Zeenat Aman On Live In Relationship: 80ರ ದಶಕದ ಟಾಪ್ ಬಾಲಿವುಡ್ ನಟಿ ಜೀನತ್ ಅಮನ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದು, ಅದು ಇದೀಗ ಭಾರಿ ಸಂಚಲನಕ್ಕೆ ಕಾರಣವಾಗಿದೆ. ಹೌದು, ತನ್ನ ಇತ್ತೀಚಿನ ಪೋಸ್ಟ್‌ನಲ್ಲಿ, ಹಿರಿಯ ನಟಿ ಲಿವ್-ಇನ್ ಸಂಬಂಧದ ಬಗ್ಗೆ ಮಹತ್ವದ ವಿಷಯ ಹಂಚಿಕೊಂಡಿದ್ದಾರೆ, ಅವರ ಹೇಳಿಕೆ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿದೆ. ಸಂಬಂಧ ಸಲಹೆ ರೂಪದಲ್ಲಿ ನಟಿ ತಮ್ಮ ಅಭಿಮಾನಿಗಳಿಗೆ ಇದನ್ನು ಹೇಳಿದ್ದಾರೆ.
ಲಿವ್ ಇನ್ ನಲ್ಲಿ ಇರುವುದು ಪಾಪವೇ?
ತಮ್ಮ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದುಕೊಂಡ ಜೀನತ್ - 'ಕಾಮೆಂಟ್ ವಿಭಾಗದಲ್ಲಿ ಸಂಬಂಧದ ಬಗ್ಗೆ ಸಲಹೆ ನೀಡಲು ನಿಮ್ಮಲ್ಲಿ ಯಾರಾದರೂ ನನ್ನನ್ನು ಕೇಳಿದ್ದರು. ಒಂದು ವೇಳೆ ಸಂಬಂಧದ ಬಗ್ಗೆ ನನ್ನ ಅಭಿಪ್ರಾಯವನ್ನು ನೀವು ತಿಳಿದುಕೊಳ್ಳಲು ಬಯಸಿದರೆ, ಮದುವೆಗೆ ಮೊದಲು ನೀವು ಯಾವುದೇ ವೆಚ್ಚದಲ್ಲಿ ಲಿವ್-ಇನ್ ಸಂಬಂಧದಲ್ಲಿರಬೇಕೆಂದು ಎಂದು ನಾನು ನಿಮಗೆ ಹೇಳುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ-Allu Arjun Lucky Number: ಜನರು 'ಡೆವಿಲ್ ಡಿಜಿಟ್' ಅಂತ ಕರಿಯುವ ಈ ಸಂಖ್ಯೆ ಅಲ್ಲು ಅರ್ಜುನ್ ಲಕ್ಕಿ ನಂಬರ್ ಅಂತೆ!
ಲಿವ್-ಇನ್ ಏಕೆ ಅಗತ್ಯ?
ಅಷ್ಟೇ ಅಲ್ಲ ಮದುವೆಗೂ ಮುನ್ನ ಲೀವ್ ಇನ್ ನ ಪ್ರಾಮುಖ್ಯತೆಯನ್ನು ಕೂಡ ಜೀನತ್ ಬಣ್ಣಿಸಿದ್ದಾರೆ. - 'ದಿನದ ಹೊತ್ತಿನಲ್ಲಿ ಕೆಲ ಗಂಟೆಗಳ ಕಾಲ ನಿಮ್ಮನ್ನು ಉತ್ತಮವಾಗಿ ಕಾಣುವಂತೆ ಮಾಡುವುದು ಸುಲಭ. ಆದರೆ ನೀವು ಅವರೊಂದಿಗೆ ಸ್ನಾನಗೃಹವನ್ನು ಹಂಚಿಕೊಳ್ಳಬಹುದೇ? ಪರಸ್ಪರ ಕೋಪವನ್ನು ಸಹಿಸಬಹುದೇ? ಪ್ರತಿದಿನ ರಾತ್ರಿ ಊಟದಲ್ಲಿ ಏನು ತಿನ್ನಬೇಕು ಅಥವಾ ಬಾರದು ಎಂಬುದು ನೀವು ಒಪ್ಪಿಕೊಳ್ಳುವುದು ಅಗತ್ಯವೇ? ಎಂಬೆಲ್ಲಾ ಪ್ರಶ್ನೆಗಳನ್ನು ನಿಮ್ಮನ್ನು ನೀವು ಕೇಳಿ ಎಂದಿದ್ದಾರೆ.
ಇದನ್ನೂ ಓದಿ-Viral Video: ಮಹಿಳೆಯ 'ನಾಗಿನ್' ನೃತ್ಯಕ್ಕೆ ಸಾಥ್ ನೀಡಿದ ನಾಗರ ಎರಡು ಗಂಡು ನಾಗರ ಹಾವುಗಳು! Watch Funny Video
ಸಮಾಜ ಅನೇಕ ವಿಷಯಗಳನ್ನು ಪಾಪ ಎಂದು ಪರಿಗಣಿಸುತ್ತದೆ
ಇದಕ್ಕೂ ಮುಂದುವರೆದು ಬರೆದುಕೊಂಡ ನಟಿ 'ನೀವು ಮೇಡ್ ಫಾರ್ ಈಚ್ ಅದರ್ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಮದುವೆಗೆ ಮುಂಚೆ ಒಟ್ಟಿಗೆ ವಾಸಿಸುವುದು ಸಮಾಜದ ದೃಷ್ಟಿಯಲ್ಲಿ ಪಾಪ ಎಂಬುದು ನನಗೆ ತಿಳಿದಿದೆ, ಆದರೆ ನಂತರ ಅದೇ ವಿಷಯವು ಮುನ್ನೆಲೆಗೆ ಬರುತ್ತದೆ, ಸಮಾಜವು ಅನೇಕ ವಿಷಯಗಳನ್ನು ಪಾಪವೆಂದು ಪರಿಗಣಿಸುತ್ತದೆ. ಜೀನತ್ ಅಮನ್ ಬಾಲಿವುಡ್‌ಗೆ ಅನೇಕ ಸೂಪರ್‌ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಈ ಚಿತ್ರಗಳಲ್ಲಿ 'ಸತ್ಯಂ ಶಿವಂ ಸುಂದರಂ', 'ಡಾನ್', 'ಹರೇ ರಾಮ ಹರೇ ಕೃಷ್ಣ', 'ಯಾದೋನ್ ಕಿ ಬಾರಾತ್', 'ಧರಂವೀರ್', 'ದೋಸ್ತಾನಾ', 'ಹೀರಾ ಪನ್ನಾ' ಮತ್ತು 'ಲಾವಾರಿಸ್' ಮತ್ತು ಅನೇಕ ಇತರ ಚಲನಚಿತ್ರಗಳು ಅವುಗಳಲ್ಲಿ ಶಾಮೀಲಾಗಿವೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ