರ್‌ಗಳ ಮೂಲಕ ಮತ್ತೊಂದು ಇತಿಹಾಸವನ್ನು ಸೃಷ್ಟಿಸಿದೆ.

ಇದೇ ಗುರುವಾರ ಕೊಪ್ಪಳದ ಕುಕನೂರು ಗ್ರಾಮದಲ್ಲಿ ಸಾವಿರ ಸಂಚಿಕೆಯ ವಿಶೇಷ 'ಜೀ಼ ಕನ್ನಡ ಗಟ್ಟಿಮೇಳ ಜಾತ್ರೆ' ಅಭಿಮಾನಿಗಳ ಅಂಗಳದಲ್ಲಿ ನಡೆಯಲಿದೆ. ಇದೇ ಭಾನುವಾರ ಮಧ್ಯಾಹ್ನ 3.00 ಕ್ಕೆ ನಿಮ್ಮ ನೆಚ್ಚಿನ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News